ದೇಶಾದ್ಯಂತ ಮತ್ತೆ ಮುಂದುವರಿದ ಲಾಕ್ ಡೌನ್

ನವದೆಹಲಿ: ಕೊರೋನಾ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಅವಧಿಯನ್ನು ಮತ್ತಷ್ಟು ವಿಸ್ತರಣೆ ಮಾಡಿರುವ ಕೇಂದ್ರ ಗೃಹ ಇಲಾಖೆ ಹೊಸದಾಗಿ ಒಂದು ಕಠಿಣ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಮೇ 3ರಂದು ಎರಡನೇ ಹಂತದ ಲಾಕ್​ಡೌನ್ ಅವಧಿ ಮುಗಿಯಬೇಕಿತ್ತು. ಆದರೆ ದಿನೇದಿನೆ ಭಾರತದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಾಕ್​ ಡೌನ್​ ನ್ನು ಮೇ 17ರವರೆಗೆ ವಿಸ್ತರಿಸುವುದಾಗಿ ಕೇಂದ್ರ ಗೃಹ ಸಚಿವಾಲಯ ಆದೇಶ ನೀಡಿದೆ. ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ

ಇದೇ ವೇಳೆ ದೇಶದ ಜಿಲ್ಲೆಗಳನ್ನು ಕೆಂಪು (ಹಾಟ್‌ಸ್ಪಾಟ್), ಹಸಿರು ಮತ್ತು ಅರೇಂಜ್ ವಲಯಗಳಾಗಿ ಅಪಾಯದ ವಿವರಗಳ ಆಧಾರದ ಮೇಲೆ ಈ ಅವಧಿಯಲ್ಲಿ ವಿವಿಧ ಚಟುವಟಿಕೆಗಳನ್ನು ನಿಯಂತ್ರಿಸಲು ಎಂಹೆಚ್‌ಎ ಹೊಸ ಮಾರ್ಗಸೂಚಿಗಳನ್ನು ಸಹ ನೀಡಿದೆ.

ಏನಿದೆ ಮಾರ್ಗಸೂಚಿಯಲ್ಲಿ?

ಮತ್ತೆ 2 ವಾರಗಳ ಕಾಲ ಲಾಕ್ ಡೌನ್ ವಿಸ್ತರಣೆ
ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮ ರದ್ದು
ಬಸ್, ರೈಲು ಹಾಗೂ ವಿಮಾನ ಸಂಚಾರ ರದ್ದು
ಮಹಾನಗರಗಳಲ್ಲಿ ಮೆಟ್ರೋ ರೈಲು ಸಂಚಾರ ಇಲ್ಲ
ಟ್ಯಾಕ್ಸಿ ಹಾಗೂ ಆಟೋ ಸಂಚಾರ ಇಲ್ಲ
ಕಟಿಂಗ್ ಶಾಪ್’ಗಳನ್ನು ಎಲ್ಲಿಯೂ ತೆರೆಯುವಂತಿಲ್ಲ
ಅಗತ್ಯ ವಸ್ತು ಪೂರೈಕೆಯ ಗೂಡ್ಸ್‌ ರೈಲು, ವಾಹನಕ್ಕೆ ಮಾತ್ರ ಅವಕಾಶ
ಗರ್ಭಿಣಿ, ಮಕ್ಕಳು ಹಾಗೂ ವೃದ್ದರು ಕಡ್ಡಾಯವಾಗಿ ಮನೆಯಲ್ಲೇ ಇರಬೇಕು
ಅಗತ್ಯ ವಸ್ತು ಖರೀದಿಗೆ ಮಾತ್ರ ರಸ್ತೆಗೆ ಬರಬೇಕು
ಅನಗತ್ಯವಾಗಿ ಯಾರೂ ಮನೆಯಿಂದ ಹೊರಕ್ಕೆ ಓಡಾಡುವಂತಿಲ್ಲ
ಥಿಯೇಟರ್, ಮಾಲ್, ಜಿಮ್, ಸ್ವಿಮ್ಮಿಂಗ್ ಪೂಲ್ ತೆರೆಯುವಂತಿಲ್ಲ
ಸಂಜೆ 7ರಿಂದ ಮುಂಜಾನೆ 7ರವರೆಗೂ ಕಡ್ಡಾಯವಾಗಿ ಯಾರೂ ಓಡಾಡುವಂತಿಲ್ಲ
ಅಂತಾರಾಜ್ಯ ವಾಹನ ಸಂಚಾರ ಸಂಪೂರ್ಣ ಬಂದ್
ಯಾವುದೇ ಶಾಲಾ-ಕಾಲೇಜುಗಳನ್ನು ತೆರೆಯುವಂತಿಲ್ಲ
ಕೈಗಾರಿಕೆಗಳಿಗೆ ಷರತ್ತುಬದ್ದ ಅನುಮತಿ
ಬಾರ್ ಅಂಡ್ ರೆಸ್ಟೋರೆಂಟ್’ಗಳಿಗೆ ಅನುಮತಿ ಇಲ್ಲ

