ಭಜನೆಯಿಂದ ಉತ್ತಮ ಸಂಸ್ಕಾರಯುತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ: ಡಾ. ಎಂ. ಮೋಹನ ಆಳ್ವ

ಬೆಳ್ತಂಗಡಿ: ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಪರಿಶುದ್ಧ ದೇಹ ಮತ್ತು ಮನಸಿನಿಂದ ರಾಗ, ತಾಳ, ಲಯಬದ್ಧವಾಗಿ ಭಜನೆ ಮಾಡುವುದರಿಂದ ಉತ್ತಮ ಸಂಸ್ಕಾರಯುತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮೂಡಬಿದ್ರೆಯ ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.

ಅವರು ಭಾನುವಾರ ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ 27 ನೇ ವರ್ಷದ ಭಜನಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು. ಭಜನೆಯಿಂದ ಸುಲಭದಲ್ಲಿ ದೇವರ ಅನುಗ್ರಹಕ್ಕೆ ಪಾತ್ರರಾಗಬಹುದು, ಭಜನೆಯಿಂದ ಜನಜಾಗೃತಿ ಉಂಟಾಗಿ ಎಲ್ಲರೂ ಸಮಾನರಾಗಿ, ಗುರು-ಹಿರಿಯರಿಂದ ಮಾರ್ಗದರ್ಶನ, ಪ್ರೇರಣೆ ಪಡೆದು ದೃಢಭಕ್ತಿ ಮತ್ತು ಪರಿಶುದ್ಧ ಮನಸಿನಿಂದ ಭಜನೆ ಮಾಡಿದಾಗ ಮಾನಸಿಕ ಶಾಂತಿ, ನೆಮ್ಮದಿ ಸಿಗುತ್ತದೆ.

ಮಾಣಿಲದ ಮೋಹನದಾಸ ಸ್ವಾಮೀಜಿ ಶುಭಶಂಸನೆ ಮಾಡಿ, ಭಜನಾ ತರಬೇತಿ ಪಡೆದವರು ತಮ್ಮ ಮಕ್ಕಳಿಗೂ ಭಜನೆಯ ಮೂಲಕ ಉತ್ತಮ ಸಂಸ್ಕಾರ ನೀಡಬೇಕು. ಭಜನೆ ಮಾಡುವಾಗ ನಿತ್ಯವೂ ಶಿವಪಂಚಾಕ್ಷರಿ ಪಠಣ ಮಾಡಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಭಜನಾ ತರಬೇತಿ ಪಡೆದವರು ಶಿಸ್ತು, ಸಮಯಪಾಲನೆ, ಸ್ವಚ್ಛತೆಯೊಂದಿಗೆ ನಾಯಕತ್ವಗುಣವನ್ನೂ ಬೆಳೆಸಿಕೊಂಡು ಪ್ರಗತಿಯ ರೂವಾರಿಗಳಾಗಬೇಕು. ಸಂಸ್ಕೃತಿ ಪ್ರಸಾರದ ರಾಯಭಾರಿಗಳಾಗಿ ಎಲ್ಲರನ್ನೂ ನಮ್ಮವರೇ ಎಂದು ಭಾವಿಸಿ ವಿಶ್ವಮಾನವರಾಗಿ ಸಮಾಜಸೇವೆ ಮಾಡಬೇಕು. ನೃತ್ಯ ಭಜನೆಗೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.ಹೇಮಾವತಿ ವೀ. ಹೆಗ್ಗಡೆ ಮತ್ತು ಡಿ. ಹಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಭಜನಾ ಕಮ್ಮಟದ ಕಾಯದರ್ಶಿ ಎ.ವಿ. ಶೆಟ್ಟಿ ವರದಿ ಸಾದರ ಪಡಿಸಿದರು.

ಭಜನಾಕಮ್ಮಟದ ಸಂಚಾಲಕ ಸುಬ್ರಹ್ಮಣ್ಯಪ್ರಸಾದ್ ಪ್ರಾಸ್ತಾವಿಕವಾಗಿ ಮಾತುಗಳೊಂದಿಗೆ ಸ್ವಾಗತಿಸಸಿದರು. ನಿವೃತ್ತ ಮುಖ್ಯ ಶಿಕ್ಷಕ ಪದ್ಮರಾಜ್ ಧನ್ಯವಾದವಿತ್ತರು. ಧರ್ಮಸ್ಥಳದ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಪದ್ಮಶ್ರೀ ಕಾರ್ಯಕ್ರಮ ನಿರ್ವಹಿಸಿದರು.

