ರಷ್ಯಾ : 29 ಮಂದಿ ಪ್ರಯಾಣಿಕರಿದ್ದ ರಷ್ಯಾದ ವಿಮಾನವು ರಷ್ಯಾದ ಪೂರ್ವದಲ್ಲಿ ಸಂಪರ್ಕ ಕಳೆದುಕೊಂಡಿದ್ದು, ಕಾಣಿಯಾಗಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
29 ಪ್ರಯಾಣಿಕರನ್ನ ಹೊಂದಿದ್ದ ಈ ವಿಮಾನದಲ್ಲಿ 6 ಮಂದಿ ವಿಮಾನಯಾನ ಸಿಬ್ಬಂದಿ ಸಹ ಇದ್ದರು ಎನ್ನಲಾಗಿದೆ.
ಕಮ್ಚಟ್ಕಾ ಪ್ರಾಂತ್ಯದ ರಷ್ಯಾದ ತುರ್ತು ಸಚಿವಾಲಯದ ಮುಖ್ಯ ನಿರ್ದೇಶನಾಲಯ ನೀಡಿರುವ ಮಾಹಿತಿಯ ಪ್ರಕಾರ ಪೆಟ್ರೊಪಾವ್ಲೋವ್ಸ್ಕ್-ಕಮ್ಚಾಟ್ಸ್ಕಿಯಿಂದ ಪಲಾನಾಗೆ ಹೊರಟಿದ್ದ ಪ್ರಯಾಣಿಕ ವಿಮಾನ ಕಣ್ಮರೆಯಾಗಿದೆ ಎಂಬ ಮಾಹಿತಿ ನೀಡಿದೆ.
ಈ ವಿಮಾನವು ಎಲ್ಲಾ ಸಂಪರ್ಕವನ್ನ ಕಳೆದುಕೊಂಡಿದೆ ಎಂದು ಸಚಿವಾಲಯದ ಪ್ರಾದೇಶಿಕ ಇಲಾಖೆ ಮಾಹಿತಿ ನೀಡಿದೆ.