.
ಬೆಳ್ತಂಗಡಿ: ಸದಾ ಕ್ರಿಯಾಶೀಲವಾಗಿ ಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರವರು ದೇಶ ಸೇವಕರ ಪರ ಧ್ವನಿಯಾಗಿದ್ದಾರೆ. ಸೇವಾ ಸಿಂಧು ಪೋರ್ಟಲ್ನಲ್ಲಿ ಸೈನಿಕರಿಗೆ ಹೆಸರು ನೋಂದಾಯಿಸಲು ವಿಶೇಷ ಅವಕಾಶ ನೀಡುವಂತೆ ಮುಖ್ಯಮಂತ್ರಿಗಳಿಗೆ ಶಾಸಕ ಹರೀಶ್ ಪೂಂಜ ಮನವಿ ಮಾಡಿದರು.
ದೇಶದ ವಿವಿಧ ಭಾಗಗಳಲ್ಲಿ ರಕ್ಷಣೆಯ ಮಾಡುತ್ತಿರುವ ಸೈನಿಕರು ತಮ್ಮ ವಾರ್ಷಿಕ ರಜೆಯ ನಿಮಿತ್ತ ತಮ್ಮ ಊರುಗಳಿಗೆ ಮರಳುವುದು ಸಾಮಾನ್ಯ. ಕೋವಿಡ್-19 ಸೋಂಕಿನ ಕಾರಣದಿಂದ ಹೊರ ರಾಜ್ಯಗಳಿಂದ ಬರುವವರಿಗೆ ಹಲವು ಅಡಚಣೆಗಳು ಎದುರಾಗುತ್ತಿವೆ. ಸೈನಿಕರಿಗೆ ತಮ್ಮ ಕುಟುಂಬಗಳನ್ನು ಸೇರಿಕೊಳ್ಳಲು ವಿಶೇಷ ಅನುಮತಿ ನೀಡಬೇಕು ಎಂದು ಕೋರಿದರು.ರಾಜ್ಯದ ಸೇವಾ ಸಿಂಧು ಪೋರ್ಟಲ್ನಲ್ಲಿ ಸೈನಿಕರು ತಮ್ಮ ಹೆಸರು ನೋಂದಾಯಿಸಲು ವಿಶೇಷ ಅವಕಾಶ ನೀಡಬೇಕು. ಅವರಿಗೆ ತಕ್ಷಣ ಪ್ರಯಾಣ ಬೆಳೆಸಲು ಅನುವು ಮಾಡಿಕೊಡಬೇಕಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಿದ್ದಾರೆ.