ಏಪ್ರಿಲ್ 11 ರಿಂದ 14 ರವರೆಗೆ ಲಸಿಕೆ ಮಹೋತ್ಸವ ನಡೆಸಲು ಎಲ್ಲಾ ರಾಜ್ಯಗಳ ಸಿಎಂಗೆ ಪ್ರಧಾನಿ ಮೋದಿ ಸೂಚನೆ!

ನವದೆಹಲಿ: ಕೋವಿಡ್-19 ಪರಾಮರ್ಶೆಯಲ್ಲಿ ರಾಜ್ಯಗಳ ರಾತ್ರಿ ನಿರ್ಬಂಧಕ್ಕೆ (ಕೊರೊನಾ ಕರ್ಫ್ಯೂ) ಪ್ರಧಾನಿ ಮೋದಿ ಬೆಂಬಲ ನೀಡಿದ್ದು, ರಾತ್ರಿ 9 ಗಂಟೆಗೆ ‘ಕೊರೊನಾ ಕರ್ಫ್ಯೂ’ ಪ್ರಾರಂಭವಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರಸ್ತುತ ದೇಶದಲ್ಲಿರುವ ಕರೋನ ಪರಿಸ್ಥಿತಿ ಕುರಿತು ಪಿಎಂ ನರೇಂದ್ರ ಮೋದಿ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದರು. ಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ರು. ಇನ್ನೂ ಪ್ರಧಾನಿ ನರೇಂದ್ರ ಮೋದಿಯವರು ಏನೆಲ್ಲ ಮಾತನಾಡಿದ್ರು ಅನ್ನೊಂದರ ಪ್ರಮುಖಾಂಶಗಳು‌ ಇಲ್ಲಿದೆ.

ನಾವು ಮೊದಲು ಪರೀಕ್ಷೆಯತ್ತ ಗಮನ ಹರಿಸಬೇಕು, ನಮ್ಮನ್ನು ಬದಲಾಯಿಸಬೇಕಾಗಿದೆ ಮತ್ತು ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸುವುದನ್ನು ತಪ್ಪಿಸಬಾರದು . ಪರೀಕ್ಷೆಯ ಅಗತ್ಯವನ್ನು ನಾವು ಲಘುವಾಗಿ ತೆಗೆದುಕೊಳ್ಳಬಾರದು.

READ ALSO

ರೋಗಲಕ್ಷಣವಿಲ್ಲದ ರೋಗಿಗಳನ್ನು ಪತ್ತೆಹಚ್ಚಲು ನಾವು ಎಲ್ಲಾ ಸಿಎಂಗಳ ಬಳಿಯಲ್ಲಿ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದು, ಸಕ್ರಿಯ ಪರೀಕ್ಷೆಯನ್ನು ನಡೆಸಬೇಕು ಅಂತ ಅವರು ಹೇಳಿದರು.

ಮಹಾರಾಷ್ಟ್ರ, ಗುಜರಾತ್, ಛತ್ತೀಸ್ ಗಢ, ಪಂಜಾಬ್ ಸೇರಿದಂತೆ ಅನೇಕ ರಾಜ್ಯಗಳು ಕೋವಿಡ್19 ಪ್ರಕರಣಗಳಲ್ಲಿ ಉತ್ತುಂಗವನ್ನು ದಾಟಿವೆ. ಇದು ಗಂಭೀರ ಕಾಳಜಿಯಾಗಿದೆ ಕೋವಿಡ್ 19 ವಿರುದ್ಧ ಹೋರಾಡಲು ಮತ್ತೆ ಯುದ್ಧೋಪಾದಿಯಲ್ಲಿ ಕೆಲಸ ಮಾಡುವ ಅಗತ್ಯವಿದೆ. ಎಲ್ಲಾ ಸವಾಲುಗಳ ಹೊರತಾಗಿಯೂ, ನಮಗೆ ಉತ್ತಮ ಅನುಭವ, ಸಂಪನ್ಮೂಲಗಳು ಮತ್ತು ಲಸಿಕೆ ಇದೆ.

