ಸೇವಾಭಾರತಿಯ 16ನೇ ವರ್ಷದ ವಾರ್ಷಿಕೋತ್ಸವ ಮತ್ತು ಸೇವಾಕಾರ್ಯಗಳ ಲೋಕಾರ್ಪಣೆ

ಬೆಳ್ತಂಗಡಿ: ಸೇವಾಭಾರತಿ ಕನ್ಯಾಡಿ ಇದರ 16ನೇ ವರ್ಷದ ವಾರ್ಷಿಕೋತ್ಸವ ಕನ್ಯಾಡಿ ಹಿರಿಯ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ಮಾರ್ಚ್ 14-2021 ರಂದು ನೆರವೇರಿತು.

ಟೊಯೋಟಾ ಗೋಸಾಯಿ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಇವರು ದೊರಕಿಸಿಕೊಟ್ಟ ಹತ್ತಿಯಿಂದ ಬತ್ತಿ ಮಾಡುವ ಯಂತ್ರಗಳ ಹಸ್ತಾಂತರ ಮತ್ತು ಎ.ಪಿ.ಡಿ, ಬೆಂಗಳೂರು ಇವರು ಒದಗಿಸಿದ 3 ಮಂದಿಯ ಮನೆಗಳಿಗೆ ಸೌರ ವಿದ್ಯುತ್ ಘಟಕಗಳ ಹಸ್ತಾಂತರ, 3 ಮಂದಿ ಮನೆಗೆ ಹತ್ತಿಯಿಂದ ಬತಿ ಮಾಡುವ ಯಂತ್ರಗಳಿಗೆ ಸೌರವಿದ್ಯುತ್ ಘಟಕಗಳ ಹಸ್ತಾಂತರ, ಓರ್ವರಿಗೆ ಅಡಿಕೆ ಸಿಪ್ಪೆ ಸುಲಿಯುವ ಯಂತ್ರಕ್ಕೆ ಸೌರವಿದ್ಯುತ್ ಘಟಕ ಹಸ್ತಾಂತರ, ಸೆಲ್ಕೊ ಲಿಮಿಟೆಡ್ ನಿಂದ ಸೋಲಾರ್ ಚಾಲಿತ ಬಿಸಿ ನೀರು ಘಟಕ ಮತ್ತು ಯುವ ತೇಜಸ್ಸು ಟ್ರಸ್ಟ್,ಸುಳ್ಯ ಇವರಿಂದ ಸೋಲಾರ್ ಚಾಲಿತ ಆಟೋಮೆಟಿಕ್ ಹತ್ತಿ ಕಟ್ಟರ್ ಯಂತ್ರ ಹಾಗೂ ಸೀಲರ್ ಯಂತ್ರಗಳ ಹಸ್ತಾಂತರಿಸಲಾಯಿತು.

READ ALSO

ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಹರೀಶ್ ಪೂಂಜ ಶಾಸಕರು, ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ನಾಯಕ್, ಶ್ರೀ ಪ್ರಭಾಕರ್ ಹೆಗ್ಡೆ ಉಜಿರೆ, ಶ್ರೀ.ಕೆ. ವಿನಾಯಕ ರಾವ್ ಸೇವಾಭಾರತಿ, ಶ್ರೀ.ಕೆ.ಎಸ್.ಮಂಜುನಾಥ್ ಸಂಸ್ಥಾಪಕರು ಹಾಗೂ ಅಧ್ಯಕ್ಷರು ನವಚೇತನ, ಚಾರಿಟೇಬಲ್ ಟ್ರಸ್ಟ್ (ರಿ.) ರಾಮನಗರ, ಶ್ರೀ ವೆಂಕಟ ರಾಮಕೃಷ್ಣನ್ ನೆಕ್ಕಿನ ಸಿ.ಇ.ಓ ಎ.ಪಿ.ಡಿ,ಬೆಂಗಳೂರು, ಶ್ರೀ ಆಶಿತ್ ಕಲ್ಲಾಜೆ, ಯುವ ತೇಜಸ್ಸು ಟ್ರಸ್ಟ್ (ರಿ.)ಸುಳ್ಯ, ಶ್ರೀ ರೋಷನ್ ಬೆಳ್ಮಣ್ಣು, ಹ್ಯುಮಾನಿಟಿ ಟ್ರಸ್ಟ್ ಬೆಳ್ಮಣ್ಣು, ಶ್ರೀಕೆತ್ ಕೃಷ್ಣಭಟ್,ಅಧ್ಯಕ್ಷರು, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ (ರಿ.) ಕೊಕ್ಕಡ , ಶ್ರೀ ಕೆ ಪುರಂದರ ರಾವ್ ಸಂಚಾಲಕರು, ಸೇವಾಧಾಮ,ಸೌತಡ್ಕ, ಶ್ರೀಮತಿ ಶಾಂತ ಪಿ.ಶೆಟ್ಟಿ,ಅಧ್ಯಕ್ಷರು ಶ್ರೀ ದುರ್ಗಾ ಮಾತೃಮಂಡಳಿ ಮತ್ತು ಶ್ರೀ ಸೂರ್ಯಪ್ರಕಾಶ್.ಎಂ ,ಅಧ್ಯಕ್ಷರು,ಶಾಲಾ ಮೇಲುಸ್ತುವಾರಿ ಸಮಿತಿ,ಕನ್ಯಾಡಿ ಹಾಗೂ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಊರಿನ ಗಣ್ಯ ವ್ಯಕ್ತಿಗಳು, ಹಿರಿಯರು, ದಾನಿಗಳು, ಸಂಘ ಸಂಸ್ಥೆಗಳ ಪ್ರಮುಖರು, ದಿವ್ಯಾಂಗರು ಮತ್ತು ಅವರ ಪೋಷಕರು, ಸಂಸ್ಥೆಯ ಟ್ರಸ್ಟಿಗಳು ಸಲಹಾ ಮಂಡಳಿ ಮತ್ತು ವಿಭಾಗಗಳ ಸರ್ವ ಸದಸ್ಯರು ಹಾಗೂ ಸಂಸ್ಥೆಯ ಪೋಷಕರು, ಊರಿನವರು ಮತ್ತು ಸೇವಾಭಾರತೀಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.