ಲಾಕ್ ಡೌನ್ ಸಂಕಟದಲ್ಲಿದ್ದ ಬಡ ಕುಟುಂಬಗಳ ನೆರವಿಗೆ ಬಂದ ಜನಸ್ಸೇಹಿ ಬೀಟ್ ಪೋಲೀಸ್ ಶಶಿಕುಮಾರ್

ಕಡಿರುದ್ಯಾವರ: ವಿಶ್ವಾದ್ಯಂತ ಕೊರೋನಾ ಮಹಾಮಾರಿ ಸೋಂಕು ಹರಡುತ್ತಿರುವ ಹಿನ್ನೆಲೆ ದೇಶವೇ ಲಾಕ್ ಡೌನ್ ಜಾರಿಯಲ್ಲಿದ್ದು ಈ ಸಂದರ್ಭದಲ್ಲಿ ಗ್ರಾಮ ಹಲವು ಬಡ ಕುಟುಂಬಗಳಿಗೆ ಅಗತ್ಯ ವಸ್ತುಗಳ ಸಹಾಯ ಹಸ್ತ ಮಾಡಿದ ಬೆಳ್ತಂಗಡಿ ಠಾಣೆಯ ಸಿಬ್ಬಂದಿ ಶಶಿಕುಮಾರ್.

ಮನೆಯೊಳಗಿನ ಜಗಳದಿಂದ ಹಿಡಿದು ದೇಶದೊಳಗಿನ ಎಲ್ಲಾ ಆಗುಹೋಗುಗಳಿಗೆ ಖಾಕಿಗಳು ಬೇಕೇ ಬೇಕು. ಹಾಗಾಗಿ ಖಾಕಿ ಅಂದರೆ ಪೋಲೀಸರಿಗೆ ಕಠಿಣ ಗುಣಗಳನ್ನು ಮೈಗೂಡಿಸಿಗೊಂಡಿರುವುದು ಅನಿವಾರ್ಯವಾಗಿರುತ್ತದೆ. ಆದರೆ, ಮಾನವೀಯತೆ ಮೇಲೈಸಿಕೊಂಡ ಆರಕ್ಷಕರು ಇದ್ದಾಗ ಸಮಾಜದಲ್ಲೊಂದು ಬದಲಾವಣೆ ಆಗೋದು ಖಂಡಿತ. ಇದಕ್ಕೊಂದು ಸಾಕ್ಷಾತ್ ಉದಾಹರಣೆ, ಕಡಿರುದ್ಯಾವರ ಗ್ರಾಮದ ಬೀಟ್ ಪೋಲೀಸ್ ಶ್ರೀ ಶಶಿಕುಮಾರ್.

ಮೂಲತ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರಾದ ಶ್ರೀ ಶಶಿಕುಮಾರ್ ಅವರು ಬೆಳ್ತಂಗಡಿ ಆರಕ್ಷಕ ಠಾಣೆಯಲ್ಲಿ ಕರ್ತವ್ಯನಿರ್ವಹಿಸುತಿದ್ದು, ತಾಲೂಕಿನ ಕಡಿರುದ್ಯಾವರ ಗ್ರಾಮದಲ್ಲಿ ಬೀಟ್ ಪೋಲೀಸ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾರ್ಯನಿರ್ವಹಿಸುತ್ತಿರುವ ಗ್ರಾಮದಲ್ಲಿ ಪ್ರಾಮಾಣಿಕ ಸೇವೆ ನೀಡುತ್ತಾ, ಗ್ರಾಮದ ಜನರ ಪ್ರೀತಿಪಾತ್ರರಾಗಿರುವ ಇವರು ಕೊರೋನ ಮಹಾಮಾರಿಯ ವಿರುಧ್ಧದ ಸಮರದ ನಿಮಿತ್ತದ ಲಾಕ್ಡೌನ್ ನಿಂದ ತತ್ತರಿಸಿದ ಜನರ ಸಂಕಷ್ಟಕ್ಕೆ ಸ್ಪಂಧಿಸಿದ್ದಾರೆ. ಗ್ರಾಮದ ಕಡುಬಡತನದಲ್ಲಿದ್ದ ಮನೆಗಳಿಗೆ ತನ್ನ ವೈಯಕ್ತಿಕ ಸಹಾಯ ಹಸ್ತ ಚಾಚಿದ್ದಾರೆ. ಈ ನಿಟ್ಟಿನಲ್ಲಿ ಸ್ಪಂಧಿಸುತ್ತಿರುವಾಗ ಗ್ರಾಮದಲ್ಲಿ ಈ ರೀತಿಯಾದ ಇನ್ನು ಹಲವಾರು ಕುಟುಂಬಗಳಿವೆಂಬುದನ್ನು ತಿಳಿದು ಶ್ರೀ ಶಶಿಕುಮಾರ್ ಅವರು ಗ್ರಾಮದ ಒಂದಷ್ಟು ದಾನಿಗಳನ್ನು ಸಂಪರ್ಕಿಸಿ, ತೀರಾ ಅಗತ್ಯವಿರುವ ಹದಿನೈದು ಕುಟುಂಬಗಳಿಗೆ ದಿನಸಿ ಸಾಮಾನು ಕಿಟ್ ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಸತ್ಕಾರ್ಯದಲ್ಲಿ ಇವರೊಂದಿಗೆ ಶ್ರೀ ಲಿಜೋ ಸ್ಕರಿಯ, ಹೇಡ್ಯ, ಶ್ರೀ ಸುದರ್ಶನ್ ರಾವ್, ಗಜಂತೋಡಿ, ಶ್ರೀಮತಿ ಬೇಬಿ ಸದಾಶಿವ ಗೌಡ ಕುದುರು, ಶ್ರೀ ಹರಿಪ್ರಸಾದ್ ಭಟ್ ಹಿತ್ತಿಲಕೋಡಿ, ಶ್ರೀ ಶಂಕರ್ ಭಟ್ ಬಸವದಡ್ಡು ಹಾಗೂ ಶ್ರೀ ಸೂರಜ್ ಅಡೂರು ಇವರುಗಳು ಸಹಕರಿಸಿದ್ದಾರೆ.

