ಬೆಳ್ತಂಗಡಿ: ಗೋವು ಭಗವಂತನ ಅನನ್ಯ ಸೃಷ್ಟಿಗಳಲ್ಲೊಂದು! ಮನುಕುಲದ ಆರಂಭದಿಂದಲೂ ಮನುಷ್ಯರಿಗೆ ಪ್ರೀತಿಪಾತ್ರವಾದ ಗೋವು ಆಧ್ಯಾತ್ಮಿಕ, ಔನ್ನತ್ಯ, ಧಾರ್ಮಿಕ, ಆರ್ಥಿಕ, ಸಾಮಾಜಿಕ ಮಹತ್ವದಿಂದ ಮಾತ್ರವಲ್ಲದೇ ಆರೋಗ್ಯ ರಕ್ಷಣೆಗೆ ಗೋವಂಶದ ಕೊಡುಗೆ ಅನನ್ಯ. 33 ಕೋಟಿ ದೇವತೆಗಳ ಆವಾಸಸ್ಥಾನವಾಗಿರುವ, ಪ್ರಕೃತಿಜನ್ಯ ಪದಾರ್ಥಗಳನ್ನು ತಿಂದು ಔಷಧಯುಕ್ತ ಅಮೃತ ಸಮಾನವಾದ ಹಾಲನ್ನು ನೀಡುವ ಗೋವು ಇಲ್ಲೊಂದು ವಿಸ್ಮಯಕಾರಿ ಕರುವಿಗೆ ಜನ್ಮನೀಡಿ ವೈಶಿಷ್ಟ್ಯತೆಯನ್ನು ಮೆರೆದಿದೆ.
ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾಯರ್ತಡ್ಕ ಎಂಬಲ್ಲಿ ಹಸು ಅವಳಿ ಕರುಗಳಿಗೆ ಜನ್ಮ ನೀಡಿದ್ದು ಇದರಲ್ಲಿ 1ಕರು 2 ತಲೆ 7 ಕಾಲುಗಳನ್ನು ಹೊಂದಿದ್ದು ಪ್ರಕೃತಿ ವಿಸ್ಮಯವಾಗಿದೆ.
ಕಳೆಂಜ ಗ್ರಾಮದ ಕಾಯರ್ತಡ್ಕ ರಾಮಣ್ಣ ಗೌಡ ಅವರ ಮನೆಯ ಸಾಕಿದ ಹಸು ವಿಸ್ಮಯಕಾರಿ ಕರುವಿಗೆ ಜನ್ಮ ನೀಡಿದೆ.
ಕರು ಹಾಗೂ ಹಸು ಆರೋಗ್ಯವಾಗಿದ್ದು ಭಗವಂತನ ಸೃಷ್ಠಿಯೆದುರು ಯಾವುದು ಸಾಟಿ ಇಲ್ಲ ಎಂಬಂತಾಗಿದೆ. ಈ ಚಿತ್ರ ವಿಚಿತ್ರ ವಿಚಾರ ತಿಳಿದು ಊರಿನ ಜನರೆಲ್ಲರು ಕುತೂಹಲದಿಂದ ರಾಮಣ್ಣ ಗೌಡರ ಮನೆಕಡೆ ದಾವಿಸಿ ಬರುತ್ತಿದ್ದಾರೆ.