ನವಜೀವನ ಸದಸ್ಯರಿಗೆ ದಾರಿದೀಪವಾದ ಧರ್ಮಸ್ಥಳ ಸಂಸ್ಥೆ ಹೈನುಗಾರಿಕೆ ತರಬೇತಿ ಇತರರಿಗೂ ಪ್ರೇರಣೆಯಾಗಲಿ : ರಾಮಸ್ವಾಮಿ

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಹಾಗೂ ರುಡ್ ಸೆಟ್ ಸಂಸ್ಥೆ ಇದರ ಸಂಯುಕ್ತ ಆಶ್ರಯದಲ್ಲಿ ನವಜೀವನ ಸಮಿತಿ ಸದಸ್ಯರಿಗೆ ಹಮ್ಮಿಕೊಂಡ 10 ದಿನದ ಹೈನುಗಾರಿಕೆ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಕಾರ್ಯಕ್ರಮವು ಅರಿಶಿನಕುಂಟೆ ನೆಲಮಂಗಲದಲ್ಲಿ ನಡೆಯಿತು.

ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ 25 ತಾಲೂಕುಗಳಲ್ಲಿ ಇದುವರೆಗೆ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ವತಿಯಿಂದ 98 ಮದ್ಯವರ್ಜನ ಶಿಬಿರ ಗಳನ್ನು ನಡೆಸಿ 6500 ಮಂದಿ ವ್ಯಸನಿಗಳನ್ನು ದುಶ್ಚಟ ಮುಕ್ತ ಬದುಕಿಗೆ ಪರಿವರ್ತನೆ ಗೊಳಿಸಿ ವ್ಯಸನ ಮುಕ್ತಗೊಳಿಸಲಾಗಿದೆ.

READ ALSO

ಪಾನಮುಕ್ತ ಸದಸ್ಯರು ಸ್ವಾವಲಂಬಿಗಳಾಗಿ ಬದುಕಬೇಕು ಎನ್ನುವ ಉದ್ದೇಶದಿಂದ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ತುಮಕೂರು ಜಿಲ್ಲೆಯ ತಿಪಟೂರು ಹಾಗೂ ತುರುವೇಕೆರೆ ತಾಲೂಕಿನಲ್ಲಿ ನಡೆದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಪಾನಮುಕ್ತರಾದ 28 ಜನ ನವಜೀವನ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಿ 10 ದಿನದ ಹೈನುಗಾರಿಕೆ ತರಬೇತಿ ಕಾರ್ಯಗಾರವನ್ನು ಅರಿಶಿನಕುಂಟೆ ನಡೆಸಲಾಯಿತು.

10 ದಿನದ ತರಬೇತಿ ಕಾರ್ಯಗಾರದಲ್ಲಿ ಶಿಬಿರಾರ್ಥಿ ಬಂಧುಗಳಿಗೆ ಉತ್ತಮ ಹೈನು ತಳಿಗಳ ಬಗ್ಗೆ ಉತ್ತಮ ರಾಸುಗಳ ಬಗ್ಗೆ ಅವುಗಳಿಗೆ ಬರುವ ರೋಗ ಲಕ್ಷಣಗಳ ಬಗ್ಗೆ ಮತ್ತು ಔಷಧಿ ಉಪಚಾರಗಳ ಬಗ್ಗೆ ಮೇವುಗಳ ಬಗ್ಗೆ ಎರೆಹುಳು ಗೊಬ್ಬರ ತಯಾರಿಕೆ ಬಗ್ಗೆ ಹೈನುಗಾರಿಕೆ ಸೇರಿದಂತೆ ಸಮಗ್ರ ಕೃಷಿಯ ಬಗ್ಗೆ ಹಾಗೂ ಬ್ಯಾಂಕ್ ಅಧಿಕಾರಿಗಳಿಂದ ಬ್ಯಾಂಕಿನ ವ್ಯವಹಾರಗಳ ಬಗ್ಗೆ ಮತ್ತು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಡಾ.ಎಲ್.ಎಚ್ ಮಂಜುನಾಥರವರು ಆಗಮಿಸಿ ಲಾಭದಾಯಕ ಹೈನುಗಾರಿಕೆ ಆರೈಕೆ ಬಗ್ಗೆ ಮಾಹಿತಿಯನ್ನು ನೀಡಿದ್ದು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾಯಸ್ ಮಾಹಿತಿ ಮಾರ್ಗದರ್ಶನ ನೀಡಿದರು.

