ರಾಜ್ಯಸರಕಾರ ನೀಡಿದ ಆಶ್ವಾಸನೆ ಇಡೇರದ ಹಿನ್ನಲೆ ಜೂನ್ 30ರಂದು ರಾಜ್ಯವ್ಯಾಪ್ತಿ ಆಶಾ ಕಾರ್ಯಕತೆಯರ ಪ್ರತಿಭಟನೆ!

ಧಾರವಾಡ: ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜೂ.30ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಬಗ್ಗೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಚಿಂತನೆ ನಡೆಸುತ್ತಿದೆ.

ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜೂ.30ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ ಹೇಳಿದರು.

ನಗರದಲ್ಲಿಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರಿಗೆ 12 ಸಾವಿರ ರೂ. ಮಾಸಿಕ ಗೌರವ ಧನ ನಿಗದಿ ಮಾಡಬೇಕು. ಈ ಬಗ್ಗೆ ಹಲವು ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಸರಕಾರ ಮಾತ್ರ ಕೇವಲ ಆಶ್ವಾಸನೆ8 ನೀಡುತ್ತಿದೆ. ಇದೀಗ ಕೊರೋನಾ ಹಾವಳಿ ಮಧ್ಯೆಯೂ ಕಾರ್ಯಕರ್ತೆಯರು ಸಮೀಕ್ಷೆ ಕಾರ್ಯದಲ್ಲಿತೊಡಗಿದ್ದಾರೆ. ಆದರೆ ಸರಕಾರ ಅವರಿಗೆ ಅಗತ್ಯ ಸುರಕ್ಷತಾ ವಸ್ತುಗಳನ್ನು ನೀಡದೆ ಅವರ ಆರೋಗ್ಯವನ್ನು ನಿರ್ಲಕ್ಷ್ಯ ಮಾಡಿದೆ ಎಂದು ಆರೋಪಿಸಿದರು.

ಹೀಗಾಗಿ ಕಾರ್ಯಕರ್ತೆಯರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜೂ.30ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕೇಂದ್ರಗಳಲ್ಲಿತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. ನಂತರ ಜು.1ರಿಂದ 7ರವರೆಗೆ ಜನಪ್ರತಿನಿಧಿಗಳನ್ನು ಭೇಟಿ ಮಾಡಿ, ಮುಖ್ಯಮಂತ್ರಿ ಮನವೊಲಿಸುವಂತೆ ಮನವಿ ಮಾಡಲಾಗುವುದು. ಆದರೂ ಸರಕಾರ ಸಮಸ್ಯೆ ಪರಿಹರಿಸದೇ ಇದ್ದಲ್ಲಿ ಎಲ್ಲ ಆರೋಗ್ಯ ಸೇವೆಗಳನ್ನು ಬಂದ್‌ ಮಾಡಿ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸುನಂದಾ ವಾಲೀಕಾರ, ಮಂಜುಳಾ ಸಾವಂತ, ದುರ್ಗಮ್ಮ ಹುಬ್ಬಳ್ಳಿ, ಭುವನಾ ಬಳ್ಳಾರಿ, ಸುಜಾತಾ ಕೊಟಬಾಗಿ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Spread the love
  • Related Posts

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    Belthangady: ತಾಲೂಕಿನ ಹಲವೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ.Shishila, Kokkada, Dharmasthala, Arasinamakki, Ujire ಹಾಗೂ Nidle ಮೊದಲಾದ ಕಡೆಗಳಲ್ಲಿ ಗುಡುಗು-ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ. ಉಳಿದ ಕೆಲವು ಪ್ರದೇಶಗಳಲ್ಲಿ ತುಂತುರು ಹಾಗೂ ಸಾಮಾನ್ಯ ಮಳೆಯಾಗಿದೆ.ತಾಲೂಕಿನಲ್ಲಿ ಫೆಬ್ರವರಿ 21ರಂದು ಕೆಲವೆಡೆ…

    Spread the love

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಬಂಗಾಡಿ: ಸೂರ್ಯ-ಚಂದ್ರ ಹೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್, ಕರ್ನಾಟಕ ಸರಕಾರ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಭಾಗಿತ್ವದೊಂದಿಗೆ 28ನೇ ವರ್ಷದ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ “ಬಂಗಾಡಿ ಕೊಲ್ಲಿ” ಬಯಲು ಕಂಬಳವು ಶ್ರೀ…

    Spread the love

    You Missed

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    • By admin
    • March 15, 2026
    • 60 views
    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    • By admin
    • March 14, 2026
    • 101 views
    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    • By admin
    • March 14, 2026
    • 43 views
    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ  ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    • By admin
    • March 13, 2026
    • 610 views
    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    • By admin
    • March 10, 2026
    • 150 views
    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ  ಅರ್ಜಿ ಆಹ್ವಾನ

    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ

    • By admin
    • March 10, 2026
    • 63 views
    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