ಕೇಶವೇಂದ್ರ ತೀರ್ಥ ಸ್ವಾಮೀಜಿ 350 ನೇ ಪುಣ್ಯ ತಿಥಿ ವರ್ಷ ಆಚರಣೆ 350 ಶ್ರೀಗಂಧದ ಗಿಡ ವಿತರಣೆ

ಕೋಟೇಶ್ವರ: ಶ್ರೀ ಕಾಶೀ ಮಠ ಸಂಸ್ಥಾನ ದ ಗುರು ಪರಂಪರೆಯಲ್ಲಿ   ದ್ವಿತೀಯ ಯತಿವರ್ಯರಾದಶ್ರೀಮದ್ ಕೇಶವೇಂದ್ರ ತೀರ್ಥ ಸ್ವಾಮೀಜಿಯವರ   350ನೇ ಪುಣ್ಯ ತಿಥಿ ವರ್ಷ ಆಚರಣೆ ಸವಿ ನೆನಪಿಗಾಗಿ ಸುಮಾರು 350 ಶ್ರೀ ಗಂಧದ ಗಿಡಗಳನ್ನು   ಪ್ರಸ್ತುತ ಶ್ರೀ ಸಂಸ್ಥಾನದ ಪೀಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು  ಕೋಟೇಶ್ವರ ಶ್ರೀ ಪಟ್ಟಾಭಿರಾಮಚಂದ್ರ ದೇವಸ್ಥಾನದಲ್ಲಿ ವಿತರಿಸಿದರು.

ಸಮಾಜದ ಎಲ್ಲಾ ದೇವಳಗಳಿಗೆ ಶ್ರೀಗಳವರ ಅಮೃತ ಹಸ್ತಗಳಿಂದ ನೀಡಲಾಗುವುದು .  ಜಿ . ಯಸ್ . ಬಿ ದೇವಸ್ಥಾನಗಳ ಒಕ್ಕೂಟದ ಅಧ್ಯಕ್ಷ ಲೆಕ್ಕ ಪರಿಶೋಧಕ ಎಂ . ಜಗನ್ನಾಥ್ ಕಾಮತ್ ಮತ್ತು ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ , ಕೋಟಾ ,  ಕೋಟೇಶ್ವರ, ಚೆಂಪಿ ,  ದೇವಳದ ಆಡಳಿತ ಮಂಡಳಿ   ಪದಾಧಿಕಾರಿಗಳು ಹಾಗೂ ಈ ಗಂಧದ ಗಿಡಗಳ ಸೇವಾಧಾರರಾದ  ಯು . ಸುರೇಂದ್ರ ನಾಯಕ್ ಉಡುಪಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .

READ ALSO