ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ಭವಿಷ್ಯ ನುಡಿದ ಅಮರಗಿರಿ ಶ್ರೀ ‌‌ರಂಗನಾಥಸ್ವಾಮಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಶಾಸಕ ಹರೀಶ್ ಪೂಂಜಾ ಹಾಗೂ ರಕ್ಷಿತ್ ಶಿವರಾಂ ಯುವ ಅಭ್ಯರ್ಥಿಗಳಾಗಿ ಕಣದಲ್ಲಿದ್ದರು. ಜಾತಿ ರಾಜಕಾರಣದ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ವಿಜಯ ಎಂಬುದು ಹಲವರ ಅಭಿಪ್ರಾಯವಾಗಿತ್ತು. ಹರೀಶ್ ಪೂಂಜಾ ರವರಿಗೆ ಕ್ಷೇತ್ರದ ಅಭಿವೃದ್ಧಿಯ ಗೆಲುವು ಬಹುತೇಕ ಖಚಿತವಾಗಿದ್ದು 2023ರ ಚುನಾವಣೆಯಲ್ಲಿ ಸುಮಾರು 17,648 ಮತಗಳಿಂದ ಗೆದ್ದು 2ನೇ ಭಾರಿಗೆ ಬೆಳ್ತಂಗಡಿ ಕ್ಷೇತ್ರದಿಂದ ವಿಧಾನಸಭೆ ಆಯ್ಕೆಯಾಗಿದ್ದಾರೆ.

ಪೂಂಜಾರ ಗೆಲುವಿನ ಸುಳಿವು ನೀಡಿದ ಅಮರಗಿರಿ ಶ್ರೀ ‌ರಂಗನಾಥಸ್ವಾಮಿಯ ಭವಿಷ್ಯ:

ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿಯ ಚಿಕೋನಹಳ್ಳಿಯ ಬೆಟ್ಟದಲ್ಲಿರುವ ತಿರುಗುವ ಕಲ್ಲು ಎಂದೇ ಪ್ರಸಿದ್ಧಿ ಪಡೆದ ಅಮರಗಿರಿ ರಂಗನಾಥಸ್ವಾಮಿಯು ಹರೀಶ್ ಪೂಂಜಾ ರವರ ಗೆಲುವಿನ ಬಗ್ಗೆ ಭವಿಷ್ಯವನ್ನು ನುಡಿದಿತ್ತು. ಅಮರಗಿರಿ ರಂಗನಾಥಸ್ವಾಮಿಯ ಪವಾಡದ ಬಗ್ಗೆ ರಾಜೇಶ್ ಕಾನರ್ಪರವರು ಆಪ್ತಮಿತ್ರರಾದ ಭಾರತೀಯ ಮಜ್ದೂರ್ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಜಯರಾಜ್ ಸಾಲಿಯಾನ್ ಹಾಗೂ ರಾಮಚಂದ್ರ ರವರಿಗೆ ಕ್ಷೇತ್ರದ ಸ್ವಾಮಿಯ ಪವಾಡದ ಬಗ್ಗೆ ಮಾಹಿತಿ ನೀಡಿದ್ದು ಈ ಬಗ್ಗೆ ಮಾಹಿತಿ ಪಡೆದು ಸ್ವಾಮಿಯ ಸನ್ನಿಧಾನಕ್ಕೆ ಬಂದು ಸಮಸ್ಯೆಯ ಬಗ್ಗೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ತಮ್ಮ ಕ್ಷೇತ್ರದ ಜನಪ್ರಿಯ ಶಾಸಕರ ಗೆಲುವಿನ ಭವಿಷ್ಯದ ಬಗ್ಗೆಯೂ ಕೇಳಿಕೊಂಡಾಗ ದೇವರ ಅಭಯ ಸಿಕ್ಕಿದ್ದು ಹರೀಶ್ ಪೂಂಜಾ ರವರ ಗೆಲುವಿನಲ್ಲಿ ರಂಗನಾಥಸ್ವಾಮಿಯ ಪವಾಡವು ಮಹತ್ವ ಪಡೆದಿದೆ.

ಅಮರಗಿರಿ ಶ್ರೀ ರಂಗನಾಥ ಸ್ವಾಮಿಯ ಸನ್ನಿಧಿಯಲ್ಲಿರುವ ತಿರುಗುವ ಕಲ್ಲು

ಅಮರಗಿರಿ ರಂಗನಾಥಸ್ವಾಮಿಯ ಕ್ಷೇತ್ರದ ಹಿನ್ನೆಲೆ:

