ವಿಶ್ವಪರಿಸರ ದಿನಾಚರಣೆ ಪ್ರಯುಕ್ತ ಸಸಿನಾಟಿ ಮತ್ತು ಸಸಿವಿತರಣಾ ಕಾರ್ಯಕ್ರಮದ ಮೂಲಕ ಪರಿಸರ ಜಾಗೃತಿ ಮೂಡಿಸಿದ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ

ಶಿಡ್ಲಘಟ್ಟ: ವಿಶ್ವಪರಿಸರ ದಿನಾಚರಣೆಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶಿಡ್ಲಘಟ್ಟ ತಾಲ್ಲೂಕಿನ ಹೊಸಪೇಟೆಯಲ್ಲಿ ಸಸಿ ನಾಟಿ ಮತ್ತು ಸಸಿ ವಿತರಣಾ ಕಾರ್ಯಕ್ರಮವನ್ನು ನಡೆಸಲಾಯಿತು

ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ವಸಂತ್ ಬಿ ಯವರು ಚನ್ನಕೇಶವ ದೇವಸ್ಥಾನದ ವಠಾರದಲ್ಲಿ ಸಸಿನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ವಿಶ್ವದಲ್ಲಿ ಮನುಷ್ಯ ಜೀವಿ ಏಕಾಂಗಿಯಲ್ಲ ಅವನ ಸುತ್ತ- ಮುತ್ತ ಪ್ರಾಣಿ- ಪಕ್ಷ, ಕಾಡು ಮರ ಕ್ರಿಮಿ ಕೀಟ ನದಿ, ಹಳ್ಳ, ಸರೋವರ, ಸಮುದ್ರ ಸಾಗರ ಗುಡ್ಡ- ಬೆಟ್ಡ, ಗಾಳಿ- ಮಳೆ – ನೀರು ಮಣ್ಣು ಕಲ್ಲು , ಆಕಾಶ ಬೆಳಕು ಇವೆಲ್ಲವುಗಳು ಇವೆ.

READ ALSO

ನಮ್ಮ ಸುತ್ತಮುತ್ತಲೂ ಇರುವ ಪರಿಸರದಲ್ಲಿ ಹರಿಯುವ ನೀರು, ಹಣ್ಣು ಹಂಪಲು ನೀಡುವ ಸಸ್ಯಗಳನ್ನು ವಾಸಿಸಲು ಇರುವ ನೆಲ ಗಿಡ- ಮರಗಳು ಬೆಳೆಯುವ ಹಣ್ಣು ಇವುಗಳೆಲ್ಲ ಇರುವುದು ನಮ್ಮ ಬಳಕೆಗಾಗಿ, ಈ ಎಲ್ಲವನ್ನೂ ಚೆನ್ನಾಗಿಟ್ಟುಕೊಳ್ಳಬೇಕಾದುದು ನಮ್ಮ ಕರ್ತವ್ಯವಾಗಿದೆ ಎಂದು ಅಭಿಮತ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಜ್ಞಾನವಿಕಾಸ ಕೇಂದ್ರದ ಸದಸ್ಯರುಗಳಿಗೆ ಸಸಿ ವಿತರಣೆ ಮಾಡಲಾಯಿತು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಧು, ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಗ್ರಾಮ ಪಂಚಾಯತ್ ಸದಸ್ಯರಾದ ಸುರೇಶ್, ಮುಖ್ಯ ಶಿಕ್ಷಕರಾದ ನೇತ್ರಾವತಿ,ಹಾಗೂ ಜ್ಞಾನವಿಕಾಸ ಸಮನ್ವಯಾಧಿಕಾರಿ ಲಕ್ಷ್ಮಿ ಮೇಲ್ವಿಚಾರಕರಾದ ರಂಗಸ್ವಾಮಿ ಸೇವಾಪ್ರತಿನಿಧಿ ಸುಶೀಲಮ್ಮನವರು ಸ್ವಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.