ಆರೆಂಜ್ ಝೋನ್’ನಲ್ಲಿ ಯಾವುದಕ್ಕೆಲ್ಲ ಅವಕಾಶ?

ನಿಗದಿತ ಪಾಸ್ ಹೊಂದಿರುವವರು ಮಾತ್ರ ಓಡಾಡಬಹುದು
ಅಗತ್ಯವಿದ್ದಲ್ಲಿ ಕಾರು ಬಳಸಬಹುದು. ಆದರೆ, ಕಾರಿನಲ್ಲಿ ಚಾಲಕ ಸೇರಿ ಇಬ್ಬರಿಗೆ ಮಾತ್ರ ಅವಕಾಶ
ಬೈಕ್’ನಲ್ಲಿ ಕೇವಲ ಒಬ್ಬರು ಮಾತ್ರ ಸಂಚರಿಸಬಹುದು
ಬಸ್ ಸಂಚಾರ ಇರುವುದಿಲ್ಲ.

ಗ್ರೀನ್ ಝೋನ್’ನಲ್ಲಿ ಯಾವುದಕ್ಕೆ ಅವಕಾಶ?

ಈ ಜಿಲ್ಲಾ ವ್ಯಾಪ್ತಿಯಲ್ಲಿ ಬಸ್ ಓಡಾಟಕ್ಕೆ ಅವಕಾಶವಿದ್ದು, ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ
ಟ್ಯಾಕ್ಸಿ ಓಡಾಟಕ್ಕೆ ಅವಕಾಶವಿದ್ದು, ಚಾಲಕ ಸೇರಿ ಇಬ್ಬರಿಗೆ ಮಾತ್ರ ಅವಕಾಶ

Spread the love
  • Related Posts

    ಬಳಂಜದಲ್ಲಿ ಭಕ್ತಿಭಾವದಿಂದ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಪ್ರದರ್ಶನ

    ಬೆಳ್ತಂಗಡಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀಮತಿ ಮಿನಾಕ್ಷಿ ಮತ್ತು ಸಾಂತಪ್ಪ ಸುವರ್ಣ ಕುಟುಂಬಸ್ಥರ ಹರಕೆಯ ಸೇವಾರ್ಥವಾಗಿ ‘ಶ್ರೀ ದೇವಿ ಮಹಾತ್ಮ’ ಎಂಬ ಪೌರಾಣಿಕ ಕಥಾ ಭಾಗವು ಏ.13ರಂದು ಬಳಂಜದ ಸುವರ್ಣ ನಿಲಯದಲ್ಲಿ ಜರುಗಿತು. ಸಂಜೆ…

    Spread the love

    ಎಕ್ಸೆಲ್ ಕಾಲೇಜಿನ ವಿದ್ಯಾಸಾಗರ ಕ್ಯಾಂಪಸ್ ನಲ್ಲಿ ಸರಸ್ವತಿ ಗೋ ಮಂದಿರ ಲೋಕಾರ್ಪಣೆ

    ಬೆಳ್ತಂಗಡಿ: ಹಲವು ಶೈಕ್ಷಣಿಕ ದಾಖಲೆಗಳ ಮೂಲಕ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾದ ಗುರುವಾಯನಕೆರೆ ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆವರಣ ಇಂದು ಹೊಸ ವಿಷಯಕ್ಕೆ ಗಮನ ಸೆಳೆಯಿತು. ಏಪ್ರಿಲ್ 10 ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರ…