ಕೋವಿಡ್19 ಪರೀಕ್ಷೆಗೆ ಒತ್ತು ನೀಡುವಂತೆ ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. 70% ಆರ್ ಟಿ-ಪಿಸಿಆರ್ ಪರೀಕ್ಷೆಗಳನ್ನು ಮಾಡುವುದು ನಮ್ಮ ಗುರಿಯಾಗಿದೆ. ಧನಾತ್ಮಕ ಪ್ರಕರಣಗಳ ಸಂಖ್ಯೆ ಹೆಚ್ಚಾಗಲಿ, ಆದರೆ ಗರಿಷ್ಠ ಪರೀಕ್ಷೆ ಮಾಡಿ. ಸರಿಯಾದ ಮಾದರಿ ಸಂಗ್ರಹ ಬಹಳ ಮುಖ್ಯ, ಅದನ್ನು ಸರಿಯಾದ ಆಡಳಿತದ ಮೂಲಕ ಪರಿಶೀಲಿಸಬಹುದು. ಟೆಸ್ಟ್, ಟ್ರ್ಯಾಕ್, ಟ್ರೀಟ್, ಕೋವಿಡ್ ಮ್ಯಾನೇಜ್​ಮೆಂಟ್​ ಕಡೆಗೆ ನಾವು ಹೆಚ್ಚು ಗಮನ ಹರಿಸಬೇಕಾಗಿದೆ.

ಜನರಲ್ಲಿಯೂ ಮೊದಲಿನಂತೆ ಭಯವಿಲ್ಲ. ಟೆಸ್ಟ್, ಟ್ರ್ಯಾಕ್, ಟ್ರೀಟ್, ಕೋವಿಡ್ ಮ್ಯಾನೇಜ್​ಮೆಂಟ್​ ಕಡೆಗೆ ನಾವು ಹೆಚ್ಚು ಗಮನ ಹರಿಸಬೇಕಾಗಿದೆ. ಕೋವಿಡ್19 ಪತ್ತೆ ಮತ್ತು ಟ್ರ್ಯಾಕಿಂಗ್ ಕೋವಿಡ್19 ಸೋಂಕಿನ ಹರಡುವಿಕೆಯನ್ನು ತಡೆಯುವ ಮಾರ್ಗವಾಗಿದೆ. ಕೋವಿಡ್19 ಪರೀಕ್ಷೆಗೆ ಒತ್ತು ನೀಡುವಂತೆ ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. 70% ಆರ್ ಟಿ-ಪಿಸಿಆರ್ ಪರೀಕ್ಷೆಗಳನ್ನು ಮಾಡುವುದು ನಮ್ಮ ಗುರಿಯಾಗಿದೆ.

ಕೋವಿಡ್-19 ವಿರುದ್ಧ ಹೋರಾಡಲು ಮತ್ತೆ ಯುದ್ಧೋಪಾದಿಯಲ್ಲಿ ಕೆಲಸ ಮಾಡುವ ಅಗತ್ಯವಿದೆ. ಎಲ್ಲಾ ಸವಾಲುಗಳ ಹೊರತಾಗಿಯೂ, ನಮಗೆ ಉತ್ತಮ ಅನುಭವ, ಸಂಪನ್ಮೂಲಗಳು ಮತ್ತು ಲಸಿಕೆ ಇದೆ.

ಕೋವಿಡ್ ಪಾಸಿಟಿವ್ ರೋಗಿಗೆ 72 ಗಂಟೆಗಳಲ್ಲಿ ಕನಿಷ್ಠ 30 ಸಂಪರ್ಕಗಳನ್ನು ಪರೀಕ್ಷಿಸುವುದು ನಮ್ಮ ಗುರಿಯಾಗಿರಬೇಕು. ನಿಯಂತ್ರಿತ ವಲಯಗಳ ಗಡಿಗಳು ನಿರ್ದಿಷ್ಟವಾಗಿರಬೇಕು ಮತ್ತು ಅಸ್ಪಷ್ಟವಾಗಿರಬಾರದು.

ಕೋವಿಡ್ 19 ಲಸಿಕೆಗೆ ಏಪ್ರಿಲ್ 11 ರಿಂದ 14 ರವರೆಗೆ ‘ಟಿಕಾ (ಲಸಿಕೆ) ಉತ್ಸವ’ ಆಚರಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.