ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಿಡಿಗಲ್ ಸೀಟು ಎಂಬಲ್ಲಿ ಆಟೋ ಚಾಲಕನಿಗೆ ಚೂರಿ ಇರಿದು ಆರೋಪಿ ಪರಾರಿಯಾದ ಘಟನೆ ವರದಿಯಾಗಿದೆ.
ಉಜಿರೆ ಗ್ರಾಮದ ಗುರಿಪಳ್ಳ ಮಾಳಿಗೆ ಮನೆ ನಿವಾಸಿ ಸದಾನಂದ (58)ಎಂಬವರ ಆಟೋ ರಿಕ್ಷಾವನ್ನು ಬಾಡಿಗೆ ಪಡೆದು ಸೀಟು ಕಾಡಿನ ಸನಿಹದಲ್ಲಿ ಬರುತ್ತಿದ್ದಂತೆ ಚೂರಿ ಇರಿದು ಆರೋಪಿ ಪರಾರಿಯಾಗಿದ್ದು,
ಆರೋಪಿಯನ್ನು ಗುರಿಪಳ್ಳ ನಿವಾಸಿ ಚಂದ್ರ ಎಂದು ಗುರುತಿಸಲಾಗಿದೆ. ಕುತ್ತಿಗೆ ಭಾಗಕ್ಕೆ ಗಾಯಗೊಂಡ ಆಟೋ ಚಾಲಕ ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರು ಸ್ಥಳಕಾಗಮಿಸಿ ಪ್ರಕರಣಕ್ಕೆ ಸಂಬಂಂಧಿಸಿದಂತೆ ಮಾಹಿತಿ ಕಲೆ ಹಾಕುತ್ತಿದ್ದಾರೆ.