ರಾಜ್ಯದಲ್ಲಿಂದು ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದೆ ಸೋಂಕಿತರ ಸಂಖ್ಯೆ!

ಬೆಂಗಳೂರು : ರಾಜ್ಯದಲ್ಲಿಂದು ಕೊರೋನಾ ದಾಖಲೆ ನಿರ್ಮಿಸಿದ್ದು ಇಂದು ಒಂದೇ ದಿನ 7,178 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ರಾಜ್ಯದ ಜನತೆಯನ್ನು ಆತಂಕಕ್ಕೀಡು ಮಾಡಿದೆ.

ರಾಜ್ಯದಲ್ಲಿಂದು 7,178 ಸೋಂಕಿತರು ಪತ್ತೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 1,72,102 ಕ್ಕೆ ಏರಿಕೆಯಾಗಿದೆ.

READ ALSO

ಇಂದು 93 ಮಂದಿ ಕೊರೋನಾಗೆ ಬಲಿಯಾಗಿದ್ದು ಸಾವಿನ ಸಂಖ್ಯೆ ಒಟ್ಟು 3091 ಕ್ಕೆ ಏರಿಕೆಯಾಗಿದೆ.

ಸದ್ಯ ರಾಜ್ಯದಲ್ಲಿ 79,765 ಸಕ್ರಿಯ ಪ್ರಕರಣಗಳಿದ್ದು, 89,238 ಮಂದಿ ಗುಣಮುಖರಾಗಿದ್ದಾರೆ. ಇಂದು 5,006 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಕೊರೋನಾಗೆ 3,091 ಮಂದಿ ಬಲಿಯಾಗಿದ್ದಾರೆ.

ಇನ್ನು ಬೆಂಗಳೂರಿನಲ್ಲಿಂದು 2,665 ಹೊಸ ಪ್ರಕರಣಗಳು ಪತ್ತೆಯಾಗೋದರರ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 72,237ಕ್ಕೆ ಏರಿಕೆಯಾಗಿದೆ. 18 ಮಂದಿ ಇಂದು ಕೊರೋನಾಗೆ ಬಲಿಯಾಗಿದ್ದಾರೆ.

ಸದ್ಯ ರಾಜಧಾನಿಯಲ್ಲಿ 33,726 ಕೊರೋನಾ ಪಾಸಿಟಿವ್ ಪ್ರಕರಣಗಳಿದ್ದು, 37,292 ಮಂದಿ ಗುಣಮುಖರಾಗಿದ್ದಾರೆ. ಇಂದು ಒಂದೇ ದಿನ 2,229 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಅಲ್ಲದೇ 1.218 ಮಂದಿ ಇದುವರೆಗೂ ಕೋವಿಡ್ ಗೆ ಬಲಿಯಾಗಿದ್ದಾರೆ.

ಜಿಲ್ಲಾವಾರು ಸೋಂಕಿತರ ವಿವರಗಳು: