TRENDING
Next
Prev

50 ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆಯ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜಾರವರು ನೆರವೇರಿಸಿದರು

ಬೆಳ್ತಂಗಡಿ: ಮಲವಂತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿದ್ಯಾನಗರ, ನಂದಿಕಾಡು, ಸಿಂಗನಾರು ಪರಿಶಿಷ್ಟ ಪಂಗಡಗಳ ಸುಮಾರು 50 ಲಕ್ಷ ರೂ ವೆಚ್ಚದ ಕಾಂಕ್ರೀಟ್ ರಸ್ತೆಯನ್ನು ಶಾಸಕ ಹರೀಶ್ ಪೂಂಜ ಉದ್ಘಾಟಿಸಿದರು.ಕಳೆದ 65 ವರುಷಗಳಿಂದ ರಸ್ತೆಗಾಗಿ ಹಲವಾರ ಬಾರಿ ಶಾಸಕರುಗಳಿಗೆ ,ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಸ್ಪಂದಿಸಿರಲಿಲ್ಲ .ಅದರೆ ಶಾಸಕ ಹರೀಶ್ ಪೂಂಜರಿಗೆ ರಸ್ತೆಯ ಬಗ್ಗೆ ಮನವಿ ಮಾಡಿದಾಗ ತಕ್ಷಣ ಸ್ಪಂದಿಸಿ ಕೇವಲ 6 ತಿಂಗಳಲ್ಲಿ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಿ ಆ ಪರಿಸರದ ಜನತೆಯ ಕಷ್ಟವನ್ನು ದೂರ ಮಾಡಿದ್ದಾರೆ.

ಶಾಸಕರ ಈ ಕಾರ್ಯವನ್ನು ಮುಕ್ತಕಂಠದಿಂದ ಮೆಚ್ಚುಗೆ ವ್ಯಕ್ತಪಡಿಸಿದ ಸ್ಥಳೀಯರು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು. ಕಳೆದ ಮಳೆಗಾಲದಲ್ಲಿ ಬಂದ್ದ ನೆರೆ ಸಂದರ್ಭದಲ್ಲೂ ನೆರೆಯಿಂದ ಸಂಕಟದಲ್ಲಿದ್ದಾಗ ಶಾಸಕರು ನಮ್ಮೊಂದಿಗೆ ಇದ್ದು ನಮ್ಮ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತ ಬಂದಿದ್ದಾರೆ ಇಂತಹ ಶಾಸಕರು ನಮಗೆ ಸಿಕ್ಕಿದ್ದು ನಮ್ಮ ಅದೃಷ್ಟ ಎಂದು ಎಂದು ಶಾಸಕರ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೊಟ್ಯಾನ್, ರೈತ ಮೋರ್ಚಾ ಅದ್ಯಕ್ಷ ಜಯಂತ ಗೌಡ, ಜಿ.ಪಂ ಸದಸ್ಯೆ ಸೌಮ್ಯಲತಾ ಜಯಂತ್ ಗೌಡ, ಮಿತ್ತಬಾಗಿಲು ಪ.ಪಂ ಅಧ್ಯಕ್ಷ ಭಾಸ್ಕರ ಪೂಜಾರಿ,ಸದಸ್ಯ ಕೇಶವ ಎಮ್ ಕೆ, ಅಂಡಿಂಜೆ ಗ್ರಾ.ಪಂ ಅಧ್ಯಕ್ಷ ಮೋಹನ್,ಪ್ರಮುಖರಾದ ಜಯಂತ ಹೆಗ್ಡೆ ,ದಿನೇಶ್ ಗೌಡ, ಡೀಕಯ್ಯ ತೀಕ್ಷಿತ್, ಪ್ರಮೋದ್, ಸದಾಶಿವ,ಇನ್ನಿತರರು ಉಪಸ್ಥಿತರಿದ್ದರು.

READ ALSO

ಸೇತುವೆ ನಿರ್ಮಿಸಿಕೊಡುವಂತೆ ಶಾಸಕರಿಗೆ ಮನವಿ

ಸುಮಾರು 20 ಮನೆಗಳಿಗೆ ಸಂಪರ್ಕ ಕಲ್ಪಿಸಲು ನಂದಿಕಾಡು ಕೊಟ್ರಡ್ಕ ಹೊಳೆಗೆ ಇಂದ್ಲಾಜೆ ಗುಂಡಿ ಎಂಬಲ್ಲಿ ಸೇತುವೆ ನಿರ್ಮಿಸಲು ಶಾಸಕರಿಗೆ ಸ್ಥಳೀಯ ನಿವಾಸಿಗಳು ಮನವಿ ಮಾಡಿದರು.ಇವರ ಮನವಿಗೆ ಸ್ಪಂದಿಸಿದ ಶಾಸಕರು ಮುಂದಿನ ದಿನಗಳಲ್ಲಿ ಸೇತುವೆಯ ಭರವಸೆಯನ್ನು ನೀಡಿದರು ಈ ಸಂದರ್ಭದಲ್ಲಿ ಸ್ಥಳೀಯರಾದ ಡೀಕಯ್ಯmk ,ಸುಧಾಕರ ಮಲ್ಲ,ಪದ್ಮ ಎಂ ಕೆ ಉಪಸ್ಥಿತರಿದ್ದರು.