೯ ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ‘ಹಿಂದೂ ರಾಷ್ಟ್ರ’ ಕುರಿತಾದ ವಿಚಾರ ಸಂಕೀರ್ಣದಲ್ಲಿ ಗಣ್ಯರ ಭಾಷಣ !

‘ದೆಹಲಿಯ ಗಲಭೆ’ ಹಾಗೂ ‘ಶಾಹೀನ್‌ಬಾಗ ಆಂದೋಲನ’ ಇವು ನಗರ ನಕ್ಸಲವಾದಿಗಳ
ಹಾಗೂ ಜಿಹಾದಿಗಳ ದೇಶವಿರೋಧಿ ಸಂಚು !
– ಕಪಿಲ ಮಿಶ್ರಾ, ಮಾಜಿ ಶಾಸಕ, ದೆಹಲಿ


ಭಾರತೀಯ ಸಂಸತ್ತಿನಿಂದ ಕೇವಲ 10 ಕಿ.ಮೀ ದೂರದಲ್ಲಿ ಹಿಂಸಾತ್ಮಕ ಆದೋಲನ ಮಾಡುತ್ತಾ ಭಾರತದಲ್ಲಿ ‘ಇಸ್ಲಾಮಿ ಆಡಳಿತ’ ಜಾರಿಗೊಳಿಸುವಂತಹ ಪ್ರಚೋದನಕಾರಿ ಭಾಷಣಗಳಾದವು. ವಿದೇಶಿ ಹಣಬಲದಿಂದ ಅನೇಕ ಪೊಲೀಸರನ್ನು ಗುರಿಪಡಿಸಿದರೆ ಅನೇಕ ಹಿಂದೂಗಳ ಹತ್ಯೆ ಮಾಡಲಾಯಿತು, ‘ಸಿಎನ್‌ಜಿ’ಯ ಅನೇಕ ಬಸ್‌ಗಳಿಗೆ ಬೆಂಕಿ ಹಚ್ಚಿ ಸ್ಫೋಟಿಸುವ ದೊಡ್ಡ ಆಯೋಜನೆಯನ್ನು ಮಾಡಲಾಗಿತ್ತು. ದೇಶದಲ್ಲಿಯ ಪ್ರಗತಿಪರರು ಹಾಗೂ ಎಡಪಂಥಿಯ ವಿಚಾರದ ಪತ್ರಕರ್ತರು, ಪ್ರಸಾರ ಮಾಧ್ಯಮಗಳು, ನ್ಯಾಯವಾದಿಗಳು, ಲೇಖಕರು, ವಿಚಾರವಂತರು ಮುಂತಾದವರು ಈ ಗಲಭೆಖೋರರನ್ನು ಬೆಂಬಲಿಸುವ ಕಾರ್ಯವನ್ನು ಮಾಡಿದ್ದಾರೆ. ದೆಹಲಿ ಗಲಭೆ ಹಾಗೂ ಶಾಹೀನ್‌ಬಾಗ ಆಂದೋಲನ ಇವು ನಗರ ನಕ್ಸಲವಾದಿ ಹಾಗೂ ಜಿಹಾದಿಗಳು ಭಾರತದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ಆಯೋಜನಾ ಬದ್ಧವಾಗಿ ರೂಪಿಸಿದ್ದ ದೊಡ್ಡ ದೇಶದ್ರೋಹಿ ಸಂಚಾಗಿತ್ತು, ಈಗ ‘ಆಮ್ ಆದಮಿ ಪಾರ್ಟಿ’ಯ ನಗರ ಸೇವಕ ತಾಹೀರ ಹುಸೇನ್ ದೆಹಲಿಯ ಗಲಭೆಯಲ್ಲಿ ತನ್ನ ಕೈವಾಡವಿತ್ತೆಂದು ಒಪ್ಪಿಕೊಂಡಿರುವುದು ಸ್ಪಷ್ಟವಾಗಿದೆ, ಇಂತಹ ಜ್ವಲಂತ ವಿಚಾರವನ್ನು ದೆಹಲಿಯ ಮಾಜಿ ಶಾಸಕ ಕಪಿಲ ಮಿಶ್ರಾ ಇವರು ಮಂಡಿಸಿದರು. ಅವರು 9 ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಮಾತನಾಡುತ್ತಿದ್ದರು.
ಈ ‘ಆನ್‌ಲೈನ್’ ಅಧಿವೇಶನವು ಹಿಂದೂ ಜನಜಾಗೃತಿ ಸಮಿತಿಯ ‘ಯೂ-ಟ್ಯೂಬ್’ ಚಾನೆಲ್ ಹಾಗೂ ‘ಹಿಂದೂ ಅಧಿವೇಶನ’ ಈ ‘ಫೇಸ್‌ಬುಕ್ ಪೇಜ್’ ಮೂಲಕ ಲೈವ್ ಪ್ರಸಾರವಾಗುತ್ತಿದ್ದು 56 ಸಾವಿರಕ್ಕಿಂತ ಹೆಚ್ಚು ಜನರು ಪ್ರತ್ಯಕ್ಷವಾಗಿ ನೋಡಿದರೆ, 2 ಲಕ್ಷ ಕ್ಕಿಂತ ಹೆಚ್ಚು ಜನರ ತನಕ ತಲುಪಿದೆ.

