ಬೆಳ್ತಂಗಡಿ ವೃತ್ತ ಪೊಲೀಸ್ ಉಪನಿರೀಕ್ಷಕರುಗಳ ಧಿಡೀರ್ ವರ್ಗಾವಣೆ

READ ALSO

ಬೆಳ್ತಂಗಡಿ :ಲಾಕ್ ಡೌನ್ ಬೆನ್ನಲೇ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬೆಳ್ತಂಗಡಿ ವೃತ್ತ ಪೊಲೀಸ್ಉಪನಿರೀಕ್ಷಕರುಗಳ ಧಿಡೀರ್ ರ್ವರ್ಗಾವಣೆ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆದೇಶಿಸಿರುತ್ತಾರೆ .
ಧರ್ಮಸ್ಥಳ ಠಾಣೆಯ ಪಿಎಸ್ಐ ಓಡಿಯಪ್ಪ ಗೌಡರವರನ್ನು ಪುಂಜಾಲಕಟ್ಟೆ ಪಿಎಸ್ಐ (ಅಪರಾಧ) ಅಗಿ ವರ್ಗಾಯಿಸಿ ,ಧರ್ಮಸ್ಥಳ ಠಾಣೆಗೆ ಬೆಳ್ತಂಗಡಿ ಸಂಚಾರ ಠಾಣೆಯ ಪಿಎಸ್ಐ ಪವನ್ ನಾಯಕ್ ಅವರನ್ನು ನೇಮಕ ಮಾಡಲಾಗಿದೆ .ಪುಂಜಾಲಕಟ್ಟೆ ಠಾಣೆಯ ಪಿಎಸ್ಐ (ಅಪರಾಧ) ಕುಮಾರ್ ಸಿ ಕಾಂಬ್ಳೆ ಅವರನ್ನು ಬೆಳ್ತಂಗಡಿ ಸಂಚಾರ ಠಾಣೆಗೆ ವರ್ಗಾಯಿಸಿ ಆದೇಶಿಸಿರುತ್ತಾರೆ .