ಅಕಾಲಿವಾಗಿ ನಿಧನರಾದ ಖ್ಯಾತ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ಚಿರು ಅವರ ತಾತಾ ಖ್ಯಾತ ಖಳನಾಯಕ ದಿ. ಶಕ್ತಿ ಪ್ರಸಾದ್, ದಕ್ಷಿಣ ಭಾರತದ ಖ್ಯಾತ ನಾಯಕ ನಟ ಅರ್ಜುನ್ ಸರ್ಜಾ, ಸಹೋದರ ಧ್ರುವ ಸರ್ಜಾ ಅವರು ಮಾತ್ರವಲ್ಲದೇ, ಪತ್ನಿ ಮೇಘನಾ ರಾಜ್ ಕೂಡ ಚಿತ್ರರಂಗದವರಾಗಿದ್ದಾರೆ.

ಚಿರಂಜೀವಿ ಸರ್ಜಾ ಕಿರಿಯ ವಯಸ್ಸಲ್ಲೇ ಬಾರದ ಲೋಕಕ್ಕೆ ಪಯಣ ಬೆಳೆಸಿರುವುದು ಕುಟುಂಬಕ್ಕೆ ಮಾತ್ರವಲ್ಲ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅರ್ಜುನ್ ಸರ್ಜಾ ಮತ್ತು ಅವರ ಕುಟುಂಬಸ್ಥರು ಚೆನ್ನೈನಲ್ಲಿದ್ದು, ಬೆಂಗಳೂರಿಗೆ ಆಗಮಿಸಲು ಸಮಯ ಬೇಕಿದೆ ಹೀಗಾಗಿ ನಾಳೆ ಬೆಳಿಗ್ಗೆ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಶಕ್ತಿ ಪ್ರಸಾದ್ ಅವರ ಹುಟ್ಟೂರು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.