ಅಮರಗಿರಿ ಶ್ರೀ ಗುಡ್ಡದ ರಂಗನಾಥಸ್ವಾಮಿ ದೇವಸ್ಥಾನ ಹನ್ನೆರಡನೆ ಶತಮಾನದಲ್ಲಿ ಸ್ಥಾಪನೆಯಾಗಿದ್ದು, ತಮಿಳುನಾಡಿನಿಂದ ಶ್ರೀರಾಮಾನುಜಾಚಾರ್ಯರು ಉಚ್ಛಾಟನೆಕೊಂಡು ಮೇಲುಕೋಟೆಯನ್ನು ಮೂಲ ಸ್ಥಾನವಾಗಿಸಿಕೊಂಡರು. ಒಂದು ಸಾರಿ ಅವರು ತಮ್ಮ ಸಹಚರರೊಂದಿಗೆ ಸಂಚಾರ ಮಾಡುವಾಗ ಚನ್ನರಾಯಪಟ್ಟಣ ತಾಲ್ಲೂಕಿನ ಚಿಕ್ಕೋನಹಳ್ಳಿಯಲ್ಲಿ ತಂಗಿದ್ದರಂತೆ.ಆ ರಾತ್ರಿ ರಾಮಾನುಜಾಚಾರ್ಯರು ಮಲಗಿದ್ದಾಗ ಅವರಿಗೆ ವಿಶೇಷವಾದ ಅನುಭವವಾಯಿತು. ಅದನ್ನು ಮರುದಿನ ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಕರೆದು ಈ ಸ್ಥಳ ಬಹಳ ವಿಶೇಷವಾಗಿದೆ, ಇದು ಮುಂದೆ ಪ್ರಸಿದ್ಧವಾದ ವಿಷ್ಣು ಸ್ಥಳವಾಗುತ್ತದೆ. ನೀವೆಲ್ಲ ಸೇರಿ ಇಲ್ಲಿ ವಿಷ್ಣುವಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪ್ರತಿ ನಿತ್ಯ ಪೂಜೆ ಪುನಸ್ಕಾರ ಮತ್ತು ಆರಾಧನೆ ನಡೆಯುವಂತೆ ನೋಡಿ ಕೊಳ್ಳಬೇಕೆಂದು ಹೇಳುತ್ತಾರೆ. ಆಗ ಅವರ ಮಾತಿನಂತೆ ಹಳ್ಳಿಯ ಜನರೆಲ್ಲ ಸೇರಿ ಬಿಲ್ಲು ಬಾಣ ಹಿಡಿದಿರುವ ಮೂಲ ಶ್ರೀ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯಗಳು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ.ಪರಕೀಯರಿಂದ ನಾಶವಾಗುತ್ತಿದ್ದ ದೇವಸ್ಥಾನಗಳನ್ನು ಉಳಿಸಲು ಗ್ರಾಮಸ್ಥರು ರಾಮನ ದೇವಸ್ಥಾನವನ್ನು ರಂಗನಾಥಸ್ವಾಮಿ ದೇವಸ್ಥಾನವೆಂದು ಹೇಳಿ ಕಾಪಾಡುತ್ತಿದ್ದರಂತೆ, ಕಾರಣ ರಂಗನಾಥಸ್ವಾಮಿಯ ಮೇಲಿದ್ದ ನಂಬಿಕೆ, ಭಕ್ತಿ ಪರಕೀಯರಿಗೆ ಹಾಗಿತ್ತಂತೆ. ಈ ರೀತಿಯಿಂದ ಗ್ರಾಮಸ್ಥರು ಎಷ್ಟೋ ದೇವಸ್ಥಾನಗಳು ನಾಶವಾಗದಂತೆ ಉಳಿಸಿಕೊಂಡಿದ್ದಾರೆ ಎನ್ನುವ ಮಾತಿದೆ.

2016ರ ಫೆಬ್ರವರಿಯಲ್ಲಿ 5 ದಿನ ವಿಶೇಷ ಪೂಜೆ ಮತ್ತು ಉತ್ಸವಗಳೊಂದಿಗೆ ಮಲಗಿರುವ ರಂಗನಾಥಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.ರಾಮಾನುಜಾಚಾರ್ಯರು ಆ ಸ್ಥಳದಲ್ಲಿದ್ದಾಗ ತಲೆಗೆ ಇಟ್ಟುಕೊಂಡು ಮಲಗಿದ್ದ ಸಣ್ಣಕಲ್ಲು ಇಂದು ಸಾವಿರಾರು ಜನರ ಮನಸ್ಸಿನಲ್ಲಿರುವ ಗೊಂದಲಕ್ಕೆ ಉತ್ತರ ನೀಡುತ್ತಿದೆ. ಜನರು ಬೇಡಿಕೊಂಡ ಕೆಲಸವಾಗುವುದಾದರೆ ಜನರು ಆ ಕಲ್ಲಿನ ಮೇಲೆ ಕುಳಿತ ತಕ್ಷಣ ಕಲ್ಲು ಬಲಕ್ಕೆ ತಿರುಗುತ್ತದೆ ಇದು ನೋಡಲು ಬಹಳ ವಿಸ್ಮಯಕಾರಿಯಾಗಿದ್ದು, ನೋಡುವವರನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ.