ಮುಂಬಯಿಯ ‘ಲಷ್ಕರ-ಎ-ಹಿಂದ್’ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಈಶ್ವರಪ್ರಸಾದ ಖಂಡೆಲವಾಲ ಇವರು ‘ಅರ್ಬನ್ ನಕ್ಸಲವಾದ : ಸಮಸ್ಯೆ ಹಾಗೂ ಉಪಾಯ’ ಈ ವಿಷಯದ ಬಗ್ಗೆ ಮಾತನಾಡುತ್ತಾ, ‘ನಗರ ನಕ್ಸಲವಾದವನ್ನು ಬಯಲಿಗೆಳೆಯುತ್ತ ಹಿಂದೂಗಳು ಸಂಘಟಿತರಾಗಿ ಪ್ರತಿಕಾರ ಮಾಡಬೇಕು’, ಎಂದು ಕರೆ ನೀಡಿದರು.

ಹಿಂದೂ ಜನಜಾಗೃತಿ ಸಮಿತಿಯ ಪೂರ್ವ ಹಾಗೂ ಪೂರ್ವೋತ್ತರ ಭಾರತದ ಮಾರ್ಗದರ್ಶಕರಾದ ಪೂ. ನೀಲೇಶ ಸಿಂಗಬಾಳ ಇವರು ‘ಹಿಂದೂ ರಾಷ್ಟ್ರದ ಪ್ರಸಾರ ಮಾಡಲು ನಡೆಸಲಾಗುತ್ತಿರುವ ಉಪಕ್ರಮ’ ಈ ವಿಷಯದ ಬಗ್ಗೆ ಮಾತನಾಡುತ್ತಾ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹೇಗೆ ಪ್ರಸಾರ ಮಾಡಬೇಕು, ಎಂಬುದರ ಬಗ್ಗೆ ಪ್ರಭಾವಿಯಾಗಿ ಮಾರ್ಗದರ್ಶನವನ್ನು ಮಾಡಿದರು.


‘ಹಿಂದೂ ರಾಷ್ಟ್ರದ ಅವಶ್ಯಕತೆ ಹಾಗೂ ದಿಕ್ಕು’ ಈ ವಿಚಾರಸಂಕೀರ್ಣದಲ್ಲಿ ಗಣ್ಯರ ಹಿಂದೂ ರಾಷ್ಟ್ರದ ಬಗ್ಗೆ ವಿಚಾರಮಂಥನ !


