ಭಜನೆಯಿಂದ ಉತ್ತಮ ಸಂಸ್ಕಾರಯುತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ: ಡಾ. ಎಂ. ಮೋಹನ ಆಳ್ವ

ಬೆಳ್ತಂಗಡಿ: ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಪರಿಶುದ್ಧ ದೇಹ ಮತ್ತು ಮನಸಿನಿಂದ ರಾಗ, ತಾಳ, ಲಯಬದ್ಧವಾಗಿ ಭಜನೆ ಮಾಡುವುದರಿಂದ ಉತ್ತಮ ಸಂಸ್ಕಾರಯುತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮೂಡಬಿದ್ರೆಯ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.

ಅವರು ಭಾನುವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ 27 ನೇ ವರ್ಷದ ಭಜನಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು. ಭಜನೆಯಿಂದ ಸುಲಭದಲ್ಲಿ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು, ಭಜನೆಯಿಂದ ಜನಜಾಗೃತಿ ಉಂಟಾಗಿ ಎಲ್ಲರೂ ಸಮಾನರಾಗಿ, ಗುರು-ಹಿರಿಯರಿಂದ ಮಾರ್ಗದರ್ಶನ, ಪ್ರೇರಣೆ ಪಡೆದು ದೃಢಭಕ್ತಿ ಮತ್ತು ಪರಿಶುದ್ಧ ಮನಸಿನಿಂದ ಭಜನೆ ಮಾಡಿದಾಗ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ.

ಮಾಣಿಲದ ಮೋಹನದಾಸ ಸ್ವಾಮೀಜಿ ಶುಭಶಂಸನೆ ಮಾಡಿ, ಭಜನಾ ತರಬೇತಿ ಪಡೆದವರು ತಮ್ಮ ಮಕ್ಕಳಿಗೂ ಭಜನೆಯ ಮೂಲಕ ಉತ್ತಮ ಸಂಸ್ಕಾರ ನೀಡಬೇಕು. ಭಜನೆ ಮಾಡುವಾಗ ನಿತ್ಯವೂ ಶಿವಪಂಚಾಕ್ಷರಿ ಪಠಣ ಮಾಡಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಜನಾ ತರಬೇತಿ ಪಡೆದವರು ಶಿಸ್ತು, ಸಮಯಪಾಲನೆ, ಸ್ವಚ್ಛತೆಯೊಂದಿಗೆ ನಾಯಕತ್ವಗುಣವನ್ನೂ ಬೆಳೆಸಿಕೊಂಡು ಪ್ರಗತಿಯ ರೂವಾರಿಗಳಾಗಬೇಕು. ಸಂಸ್ಕೃತಿ ಪ್ರಸಾರದ ರಾಯಭಾರಿಗಳಾಗಿ ಎಲ್ಲರನ್ನೂ ನಮ್ಮವರೇ ಎಂದು ಭಾವಿಸಿ ವಿಶ್ವಮಾನವರಾಗಿ ಸಮಾಜಸೇವೆ ಮಾಡಬೇಕು. ನೃತ್ಯ ಭಜನೆಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.ಹೇಮಾವತಿ ವೀ. ಹೆಗ್ಗಡೆ ಮತ್ತು ಡಿ. ಹಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಭಜನಾ ಕಮ್ಮಟದ ಕಾಯದರ್ಶಿ ಎ.ವಿ. ಶೆಟ್ಟಿ ವರದಿ ಸಾದರ ಪಡಿಸಿದರು.

ಭಜನಾಕಮ್ಮಟದ ಸಂಚಾಲಕ ಸುಬ್ರಹ್ಮಣ್ಯಪ್ರಸಾದ್ ಪ್ರಾಸ್ತಾವಿಕವಾಗಿ ಮಾತುಗಳೊಂದಿಗೆ ಸ್ವಾಗತಿಸಸಿದರು. ನಿವೃತ್ತ ಮುಖ್ಯ ಶಿಕ್ಷಕ ಪದ್ಮರಾಜ್ ಧನ್ಯವಾದವಿತ್ತರು. ಧರ್ಮಸ್ಥಳದ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಪದ್ಮಶ್ರೀ ಕಾರ್ಯಕ್ರಮ ನಿರ್ವಹಿಸಿದರು.