ಆ ಕ್ಷೇತ್ರವನ್ನು ‘ದೊಣ್ಣಪ್ಪ‘ ಎಂಬ ದೇವರು ರಕ್ಷಕರಾಗಿ ಕಾಯುತ್ತಿದ್ದಾರೆ. ಒಂದು ಸಣ್ಣ ಗುಡಿಯು ಇಂದು ರಾಮಾನುಜಾಚಾರ್ಯರು ಹೇಳಿದಂತೆ ಇಂದು ಪ್ರಸಿದ್ಧವಾದ ರಂಗನಾಥಸ್ವಾಮಿ ದೇವಸ್ಥಾನವಾಗಿದ್ದು, ಪ್ರತಿ ಶನಿವಾರವೂ ದಾಸೋಹ ಕಾರ್ಯಕ್ರಮ ನಡೆಯುತ್ತದೆ. ಉತ್ಸವ ದೇವರು ಊರು ಒಳಗಿದ್ದು ರಾಮನವಮಿಯ ದಿನ ರಥೋತ್ಸವ ನಡೆಯುತ್ತದೆ. ಪಂಚರಾತ್ರಾಗಮದ ರೀತಿ ನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತವೆ.ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3ರವರೆಗೆ ತೆರೆದಿರುತ್ತದೆ. ಜನಜಂಗುಳಿ ಜಾಸ್ತಿ ಇದ್ದಲ್ಲಿ ಸಂಜೆ 5.30ರವರೆಗೂ ತೆರೆದಿರುತ್ತದೆ.

Spread the love
  • Related Posts

    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    ನವದೆಹಲಿ: ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಮೂವರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರನ್ನು ನವದೆಹಲಿಗೆ ಕರೆಸಿ, ಅವರ ಜತೆಯಲ್ಲಿ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ…

    Spread the love

    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    ಧರ್ಮಸ್ಥಳ: ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರಕ್ಕೆ ಮುಂಚಾನ ಶ್ರೀ ಮಹಾದೇವಿಕೃಪಾ ಮನೆಯ ಸುಕನ್ಯಾ ಮತ್ತು ಜಯರಾಮ ರಾವ್ ಮತ್ತು ಮಕ್ಕಳು ಸಮರ್ಪಿಸಲಿರುವ ನೂತನ ಶಿಲಾಮಯ ಧ್ವಜಸ್ಥಂಭವು ಕಾರ್ಕಳದಿಂದ ಹೊರಟು ಬೆಳ್ತಂಗಡಿ ಮಾರ್ಗವಾಗಿ ಡಿ.4ರಂದು ಧರ್ಮಸ್ಥಳ ತಲುಪಿ ಧರ್ಮಸ್ಥಳ ಅಣ್ಣಪ್ಪ ಬೆಟ್ಟದಲ್ಲಿ…

    Spread the love

    You Missed

    ಜೇಸಿ ಉತ್ಸವ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ: ಪುಷ್ಠಿ ಮುಂಡಾಜೆ ಪ್ರಥಮ

    • By admin
    • December 8, 2025
    • 14 views
    ಜೇಸಿ ಉತ್ಸವ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ: ಪುಷ್ಠಿ ಮುಂಡಾಜೆ ಪ್ರಥಮ

    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    • By admin
    • December 4, 2025
    • 33 views
    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    • By admin
    • December 4, 2025
    • 51 views
    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    ಸೇವಾ ಭಾರತಿಯ ನೂತನ ಕಾರ್ಯಾಲಯ ಸೇವಾನಿಕೇತನ’ದ ಉದ್ಘಾಟನೆ ಹಾಗೂ 21ನೇ ವರ್ಷದ ಸಂಭ್ರಮ ಕಾರ್ಯಕ್ರಮ

    • By admin
    • December 4, 2025
    • 33 views
    ಸೇವಾ ಭಾರತಿಯ ನೂತನ ಕಾರ್ಯಾಲಯ ಸೇವಾನಿಕೇತನ’ದ ಉದ್ಘಾಟನೆ ಹಾಗೂ 21ನೇ ವರ್ಷದ ಸಂಭ್ರಮ ಕಾರ್ಯಕ್ರಮ

    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಉಪರಾಷ್ಟ್ರಪತಿ ಭೇಟಿ

    • By admin
    • December 4, 2025
    • 40 views
    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಉಪರಾಷ್ಟ್ರಪತಿ ಭೇಟಿ

    ಯುವಜನತೆ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ನವೀನ್ ಚಂದ್ರ ಶೆಟ್ಟಿ

    • By admin
    • December 2, 2025
    • 71 views
    ಯುವಜನತೆ ದುಶ್ಚಟಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಡಾ.ನವೀನ್ ಚಂದ್ರ ಶೆಟ್ಟಿ