ಇಂದು ಸಮಾನತೆ ಹಾಗೂ ಜಾತ್ಯತೀತ ಈ ತತ್ತ್ವಗಳನ್ನು ಹೇಳುತ್ತಾ ಸರಕಾರ ಹಿಂದೂಗಳ ದೇವಸ್ಥಾನಗಳನ್ನು ವಶಪಡಿಸಿಕೊಳ್ಳುತ್ತಿದೆ; ಆದರೆ ಒಂದೇ ಒಂದು ಮಸೀದಿ ಅಥವಾ ಚರ್ಚ್‌ಗಳನ್ನು ವಶಪಡಿಸಿಕೊಳ್ಳುವುದಿಲ್ಲ. ಹಿಂದೂಗಳಿಗೆ ಧಾರ್ಮಿಕ ಯಾತ್ರೆಗಳಿಗೆ ಸೌಲಭ್ಯಗಳನ್ನು ನೀಡುವುದಿಲ್ಲ; ಆದರೆ ಹಜ್ ಯಾತ್ರೆಗೆ ಕೋಟಿಗಟ್ಟಲೆ ರೂಪಾಯಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹಿಂದೂಗಳಿಗೆ ಧಾರ್ಮಿಕ ಶಿಕ್ಷಣ ನೀಡುವ ಅಧಿಕಾರ ಇಲ್ಲ; ಆದರೆ ಅಲ್ಪಸಂಖ್ಯಾತರಿಗೆ ಧಾರ್ಮಿಕ ಶಿಕ್ಷಣಕ್ಕಾಗಿ ಅನುದಾನ ನೀಡಲಾಗುತ್ತದೆ. ಇದು ಬಹುಸಂಖ್ಯಾತ ಹಿಂದೂಗಳಿಗೆ ಮಾಡಿದ ಘೋರ ಅನ್ಯಾಯವೇ ಆಗಿದೆ. ಈ ಅನ್ಯಾಯವನ್ನು ದೂರಗೊಳಿಸಲು ಹಿಂದೂ ರಾಷ್ಟ್ರದ ಸ್ಥಾಪನೆಯ ಅವಶ್ಯಕತೆ ಇದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಈ ಸಮಯದಲ್ಲಿ ಹೇಳಿದರು.


ಈ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಹಾಗೂ ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ನ ವಕ್ತಾರರಾದ ವಿಷ್ಣು ಶಂಕರ ಜೈನ್ ಇವರು ಮಾತನಾಡುತ್ತಾ, ಹಿಂದೂ ರಾಷ್ಟ್ರದ ಬೇಡಿಕೆ ಇದು ಸಂವಿಧಾನಿಕವೇ ಆಗಿದೆ; ಏಕೆಂದರೆ ಭಾರತದ ಮೂಲ ಸಂವಿಧಾನದ ಪ್ರಸ್ತಾವನೆಯಲ್ಲಿ ಪಂಥನಿರಪೇಕ್ಷ (ಸೆಕ್ಯೂಲರ್) ಹಾಗೂ ಸಮಾಜವಾದ ಈ ಎರಡೂ ಪದಗಳು ಇರಲಿಲ್ಲ. ತುರ್ತು ಪರಿಸ್ಥಿತಿಯ ಕಾಲಾವಧಿಯಲ್ಲಿ ವಿಪಕ್ಷಗಳು ಸೆರೆಮನೆಯಲ್ಲಿರುವಾಗ ಯಾವುದೇ ಚರ್ಚೆ ಮಾಡದೇ ಸಂವಿಧಾನಬಾಹಿರವಾಗಿ ಈ ಪದವನ್ನು ತುರುಕಿಸಲಾಯಿತು. ಅದನ್ನು ತುರುಕಿಸಿದಂತೆಯೇ ತೆಗೆಯಲೂ ಬಹುದು’‘ ಎಂದು ಹೇಳಿದರು.

ಈ ಸಮಯದಲ್ಲಿ ವಿಚಾರವಂತ ಹಾಗೂ ಲೇಖಕರಾದ ಶ್ರೀ. ವಿಕಾಸ ಸಾರಸ್ವತ ಇವರು ಹಿಂದೂ ರಾಷ್ಟ್ರದ ಸ್ಥಾಪನೆಯ ಅವಶ್ಯಕತೆಯ ಬಗ್ಗೆ ಹೇಳುತ್ತಿರುವಾಗ ‘ಎಲ್ಲಕ್ಕಿಂತ ಮೊದಲು ನಾವು ಶಿಷ್ಯರಾಗಬೇಕು’, ಎಂದು ಹೇಳಿದರು.

Spread the love
  • Related Posts

    ಧರ್ಮಸ್ಥಳದಲ್ಲಿ ಸಂಭ್ರಮ: ಅ.24ರಂದು ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

    ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58 ನೇ ವರ್ಧಂತ್ಯುತ್ಸವ ಅಕ್ಟೋಬರ್ 24 ಶುಕ್ರವಾರದಂದು ಧರ್ಮಸ್ಥಳದಲ್ಲಿ ನೌಕರವೃಂದದವರು, ಊರಿನ ನಾಗರೀಕರು, ಭಕ್ತರು ಹಾಗೂ ಅಭಿಮಾನಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಭಗವಾನ್ ಚಂದ್ರನಾಥಸ್ವಾಮಿ ಬಸದಿ ಹಾಗೂ ಶ್ರೀ ಮಂಜುನಾಥಸ್ವಾಮಿ…

