ಕರಾವಳಿಯ ಪಶ್ಚಿಮಘಟ್ಟದ ತಟದಲ್ಲಿ ವರುಣಾರ್ಭಟ

ಬೆಳ್ತಂಗಡಿ: ಕರಾವಳಿಯ ಪಶ್ಚಿಮಘಟ್ಟದ ತಟದಲ್ಲಿ ಭಾರಿ ಮಳೆ ದಿಡುಪೆ ಕುಕ್ಕಾವು ಪರಿಸರದಲ್ಲಿ ಸಂಜೆ 5 ರಿಂದ ಭಾರಿ ಮಳೆ ಪ್ರಾರಂಭವಾಗಿದ್ದು ಧಾರಾಕಾರವಾಗಿ ಎಡೆಬಿಡದೆ ಮಳೆ ಸುರಿಯುತ್ತಿದೆ.

ಮಳೆಗಾಲ ಪ್ರಾರಂಭವಾಗಿ ಇನ್ನು ಕಲವೆ ದಿನಗಳಾಗಿರುವ ನಡುವೆಯೇ ದಕ್ಷಿಣಕನ್ನಡ ಜಿಲ್ಲೆಯ ನದಿಗಳಲ್ಲಿ ಪ್ರವಾಹ ತಲೆದೊರಲಾರಂಭಿಸಿದೆ. ಇಂದು ಸಂಜೆ ಬೆಳ್ತಂಗಡಿ ತಾಲೂಕಿನ ದಿಡುಪೆ,ಕುಕ್ಕಾವು ಮಿತ್ತಬಾಗಿಲು, ಮಲವಂತಿಗೆ, ಚಾರ್ಮಾಡಿ ಮೊದಲಾದ ಕಡೆಗಳಲ್ಲಿ ಸತತವಾಗಿ ಸುರಿದ ಗುಡುಗು ಸಹಿತ ಮಳೆಗೆ ನೇತ್ರಾವತಿ ಹಾಗೂ ಮೃತ್ಯುಂಜಯ ನದಿಗಳ ನೀರಿನ ಮಟ್ಟದಲ್ಲಿ ಭಾರೀ ಏರಿಕೆ ಕಂಡುಬಂದಿದೆ

READ ALSO

ಕಳೆದ ಬಾರಿಯ ಮಳೆಗಾಲದಲ್ಲಿ ಪ್ರವಾಹ ಇದೇ ಪ್ರದೇಶದಲ್ಲಿ ಭಾರೀ ಹಾನಿ ಮಾಡಿತ್ತು. ಈ ಬಾರಿ ಮಳೆಗಾಲ ಶುರುವಾಗುವ ಮೊದಲೇ ನದಿಗಳ ನೀರು ಹೆಚ್ಚಾಗಿ ಹರಿಯುತ್ತಿರುವುದು ಸ್ಥಳೀಯ ನಿವಾಸಿಗಳಲ್ಲಿ ಭಾರೀ ಆತಂಕವನ್ನು ಸೃಷ್ಠಿಸಿದೆ. ಕಳೆದ ಬಾರಿ ನೆರೆ ಸಂದರ್ಭದಲ್ಲಿ ನದಿಯಲ್ಲಿ ಮರಳು ಹಾಗೂ ಕಸಕಡ್ಡಿ ಮರಗಳನ್ನು ತೆರವುಗೊಳಿಸದೇ ಇರುವುದರಿಂದ ಈ ಬಾರಿಯ ಮಳೆಗೆ ನೆರೆ ಬರಲು ಕಾರಣವಾಗಬಹುದು ಎಂದು ಜನರು ಇನ್ನಷ್ಟು ಅತಂಕ ಎದುರಿಸುವಂತಾಗಿದೆ. ಅಧಿಕಾರಿಗಳ ನಿರ್ಲಕ್ಷಕ್ಕೆ ಇದೊಂದು ಕಾರಣವಾಗಬಹುದು ಎಂದು ಜನರಾಡಿಕೊಳ್ಳುತ್ತಿದ್ದಾರೆ.