Spread the love
  • Related Posts

    ಪಿಯುಸಿ ಫಲಿತಾಂಶ ಪ್ರಕಟ ಉಡುಪಿಗೆ ಮೊದಲ ಸ್ಥಾನ

    ಬೆಂಗಳೂರು: ಪ್ರಸ್ತುತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶವನ್ನು ಮಂಗಳವಾರ ಮಧ್ಯಾಹ್ನ 12-40ಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಘೋಷಿಸಿದ್ದು, ಈ ಬಾರಿಯೂ ನಿರೀಕ್ಷೆಯಂತೆ ಉಡುಪಿ ಮೊದಲ ಸ್ಥಾನ(ಶೇ.93.90 )ಗಳಿಸಿದ್ದು, ಯಾದಗಿರಿ(ಶೇ.48.45) ಕೊನೆಯ ಸ್ಥಾನ ಪಡೆದಿದೆ.…

    Spread the love

    ದೇವರ ಕೋಣೆಯಲ್ಲಿ ಯಾವ ಅಗರಬತ್ತಿಯನ್ನು ಯಾಕೆ ಹಚ್ಚಿಡಬೇಕು.? ಇದರ ಪ್ರಯೋಜನವೇನು ? ಯಾವ ಅಗರಬತ್ತಿಯನ್ನು ಹಚ್ಚಬಾರದು? ಇದರ ದುಷ್ಪರಿಣಾಮವೇನು ?

    ಹಿಂದೂ ಧರ್ಮದಲ್ಲಿ ಪ್ರತಿದಿನವೂ ದೇವರ ಕೋಣೆಯಲ್ಲಿ ಅಗರಬತ್ತಿಯನ್ನು ಹಚ್ಚುತ್ತಾರೆ. ಕೆಲವರು ಇದರ ಪ್ರಯೋಜನವನ್ನು ಅರಿತು ಅಗರಬತ್ತಿಯನ್ನು ಹಚ್ಚಿಟ್ಟರೆ, ಇನ್ನೂ ಕೆಲವರು ಇದರ ಪ್ರಯೋಜನವನ್ನು ತಿಳಿಯದೆಯೂ ದೇವರಿಗೆಂದು ಅಗರಬತ್ತಿಯನ್ನು ಹಚ್ಚಿಡುತ್ತಾರೆ. ದೇವರ ಕೋಣೆಯಲ್ಲಿ ಯಾವ ಅಗರಬತ್ತಿಯನ್ನು ಯಾಕೆ ಹಚ್ಚಿಡಬೇಕು.? ಇದರ ಪ್ರಯೋಜನವೇನು ?…

    Spread the love

    You Missed

    ಕಟ್ಟಡ ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    • By admin
    • June 30, 2025
    • 137 views
    ಕಟ್ಟಡ  ಟೆಂಡರ್ ನಲ್ಲಿ ಆಗುತ್ತಿರುವ ಭ್ರಷ್ಟಾಚಾರ ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಮರಳು, ಕೆಂಪುಕಲ್ಲು ಪೂರೈಕೆಯಲ್ಲಿ ಉಂಟಾದ ತೊಡಕುಗಳ ಕುರಿತು ಭಾರತೀಯ ಮಜ್ದೂರ್ ಸಂಘದ ವತಿಯಿಂದ ಸಮಾಲೋಚನಾ ಸಭೆ ಹಾಗೂ ಮನವಿ ಸಲ್ಲಿಕೆ

    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    • By admin
    • June 28, 2025
    • 285 views
    ಚಿರಂಜೀವಿ ಯುವಕ ಮಂಡಲ ಕಾನರ್ಪ ಇದರ 34ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣಾ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    • By admin
    • June 26, 2025
    • 192 views
    ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ

    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    • By admin
    • June 26, 2025
    • 295 views
    ಭಾರಿಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ  ಕುಸಿತ, ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್

    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    • By admin
    • June 25, 2025
    • 155 views
    ಮುಂದುವರಿದ ವರುಣಾರ್ಭಟ ಬೆಳ್ತಂಗಡಿ ತಾಲೂಕಿನ  ಶಾಲೆಗಳಿಗೆ ಜೂನ್ 26 ಗುರುವಾರ ರಜೆ: ತಹಶಿಲ್ದಾರ್ ಫೋಷಣೆ

    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ

    • By admin
    • June 21, 2025
    • 87 views
    ಹಾಸನದ ಸಕಲೇಶಪುರ ಎಡಕುಮೇರಿ ಎಂಬಲ್ಲಿ ರೈಲು ಹಳಿಗಳ ಮೇಲೆ ಬಿದ್ದ ಬಂಡೆ ಕಲ್ಲುಗಳು ರೈಲು ಸಂಚಾರದಲ್ಲಿ ವ್ಯತ್ಯಯ