    Spread the love

    ನಾಳೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯಲ್ಲಿ ಉಚಿತ ಮೂಳೆ ಮತ್ತು ಮೂಳೆ ಸಾಂದ್ರತೆ ತಪಾಸಣಾ ಶಿಬಿರ

    ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯಲ್ಲಿ ದಿನಾಂಕ 24/10/2025ರಂದು ಬೆಳಿಗ್ಗೆ 9.30ರಿಂದ ಅಪರಾಹ್ನ 2ಗಂಟೆಯವರೆಗೆ ಉಚಿತ ಮೂಳೆ ಮತ್ತು ಮೂಳೆ ಸಾಂದ್ರತೆ ತಪಾಸಣಾ ಶಿಬಿರವು ನಡೆಯಲಿದೆ. Spread the love

    Spread the love

    You Missed

    ಧರ್ಮಸ್ಥಳದಲ್ಲಿ ಸಂಭ್ರಮ: ಅ.24ರಂದು ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

    • By admin
    • October 23, 2025
    • 18 views
    ಧರ್ಮಸ್ಥಳದಲ್ಲಿ ಸಂಭ್ರಮ: ಅ.24ರಂದು ಡಾ.ಡಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 58ನೇ ವರ್ಧಂತ್ಯುತ್ಸವ

    ನಾಳೆ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯಲ್ಲಿ ಉಚಿತ ಮೂಳೆ ಮತ್ತು ಮೂಳೆ ಸಾಂದ್ರತೆ ತಪಾಸಣಾ ಶಿಬಿರ

    • By admin
    • October 23, 2025
    • 23 views
    ನಾಳೆ  ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯಲ್ಲಿ ಉಚಿತ ಮೂಳೆ ಮತ್ತು ಮೂಳೆ ಸಾಂದ್ರತೆ ತಪಾಸಣಾ ಶಿಬಿರ

    ಸೇವಾಧಾಮದಲ್ಲಿ ದೀಪಾವಳಿ ಹಬ್ಬದ ಆಚರಣೆ

    • By admin
    • October 23, 2025
    • 39 views
    ಸೇವಾಧಾಮದಲ್ಲಿ ದೀಪಾವಳಿ ಹಬ್ಬದ ಆಚರಣೆ

    ಮಂಗಳೂರಿನಲ್ಲಿ ಹೈ ಕೋರ್ಟ್ ಪೀಠ ಸ್ಥಾಪನೆಗಾಗಿ ಬಂಟ್ವಾಳದಲ್ಲಿ ಪೋಸ್ಟ್ ಕಾರ್ಡ್ ಚಳವಳಿ

    • By admin
    • October 23, 2025
    • 215 views
    ಮಂಗಳೂರಿನಲ್ಲಿ ಹೈ ಕೋರ್ಟ್ ಪೀಠ ಸ್ಥಾಪನೆಗಾಗಿ ಬಂಟ್ವಾಳದಲ್ಲಿ ಪೋಸ್ಟ್ ಕಾರ್ಡ್ ಚಳವಳಿ

    17ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡಾಜೆ ಪ್ರೌಢಶಾಲೆಯ ಕು. ಯಕ್ಷಿತಾ.ಜೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    • By admin
    • October 19, 2025
    • 86 views
    17ವಯೋಮಾನದ  ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮುಂಡಾಜೆ ಪ್ರೌಢಶಾಲೆಯ ಕು. ಯಕ್ಷಿತಾ.ಜೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    14ರ ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಪ್ರಾಥಮಿಕ ಶಾಲೆಯ ಕು.ರಕ್ಷಿತಾ. ಜೆ ರಾಷ್ಟ್ರಮಟ್ಟಕ್ಕೆ ಆಯ್ಕೆ

    • By admin
    • October 19, 2025
    • 62 views
    14ರ ವಯೋಮಾನದ ಬಾಲಕಿಯರ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಪ್ರಾಥಮಿಕ ಶಾಲೆಯ ಕು.ರಕ್ಷಿತಾ. ಜೆ  ರಾಷ್ಟ್ರಮಟ್ಟಕ್ಕೆ ಆಯ್ಕೆ