TRENDING
Next
Prev

ಮೀನು ಸಾಗಾಟ ಲಾರಿ ಮತ್ತು ತುಳು ಅಕಾಡೆಮಿ ಅಧ್ಯಕ್ಷರ ಕಾರು ಅಪಘಾತ

ಮಂಗಳೂರು: ಮಂಗಳೂರಿನ ನಂತೂರು ಜಂಕ್ಷನ್ ಬಳಿ ಇಂದು ಬೆಳಗ್ಗಿನ ಜಾವ ಮತ್ತೊಂದು ಅಪಘಾತ ನಡೆದಿದ್ದು, ಅಪಘಾತದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪೋಲಿಸ್ ಮೂಲಗಳ ಪ್ರಕಾರ ಇಂದು ಬೆಳಿಗ್ಗೆ 5.15 ರ ಸುಮಾರಿಗೆ ಕತ್ತಲ್ ಸಾರ್ ಅವರು ತಮ್ಮ ಕಾರಿನಲ್ಲಿ ಬಿಕರ್ನಕಟ್ಟೆಯಿಂದ ನಂತೂರು ಕಡೆಗೆ ತೆರಳುತ್ತಿದ್ದು, ನಂತೂರು ಜಂಕ್ಷನ್ ಬಳಿ ಎದುರಿನಿಂದ ಬರುತ್ತಿದ್ದ ಮೀನಿನ ಲಾರಿಯನ್ನು ಗಮನಿಸದೆ, ಕಾರು ಡಿಕ್ಕಿ ಹೊಡೆದಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಕತ್ತಲ್ ಸಾರ್ ಅವರಿಗೆ ತಲೆಗೆ ಗಾಯಗಳಾಗಿದ್ದು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.

READ ALSO

ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮಂಗಳೂರು ಪೂರ್ವ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.