Spread the love
  • Related Posts

    ನಾಗಶ್ರೀ ಗೆಳೆಯರ ಬಳಗ ಕೆಲೆಂಜಿಮಾರು, ಬಂದಾರು ಇದರ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗೆ ಭೇಟಿ ನೀಡಿ ಶುಭ ಹಾರೈಸಿದ ಶಾಸಕ ಹರೀಶ್ ಪೂಂಜ

    ಬಂದಾರು: (ಡಿ. 04) ಬಂದಾರು ಗ್ರಾಮ ನಾಗಶ್ರೀ ಗೆಳೆಯರ ಬಳಗ ಕೆಲೆಂಜಿಮಾರು, ಇದರ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆ ಪೆಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವಠಾರದಲ್ಲಿ ಡಿ. 4 ರಂದು ನಡೆಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್…

    Spread the love

    ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 418 ಶಾಲೆಗಳಿಗೆ 2.50ಕೋಟಿ ವೆಚ್ಚದಲ್ಲಿ ಪಿಠೋಪಕರಣಗಳ ಒದಗಣೆ

    Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು 418 ಶಾಲೆಗಳಿಗೆ ಪಿಠೋಪಕರಣಗಳ ವಿತರಣೆಗೆ ಚಾಲನೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನದೀಪ ಶಿಕ್ಷಣ ಕಾರ್ಯಕ್ರಮದಡಿ ರೂ. 2.50 ಕೋಟಿ ವೆಚ್ಚದಲ್ಲಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ,…

    Spread the love

    You Missed

    ಕನ್ಯಾಡಿ ಸೇವಾಭಾರತಿಯಿಂದ ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಭೇಟಿ

    • By admin
    • January 8, 2026
    • 32 views
    ಕನ್ಯಾಡಿ ಸೇವಾಭಾರತಿಯಿಂದ ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಭೇಟಿ

    ನಾಗಶ್ರೀ ಗೆಳೆಯರ ಬಳಗ ಕೆಲೆಂಜಿಮಾರು, ಬಂದಾರು ಇದರ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗೆ ಭೇಟಿ ನೀಡಿ ಶುಭ ಹಾರೈಸಿದ ಶಾಸಕ ಹರೀಶ್ ಪೂಂಜ

    • By admin
    • January 5, 2026
    • 18 views
    ನಾಗಶ್ರೀ ಗೆಳೆಯರ ಬಳಗ ಕೆಲೆಂಜಿಮಾರು, ಬಂದಾರು ಇದರ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗೆ ಭೇಟಿ ನೀಡಿ ಶುಭ ಹಾರೈಸಿದ ಶಾಸಕ ಹರೀಶ್ ಪೂಂಜ

    “ಪರೀಕ್ಷಾ ಸಿದ್ಧತೆ ಕಾರ್ಯಾಗಾರ ಪೋಷಕ- ವಿದ್ಯಾರ್ಥಿ ಸಂವಾದ” ಕಾರ್ಯಕ್ರಮ

    • By admin
    • January 3, 2026
    • 31 views
    “ಪರೀಕ್ಷಾ ಸಿದ್ಧತೆ ಕಾರ್ಯಾಗಾರ ಪೋಷಕ- ವಿದ್ಯಾರ್ಥಿ ಸಂವಾದ” ಕಾರ್ಯಕ್ರಮ

    ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 418 ಶಾಲೆಗಳಿಗೆ 2.50ಕೋಟಿ ವೆಚ್ಚದಲ್ಲಿ ಪಿಠೋಪಕರಣಗಳ ಒದಗಣೆ

    • By admin
    • January 1, 2026
    • 86 views
    ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 418 ಶಾಲೆಗಳಿಗೆ 2.50ಕೋಟಿ ವೆಚ್ಚದಲ್ಲಿ ಪಿಠೋಪಕರಣಗಳ ಒದಗಣೆ

    ಅರ್ಪಣಂ2025

    • By admin
    • December 29, 2025
    • 43 views

    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಬಿ.ಸಿ. ಮಾದರಿಯ ಶ್ರೇಷ್ಠ ಎಂ.ಎಸ್.ಎಂ.ಇ. ಪೋಷಕ ಸಂಸ್ಥೆ-2025 ಪ್ರಶಸ್ತಿ

    • By admin
    • December 24, 2025
    • 61 views
    ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಬಿ.ಸಿ. ಮಾದರಿಯ ಶ್ರೇಷ್ಠ ಎಂ.ಎಸ್.ಎಂ.ಇ. ಪೋಷಕ ಸಂಸ್ಥೆ-2025 ಪ್ರಶಸ್ತಿ