    Spread the love

    You Missed

    ಬೃಹತ್ ಪ್ರಮಾಣದ ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ ಪೆಡ್ಲರ್ ಗಳ ಬಂಧನ: 46.50ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ

    • By admin
    • April 20, 2026
    • 46 views
    ಬೃಹತ್ ಪ್ರಮಾಣದ ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ ಪೆಡ್ಲರ್ ಗಳ ಬಂಧನ: 46.50ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ

    ಅಕ್ಷಯ ತೃತೀಯದ ಶುಭ ಘಳಿಗೆಯಲ್ಲಿ: ಕನ್ಯಾಡಿಯ ಅಕ್ಷರ ದೇಗುಲಕ್ಕೆ ಸ್ವಾಗತ!

    • By admin
    • April 20, 2026
    • 33 views
    ಅಕ್ಷಯ ತೃತೀಯದ ಶುಭ ಘಳಿಗೆಯಲ್ಲಿ: ಕನ್ಯಾಡಿಯ ಅಕ್ಷರ ದೇಗುಲಕ್ಕೆ ಸ್ವಾಗತ!

    ಚಲಿಸುತ್ತಿದ್ದ ಕಾರಿನ ಮೇಲೆ ಮುರಿದು ಬಿದ್ದ ಮರದ ರೆಂಬೆ: ಕಾರು ಜಖಂ

    • By admin
    • April 20, 2026
    • 80 views
    ಚಲಿಸುತ್ತಿದ್ದ ಕಾರಿನ ಮೇಲೆ ಮುರಿದು ಬಿದ್ದ ಮರದ ರೆಂಬೆ: ಕಾರು ಜಖಂ

    ನೆರಿಯದಲ್ಲಿ ಸಂಪನ್ನಗೊಂಡ 36 ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರ:

    • By admin
    • April 19, 2026
    • 40 views
    ನೆರಿಯದಲ್ಲಿ ಸಂಪನ್ನಗೊಂಡ 36 ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರ:

    ಅಪ್ರಾಪ್ತ ಬಾಲಕಿ ಮೇಲೆ ಯುವಕರಿಬ್ಬರಿಂದ ಅತ್ಯಾಚಾರ: ಧರ್ಮಸ್ಥಳ ಪೋಲೀಸರಿಂದ ಇಬ್ಬರು ಬಂಧನ

    • By admin
    • April 19, 2026
    • 154 views
    ಅಪ್ರಾಪ್ತ ಬಾಲಕಿ ಮೇಲೆ  ಯುವಕರಿಬ್ಬರಿಂದ ಅತ್ಯಾಚಾರ: ಧರ್ಮಸ್ಥಳ ಪೋಲೀಸರಿಂದ ಇಬ್ಬರು  ಬಂಧನ

    ಅಧಿಕೃತ ಆದೇಶವಿದ್ದರೂ ಬಸ್ ನಿಲ್ಲಿಸದೇ ನಿರ್ಲಕ್ಷ್ಯ: “ಬೋರ್ಡ್ ಇದೆ, ಆದೇಶ ಇದೆ… ಬಸ್ ಮಾತ್ರ ನಿಲ್ಲಲ್ಲ!”

    • By admin
    • April 18, 2026
    • 239 views
    ಅಧಿಕೃತ ಆದೇಶವಿದ್ದರೂ ಬಸ್ ನಿಲ್ಲಿಸದೇ ನಿರ್ಲಕ್ಷ್ಯ: “ಬೋರ್ಡ್ ಇದೆ, ಆದೇಶ ಇದೆ… ಬಸ್ ಮಾತ್ರ ನಿಲ್ಲಲ್ಲ!”