ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಸುರ್ಯ ಅಲಿಂಗಿರ ನಾರಾಯಣ ಶೆಟ್ಟಿಯವರ ಮಗ ಯೋಧ ಸಂದೇಶ್ ಶೆಟ್ಟಿ(34) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಉತ್ತರ ಪ್ರದೇಶದ ಮಥುರಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಜೂ 12 ರಾತ್ರಿ ಎದೆನೋವು ಎಂದು ತಿಳಿಸಿದಾಗ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ರಾತ್ರಿ 11-30 ಗಂಟೆಗೆ ಸಾವನ್ನಪ್ಪಿರುವ ಮಾಹಿತಿ ತಿಳಿದು ಬಂದಿದೆ ಭಾರತೀಯ ಸೇನೆಯಲ್ಲಿ14 ವರ್ಷಗಳಿಂದ ಸೇವೆಯಲ್ಲಿದ್ದ ಇವರು ರಜೆಯಲ್ಲಿ ಊರಿಗೆ ಬಂದಿದ್ದರು ಇದೇ ಜೂನ್ 9 ತಾರೀಕಿಗೆ ಕರ್ತವ್ಯಕ್ಕೆ ಹಿಂದಿರುಗಿದ್ದು ಕ್ವಾರಂಟೈನ್ ನಲ್ಲಿದ್ದರು ಎಂದು ತಿಳಿದುಬಂದಿದೆ.

ಸೋಮವಾರದಂದು ಊರಿಗೆ ಅವರ ಪಾರ್ಥಿವ ಶರೀರ ಆಗಮಿಸುವ ನಿರೀಕ್ಷೆ ಇದೆ. ಮೃತರು ತಂದೆ, ತಾಯಿ, ತಮ್ಮ, ಅಣ್ಣ ಮತ್ತು ತಂಗಿಯನ್ನು ಅಗಲಿದ್ದಾರೆ.