ಹೈನುಗಾರಿಕೆ ತರಬೇತಿ ಕಾರ್ಯಗಾರದ ಉದ್ಘಾಟನೆ ಕಾರ್ಯಕ್ರಮವನ್ನು ಬೆಂಗಳೂರು ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ M ವರು ನೆರವೇರಿಸಿದರು.

ಸಮಾರೋಪ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷರಾದ ರಾಮಸ್ವಾಮಿಯವರು ಮಾತನಾಡುತ್ತ ಧರ್ಮಾಧಿಕಾರಿಯವರ ಮಾರ್ಗದರ್ಶನದಂತೆ ಜನಜಾಗೃತಿ ಕಾರ್ಯಕ್ರಮದಡಿಯಲ್ಲಿ ಹಲವಾರು ಮಂದಿ ವ್ಯಸನ ಮುಕ್ತರಾಗಿದ್ದು ನವಜೀವನವನ್ನು ಕಾಣಲು ಸಾಧ್ಯವಾಗಿದೆ ಇದರ ಜೊತೆಯಲ್ಲಿಯೇ ರಾಜ್ಯದಲ್ಲೇ ಪ್ರಥಮ ಬಾರಿಗೆ 10ದಿನದ ಇಂತಹ ಪ್ರೇರಣಾದಾಯಕವಾದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಬಹಳ ಸಂತೋಷದಾಯಕವಾಗಿದೆ. ರುಡ್ ಸೆಟ್ ಸಂಸ್ಥೆ ಹಾಗೂ ಗ್ರಾಮಾಭಿವೃದ್ಧಿ ಯೋಜನೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಸರಕಾರ ಮಾಡದ ಕೆಲಸವನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮೂಲಕ ಮಾಡುತ್ತಿದ್ದು ಬಡವರ ಪಾಲಿಗೆ ಇದು ಆಶಾದಾಯಕವಾಗಿದೆ. ನವಜೀವನ ಸದಸ್ಯರಿಗೆ ಇಂತಹ ತರಬೇತಿಯೊಂದಿಗೆ ತನ್ನ ಬದುಕನ್ನು ಕಟ್ಟಿಕೊಳ್ಳಲು ಉಪಯುಕ್ತವಾದ ತರಬೇತಿ ಇದಾಗಿದ್ದು ಇದು ಇನ್ನುಳಿದ ನವಜೀವನ ಸದಸ್ಯರಿಗೆ ಪ್ರೇರಣೆಯಾಗಲಿ ಎಂದು ಶುಭಹಾರೈಸಿದರು.

ತರಬೇತಿ ಕಾರ್ಯಗಾರವನ್ನು ಪಶುವೈದ್ಯ ಅಧಿಕಾರಿಗಳಾದ ಡಾ. ಅಬ್ದುಲ್ ಜಲೀಲ್ ರವರು rudset ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಉದಯಕುಮಾರ್ ರವರು ನೆರವೇರಿಸಿದರು.

ಕಾರ್ಯಗಾರದಲ್ಲಿ ಒಂದು ದಿನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗೋವಿನಹಳ್ಳಿ ಶ್ರೀ ಮಂಜುನಾಥ ರವರ ಮಾದರಿ ಹೈನುಗಾರಿಕೆ ಘಟಕ ಭೇಟಿ ನೀಡಿ ನವಜೀವನ ಸದಸ್ಯರಿಗೆ ತರಬೇತಿಯನ್ನು ಕೊಡಿಸಲಾಯಿತು.

ಸಮಾರೋಪ ಕಾರ್ಯಕ್ರಮದಲ್ಲಿ ಡಾ.ಎಲ್.ಎಚ್. ಮಂಜುನಾಥ್ ರವರು ಬರೆದ ಮಿಶ್ರತಳಿಗಳ ಸಾಕಣಿಗೊಂದು ಮಾದರಿ ಎಂಬ ಪುಸ್ತಕವನ್ನು ಎಲ್ಲಾ ಶಿಬಿರಾರ್ಥಿಗಳಿಗೆ ವಿತರಿಸಲಾಯಿತು. ಜೊತೆಗೆ ರುಡ್ ಸೆಟ್ ಸಂಸ್ಥೆಯಿಂದ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಕಾರ್ಯಕ್ರಮದ ನಿರ್ವಹಣೆಯನ್ನು ಜನಜಾಗೃತಿ ವೇದಿಕೆಯ ಬೆಂಗಳೂರು ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ ನೆರವೇರಿಸಿದರು.