ಲಾಕ್ ಡೌನ್ ಸಂಕಟದಲ್ಲಿದ್ದ ಬಡ ಕುಟುಂಬಗಳ ನೆರವಿಗೆ ಬಂದ ಜನಸ್ಸೇಹಿ ಬೀಟ್ ಪೋಲೀಸ್ ಶಶಿಕುಮಾರ್

ಕಡಿರುದ್ಯಾವರ: ವಿಶ್ವಾದ್ಯಂತ ಕೊರೋನಾ ಮಹಾಮಾರಿ ಸೋಂಕು ಹರಡುತ್ತಿರುವ ಹಿನ್ನೆಲೆ ದೇಶವೇ ಲಾಕ್ ಡೌನ್ ಜಾರಿಯಲ್ಲಿದ್ದು ಈ ಸಂದರ್ಭದಲ್ಲಿ ಗ್ರಾಮ ಹಲವು ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳ ಸಹಾಯ ಹಸ್ತ ಮಾಡಿದ ಬೆಳ್ತಂಗಡಿ ಠಾಣೆಯ ಸಿಬ್ಬಂದಿ ಶಶಿಕುಮಾರ್.

ಮನೆಯೊಳಗಿನ ಜಗಳದಿಂದ ಹಿಡಿದು ದೇಶದೊಳಗಿನ ಎಲ್ಲಾ ಆಗುಹೋಗುಗಳಿಗೆ ಖಾಕಿಗಳು ಬೇಕೇ ಬೇಕು. ಹಾಗಾಗಿ ಖಾಕಿ ಅಂದರೆ ಪೋಲೀಸರಿಗೆ ಕಠಿಣ ಗುಣಗಳನ್ನು ಮೈಗೂಡಿಸಿಗೊಂಡಿರುವುದು ಅನಿವಾರ್ಯವಾಗಿರುತ್ತದೆ. ಆದರೆ, ಮಾನವೀಯತೆ ಮೇಲೈಸಿಕೊಂಡ ಆರಕ್ಷಕರು ಇದ್ದಾಗ ಸಮಾಜದಲ್ಲೊಂದು ಬದಲಾವಣೆ ಆಗೋದು ಖಂಡಿತ. ಇದಕ್ಕೊಂದು ಸಾಕ್ಷಾತ್ ಉದಾಹರಣೆ, ಕಡಿರುದ್ಯಾವರ ಗ್ರಾಮದ ಬೀಟ್ ಪೋಲೀಸ್ ಶ್ರೀ ಶಶಿಕುಮಾರ್.

ಮೂಲತ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರಾದ ಶ್ರೀ ಶಶಿಕುಮಾರ್ ಅವರು ಬೆಳ್ತಂಗಡಿ ಆರಕ್ಷಕ ಠಾಣೆಯಲ್ಲಿ ಕರ್ತವ್ಯನಿರ್ವಹಿಸುತಿದ್ದು, ತಾಲೂಕಿನ ಕಡಿರುದ್ಯಾವರ ಗ್ರಾಮದಲ್ಲಿ ಬೀಟ್ ಪೋಲೀಸ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾರ್ಯನಿರ್ವಹಿಸುತ್ತಿರುವ ಗ್ರಾಮದಲ್ಲಿ ಪ್ರಾಮಾಣಿಕ ಸೇವೆ ನೀಡುತ್ತಾ, ಗ್ರಾಮದ ಜನರ ಪ್ರೀತಿಪಾತ್ರರಾಗಿರುವ ಇವರು ಕೊರೋನ ಮಹಾಮಾರಿಯ ವಿರುಧ್ಧದ ಸಮರದ ನಿಮಿತ್ತದ ಲಾಕ್ಡೌನ್ ನಿಂದ ತತ್ತರಿಸಿದ ಜನರ ಸಂಕಷ್ಟಕ್ಕೆ ಸ್ಪಂಧಿಸಿದ್ದಾರೆ. ಗ್ರಾಮದ ಕಡುಬಡತನದಲ್ಲಿದ್ದ ಮನೆಗಳಿಗೆ ತನ್ನ ವೈಯಕ್ತಿಕ ಸಹಾಯ ಹಸ್ತ ಚಾಚಿದ್ದಾರೆ. ಈ ನಿಟ್ಟಿನಲ್ಲಿ ಸ್ಪಂಧಿಸುತ್ತಿರುವಾಗ ಗ್ರಾಮದಲ್ಲಿ ಈ ರೀತಿಯಾದ ಇನ್ನು ಹಲವಾರು ಕುಟುಂಬಗಳಿವೆಂಬುದನ್ನು ತಿಳಿದು ಶ್ರೀ ಶಶಿಕುಮಾರ್ ಅವರು ಗ್ರಾಮದ ಒಂದಷ್ಟು ದಾನಿಗಳನ್ನು ಸಂಪರ್ಕಿಸಿ, ತೀರಾ ಅಗತ್ಯವಿರುವ ಹದಿನೈದು ಕುಟುಂಬಗಳಿಗೆ ದಿನಸಿ ಸಾಮಾನು ಕಿಟ್ ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಸತ್ಕಾರ್ಯದಲ್ಲಿ ಇವರೊಂದಿಗೆ ಶ್ರೀ ಲಿಜೋ ಸ್ಕರಿಯ, ಹೇಡ್ಯ, ಶ್ರೀ ಸುದರ್ಶನ್ ರಾವ್, ಗಜಂತೋಡಿ, ಶ್ರೀಮತಿ ಬೇಬಿ ಸದಾಶಿವ ಗೌಡ ಕುದುರು, ಶ್ರೀ ಹರಿಪ್ರಸಾದ್ ಭಟ್ ಹಿತ್ತಿಲಕೋಡಿ, ಶ್ರೀ ಶಂಕರ್ ಭಟ್ ಬಸವದಡ್ಡು ಹಾಗೂ ಶ್ರೀ ಸೂರಜ್ ಅಡೂರು ಇವರುಗಳು ಸಹಕರಿಸಿದ್ದಾರೆ.

