ಯಕ್ಷ ಕಲಾವಿದರಿಗೆ ಗೌರವ ಸಮರ್ಪಣೆಯ ಜೊತೆ ಅಗತ್ಯ ವಸ್ತುಗಳ ಕಿಟ್ ವಿತರಣೆ

ಬೆಳ್ತಂಗಡಿ: ಯಕ್ಷಗಾನ ಕರಾವಳಿ ಭಾಗದ ಮಣ್ಣಿನ ಸಾಂಪ್ರದಾಯಿಕ ಕಲೆ ಕೊರೊನಾ ಮಹಾ ಮಾರಿಯಿಂದ ಯಕ್ಷಗಾನ ಕಲೆಯನ್ನೇ ಜೀವನಾಧಾರವನ್ನಾಗಿಸಿದ ಕಲಾವಿದರಿಗೆ ದಿಕ್ಕು ತೋಚದ ಸ್ಥಿತಿ ಉಂಟಾಗಿದ್ದು ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ವತಿಯಿಂದ ತಾಲೂಕಿನ 10 ಯಕ್ಷಗಾನ ಕಲಾವಿದರನ್ನು ಗುರುತಿಸಿ ಅಗತ್ಯ ವಸ್ತುಗಳ ಕಿಟ್ ಹಾಗೂ ಗೌರವ ಸಮರ್ಪಿಸಲಾಯಿತು.

ದಿನಾಂಕ-29-04-2020ನೇ ಬುಧವಾರ ಅಂತರರಾಷ್ಟ್ರೀಯ ನೃತ್ಯ ದಿನದಂದು  ರೋಟರಿ ಕ್ಲಬ್  ಬೆಳ್ತಂಗಡಿ ಇದರ ವತಿಯಿಂದ ತಾಲೂಕಿನ ಹತ್ತು ಮಂದಿ ಯಕ್ಷಗಾನ ಕಲಾವಿದರನ್ನು ಗುರುತಿಸಿ ಒಟ್ಟು ರೂಪಾಯಿ ಹತ್ತು ಸಾವಿರ ಮೌಲ್ಯದ ಆಹಾರ ಸಾಮಗ್ರಿಗಳನ್ನು ವಿತರಿಸಿದರು.

ಆಹಾರದ ಕಿಟ್ ಗಳ ಪ್ರಾಯೋಜಕತ್ವವನ್ನು ಬೆಂಗಳೂರಿನ ಶ್ರೀಮತಿ ಮತ್ತು ಶ್ರೀ ಅನೀಶ್, ರೋ ಕೆ.ಪಿ ಪ್ರಸಾದ್ ,ಬಿ.ಕೆ ಗೋಪಾಲ್ ರಾವ್ ಹಾಗೂ ಬಿ.ಕೆ ವಿಘ್ನೇಶ್ ಕುಮಾರ್ ಕಿಲ್ಲೂರು ವಹಿಸಿದ್ದರು. ಗೌರವಾರ್ಪಣೆಯ ಪ್ರಾಯೋಜನೆಯನ್ನು ಯೋಗೀಶ್ ಭಿಡೆ ಹಾಗೂ ಅನೆಟ್ ಅನುಷಾ ಮಚ್ಚಿಮಲೆ ನೀಡಿದ್ದರು.

ಈ ಪ್ರಶಂಸನೀಯ ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಉಜಿರೆ ಅಶೋಕ್ ಭಟ್, ರೋಟರಿ ಸದಸ್ಯರಾದ ರೋ. ಕೆ. ಪಿ ಪ್ರಸಾದ್, ರೋ ಪ್ರಕಾಶ್ ಪ್ರಭು, ರೋ. ಶ್ರೀಧರ್ ಕೆ.ವಿ, ರೋ ಶಶಿಕಾಂತ್ ಡೋಂಗ್ರೆ, ರೋ. ಬಿ. ಕೆ ಧನಂಜಯ್ ರಾವ್, ಶ್ರೀಮತಿ ರಾಜಶ್ರೀ, ಶ್ರೀಮತಿ ಗಾಯತ್ರಿ ಶ್ರೀಧರ್, ವಿಷ್ಣುಮೂರ್ತಿ ಭಟ್ ಹಾಗೂ ಯಕ್ಷ ಭಾರತಿಯ ಪ್ರತಿನಿಧಿಯಾಗಿ ಸಂಚಾಲಕ ಮಹೇಶ್ ಕನ್ಯಾಡಿ ಭಾಗವಹಿಸಿದ್ದರು.

