ಮೂಡುಬಿದಿರೆ: ಮಹಾರಾಷ್ಟ್ರದಿಂದ ಬಂದ ವ್ಯಕ್ತಿಯೊಬ್ಬರು ದಿನಾಂಕ20 -05-2020 ರಿಂದ ಮೂಡುಬಿದಿರೆ ಕಡಂದಲೆ ಶಾಲೆಯ ಕ್ವಾರೆಂಟೈನ್ ಕೇಂದ್ರಕ್ಕೆ ದಾಖಲಾಗಿ ವಾಸ್ತವ್ಯ ಇದ್ದು, ದಿನಾಂಕ 21-05-2020 ರಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿರುತ್ತದೆ. ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿರುವುದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿರುತ್ತದೆ.

ಹೋಟೆಲ್ ಕಾರ್ಮಿಕರಾಗಿದ್ದ ಇವರು ಬುಧವಾರ ರಾತ್ರಿ ಮುಂಬೈಯಿಂದ ಬಂದು ಮೂಡಬಿದ್ರಿ ಸಮೀಪದ ಕಡಂದಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದರು.
ಮೃತದೇಹವನ್ನು ಕೋವಿಡ್ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ.
ಸ್ಥಳಕ್ಕೆ ಮಂಗಳೂರು ಉಪವಿಭಾಗಾಧಿಕಾರಿ ಮದನ್ ಭೇಟಿ ನೀಡಿರುತ್ತಾರೆ. ಮೃತರು ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