Spread the love
  • Related Posts

    ಸ್ಪರ್ಧಿಗಳ ಕೊಸರಾಟಕ್ಕೆ ಕಿಚ್ಚ ಗರಂ ಬಿಗ್ ಬಾಸ್ ವೇದಿಕೆಯಿಂದಲೇ ಹೊರ ನಡೆದ ಕಿಚ್ಚ ಸುದೀಪ್!

    ಬೆಂಗಳೂರು: ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ವಾರದ ಕತೆಯನ್ನು ನಡೆಸಿಕೊಡಲು ಕಿಚ್ಚ ಸುದೀಪನ ಎಂಟ್ರಿಯಾಗಿದೆ. ಆದರೆ ಅಚ್ಚರಿ ಎಂಬಂತೆ ಬಿಗ್ಬಾಸ್ ವೇದಿಕೆ ಮೇಲಿಂದಲೇ ಕಿಚ್ಚ ಸುದೀಪ್ ಹೊರಟು…

    Spread the love

    ಬೆಂಗಳೂರು-ದೇವಸ್ಥಾನ ಸಂಸ್ಕೃತಿ ರಕ್ಷಣೆಗಾಗಿ ಬೆಂಗಳೂರಿನಲ್ಲಿ-ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನದ ಆಯೋಜನೆ

    ಬೆಂಗಳೂರು-ನಮ್ಮ ರಾಜ-ಮಹಾರಾಜರು ದೇವಸ್ಥಾನಗಳನ್ನು ನಿರ್ಮಿಸಿದರು.ಕದಂಬರಿಂದ ಹಿಡಿದು ವಿಜಯನರದ ರಾಜಮಹಾರಾಜರು, ಇತ್ತೀಚಿನ ಮೈಸೂರು ಮಹಾರಾಜರವರೆಗೆ ಸಾವಿರಾರು ದೇವಸ್ಥಾನಗಳ ನಿರ್ಮಾಣ ಮಾಡಿದರು ಹಾಗೂ ಆಕ್ರಮಣಕಾರರಿಂದ ಧ್ವಂಸಗೊಂಡಿದ್ದ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿದರು. ಇಂದು ಮಾತ್ರ ದೇವಸ್ಥಾನಗಳು ‘ಸೆಕ್ಯುಲರ್’ವಾದಿ ರಾಜ್ಯವ್ಯವಸ್ಥೆಯ ಕೈವಶವಾಗಿರುವುದರಿಂದ ಸರಕಾರಿಕರಣ, ಭ್ರಷ್ಟಾಚಾರ, ಅಹಿಂದೂಗಳಿಗೆ ದೇವಸ್ಥಾನದಲ್ಲಿ…

    Spread the love

    You Missed

    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 53ನೇ ವರ್ಷದ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

    • By admin
    • January 14, 2025
    • 25 views
    ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 53ನೇ ವರ್ಷದ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ

    ಬೆಳ್ತಂಗಡಿ ತಾಲೂಕಿನಾದ್ಯಂತ ಕಾಡಾನೆ ಸಂಚಾರ ಜನರಲ್ಲಿ ಮೂಡಿದ ಆತಂಕ

    • By admin
    • January 14, 2025
    • 63 views
    ಬೆಳ್ತಂಗಡಿ ತಾಲೂಕಿನಾದ್ಯಂತ ಕಾಡಾನೆ ಸಂಚಾರ ಜನರಲ್ಲಿ ಮೂಡಿದ ಆತಂಕ

    ಬೆನಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಅನನ್ಯ – ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ

    • By admin
    • January 14, 2025
    • 22 views
    ಬೆನಕ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಅನನ್ಯ – ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ

    ಉಜಿರೆಯಲ್ಲಿ ರಕ್ತದಾನ ಶಿಬಿರ ಉದ್ಘಾಟನೆ

    • By admin
    • January 12, 2025
    • 63 views
    ಉಜಿರೆಯಲ್ಲಿ ರಕ್ತದಾನ ಶಿಬಿರ ಉದ್ಘಾಟನೆ

    ಪೂಜಾ ರವರ ಚಿಕಿತ್ಸೆಗಾಗಿ ಬೇಕಾಗಿದೆ ಸಹೃದಯಿ ದಾನಿಗಳ ಸಹಕಾರ

    • By admin
    • January 12, 2025
    • 86 views
    ಪೂಜಾ ರವರ ಚಿಕಿತ್ಸೆಗಾಗಿ ಬೇಕಾಗಿದೆ ಸಹೃದಯಿ ದಾನಿಗಳ ಸಹಕಾರ

    ಪೆರ್ಲ -ಬೈಪಾಡಿ ಬ್ರಹ್ಮಕಲಶೋತ್ಸವಕ್ಕೆ ಇಂದು ಸಂಜೆ ಧರ್ಮಸ್ಥಳದ ಧರ್ಮಾಧಿಕಾರಿಯವರಭೇಟಿ

    • By admin
    • January 11, 2025
    • 46 views
    ಪೆರ್ಲ -ಬೈಪಾಡಿ ಬ್ರಹ್ಮಕಲಶೋತ್ಸವಕ್ಕೆ ಇಂದು ಸಂಜೆ ಧರ್ಮಸ್ಥಳದ ಧರ್ಮಾಧಿಕಾರಿಯವರಭೇಟಿ