Spread the love
  • Related Posts

    “ಮಳೆಯ ಸವಿಯಲ್ಲಿ ಶಿರಾಡಿಯ ಕೆ.ಟಿ.: ರುಚಿ ಮತ್ತು ಸ್ನೇಹದ ಅಪೂರ್ವ ಸಂಗಮ”

    ಶಿರಾಡಿಯ ಕೆ.ಟಿ. – ಮಳೆಯ ನಡುವೆ ಸವಿದ ಅಪರೂಪದ ರುಚಿ ತುಂತುರು ಮಳೆ ಹನಿಗಳ ನಡುವೆ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಓಡಾಟ ನಡೆಸುವುದು ಮನಸ್ಸಿಗೆ ವಿಶಿಷ್ಟ ಮುದ ನೀಡುತ್ತದೆ. ಅದರಲ್ಲೂ ಸ್ನೇಹಿತರೊಂದಿಗೆ ಹರಟೆಯಾಡುತ್ತಾ ಗುಂಡ್ಯ ದಾಟಿ ಶಿರಾಡಿಯ ಕಡೆಗೆ ಸಾಗುವ ವೇಳೆಗೆ…

    Spread the love

    ಎತ್ತಿನಭುಜಕ್ಕೆ ಸಿಡಿಲಿನ ಸ್ಪರ್ಶ: ಪ್ರಕೃತಿಯ ಶಕ್ತಿ ಮತ್ತು ಸೌಂದರ್ಯದ ಅಪೂರ್ವ ಸಂಗಮ

    🖊️• ಬರಹ: ರಾಜೇಶ್ ಎಂ ಕಾನರ್ಪ📸ಚಿತ್ರ: ಸುಕೇಶ್ ಜೈನ್ ಧರ್ಮಸ್ಥಳ “ಮೋಡಗಳ ಮಡಿಲಲ್ಲಿ ಮರೆತಿದ್ದ ಎತ್ತಿನಭುಜ, ಒಂದು ಕ್ಷಣ ಸಿಡಿಲಿನ ಹೊಳಪಿಗೆ ತೇಲಿತು. ಪ್ರಕೃತಿ ತನ್ನ ಶಕ್ತಿಯನ್ನು ಪ್ರದರ್ಶಿಸಿದ ಆ ಕ್ಷಣ, ಕಣ್ಣು ಕಂಡ ಸೌಂದರ್ಯ ಕ್ಯಾಮೆರಾದಲ್ಲಿ ಶಾಶ್ವತವಾಯಿತು.” ಪಶ್ಚಿಮ ಘಟ್ಟಗಳ…

    Spread the love

    You Missed

    ಮನೆ ಮೇಲೆ ತೆಂಗಿನಮರ ಬಿದ್ದು ಹಾನಿ: ಧರ್ಮಸ್ಥಳ ಶೌರ್ಯ ಘಟಕದಿಂದ ನೆರವು

    • By admin
    • June 5, 2026
    • 55 views
    ಮನೆ ಮೇಲೆ ತೆಂಗಿನಮರ ಬಿದ್ದು ಹಾನಿ: ಧರ್ಮಸ್ಥಳ ಶೌರ್ಯ ಘಟಕದಿಂದ ನೆರವು

    “ಗಡಾಯಿಕಲ್ಲಿನಲ್ಲಿ ಚಾರಣಕ್ಕೆ ಬಂದ ಯುವಕನ ಕಾಲು ಟ್ವಿಸ್ಟ್: ಮೂರು ಗಂಟೆಗಳ ಸಾಹಸಮಯ ರಕ್ಷಣಾ ಕಾರ್ಯಾಚರಣೆ”

    • By admin
    • June 4, 2026
    • 73 views
    “ಗಡಾಯಿಕಲ್ಲಿನಲ್ಲಿ  ಚಾರಣಕ್ಕೆ ಬಂದ ಯುವಕನ ಕಾಲು ಟ್ವಿಸ್ಟ್: ಮೂರು ಗಂಟೆಗಳ ಸಾಹಸಮಯ ರಕ್ಷಣಾ ಕಾರ್ಯಾಚರಣೆ”

    “ಮಳೆಯ ಸವಿಯಲ್ಲಿ ಶಿರಾಡಿಯ ಕೆ.ಟಿ.: ರುಚಿ ಮತ್ತು ಸ್ನೇಹದ ಅಪೂರ್ವ ಸಂಗಮ”

    • By admin
    • June 2, 2026
    • 35 views
    “ಮಳೆಯ ಸವಿಯಲ್ಲಿ ಶಿರಾಡಿಯ ಕೆ.ಟಿ.: ರುಚಿ ಮತ್ತು ಸ್ನೇಹದ ಅಪೂರ್ವ ಸಂಗಮ”

    ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅವರಿಗೆ ಗೌರವ ಸಮರ್ಪಣೆ

    • By admin
    • June 2, 2026
    • 33 views
    ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಸಾಧಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅವರಿಗೆ ಗೌರವ ಸಮರ್ಪಣೆ

    ಕಾರಿಗೆ ಲಾರಿ ಡಿಕ್ಕಿ, 5 ಮಂದಿಗೆ ಗಂಭೀರ ಗಾಯ ನಜ್ಜುಗುಜ್ಜಾದ ಕಾರಿನಿಂದ ಗಾಯಾಳುಗಳ ರಕ್ಷಣೆ, ಉಪ್ಪಿನಂಗಡಿ ಕೂಟೇಲು ಸಮೀಪದಲ್ಲಿ ನಡೆದ ಘಟನೆ

    • By admin
    • June 1, 2026
    • 103 views

    • 178 views
    ಎತ್ತಿನಭುಜಕ್ಕೆ ಸಿಡಿಲಿನ ಸ್ಪರ್ಶ: ಪ್ರಕೃತಿಯ ಶಕ್ತಿ ಮತ್ತು ಸೌಂದರ್ಯದ ಅಪೂರ್ವ ಸಂಗಮ