Spread the love
  • Related Posts

    ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆಸರ್‌ದ ಕಂಡೊಡೊಂಜಿ ದಿನ’ ಮುಂದಿನ ಪೀಳಿಗೆಗೆ ತುಳುನಾಡಿನ ಮೂಲ ಪರಂಪರೆ ಉಳಿಸುವ & ಪರಿಚಯಿಸುವ ಪ್ರಯತ್ನ: ಅನಿಲ್ ಕುಮಾರ್ ಎಸ್.ಎಸ್

    ಬೆಳ್ತಂಗಡಿ: ತುಳುನಾಡಿನ ಸಂಸ್ಕೃತಿ, ಆಚಾರ-ವಿಚಾರ, ಕೃಷಿ ಪರಂಪರೆ ಹಾಗೂ ಗ್ರಾಮೀಣ ಬದುಕಿನ ವೈಶಿಷ್ಟ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್…

    Spread the love

    ಅಪ್ರತಿಮ ದೇಶಪ್ರೇಮದ ಬಾಂಜಾರುಮಲೆ, ಕಾಡಿನ ಕತ್ತಲಲ್ಲೂ ಬೆಳಗಿದ ಸ್ವಾತಂತ್ರ್ಯದ ಜ್ಯೋತಿ — ಮತದಾನದಲ್ಲೂ ಶೇ.100, ದೇಶಭಕ್ತಿಯಲ್ಲೂ ಶೇ.100!

    ಬೆಳ್ತಂಗಡಿ: ಆಧುನಿಕತೆಯ ಆಡಂಬರವಿಲ್ಲ… ಮೊಬೈಲ್ ನೆಟ್‌ವರ್ಕ್ ಇಲ್ಲ… ಸುಗಮ ಸಂಚಾರಕ್ಕೆ ಉತ್ತಮ ರಸ್ತೆಗಳಿಲ್ಲ. ಆದರೆ ಎದೆಯಾಳದಲ್ಲಿ ಅಖಂಡ ದೇಶಪ್ರೇಮವಿದೆ! ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ದುರ್ಗಮ ಮಲೆನಾಡಿನ ಕಾನನದ ನಡುವೆ ಇರುವ ಪುಟ್ಟ ಹಳ್ಳಿ ಬಾಂಜಾರುಮಲೆ. ಮತದಾನದಲ್ಲಿ…

    Spread the love

    You Missed

    ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆಸರ್‌ದ ಕಂಡೊಡೊಂಜಿ ದಿನ’ ಮುಂದಿನ ಪೀಳಿಗೆಗೆ ತುಳುನಾಡಿನ ಮೂಲ ಪರಂಪರೆ ಉಳಿಸುವ & ಪರಿಚಯಿಸುವ ಪ್ರಯತ್ನ: ಅನಿಲ್ ಕುಮಾರ್ ಎಸ್.ಎಸ್

    • By admin
    • August 23, 2026
    • 4 views
    ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೆಸರ್‌ದ ಕಂಡೊಡೊಂಜಿ ದಿನ’ ಮುಂದಿನ ಪೀಳಿಗೆಗೆ ತುಳುನಾಡಿನ ಮೂಲ ಪರಂಪರೆ ಉಳಿಸುವ & ಪರಿಚಯಿಸುವ ಪ್ರಯತ್ನ: ಅನಿಲ್ ಕುಮಾರ್ ಎಸ್.ಎಸ್

    ಅಪ್ರತಿಮ ದೇಶಪ್ರೇಮದ ಬಾಂಜಾರುಮಲೆ, ಕಾಡಿನ ಕತ್ತಲಲ್ಲೂ ಬೆಳಗಿದ ಸ್ವಾತಂತ್ರ್ಯದ ಜ್ಯೋತಿ — ಮತದಾನದಲ್ಲೂ ಶೇ.100, ದೇಶಭಕ್ತಿಯಲ್ಲೂ ಶೇ.100!

    • By admin
    • August 20, 2026
    • 7 views
    ಅಪ್ರತಿಮ ದೇಶಪ್ರೇಮದ ಬಾಂಜಾರುಮಲೆ, ಕಾಡಿನ ಕತ್ತಲಲ್ಲೂ ಬೆಳಗಿದ ಸ್ವಾತಂತ್ರ್ಯದ ಜ್ಯೋತಿ — ಮತದಾನದಲ್ಲೂ ಶೇ.100, ದೇಶಭಕ್ತಿಯಲ್ಲೂ ಶೇ.100!

    ಓ ಮಾನವರೇ, ಯಾವಾಗ ಬರುವುದೋ ಒಳ್ಳೆಯ ಬುದ್ಧಿ! “ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಬದುಕುವ ವಾನರಗಳಿಗೆ ಕುರುಕುರೆ ಏಕೆ?”

    • By admin
    • August 20, 2026
    • 13 views
    ಓ ಮಾನವರೇ, ಯಾವಾಗ ಬರುವುದೋ ಒಳ್ಳೆಯ ಬುದ್ಧಿ! “ಪ್ರಕೃತಿಯ ಮಡಿಲಲ್ಲಿ ಸ್ವಚ್ಛಂದವಾಗಿ ಬದುಕುವ ವಾನರಗಳಿಗೆ ಕುರುಕುರೆ ಏಕೆ?”

    ನಾಗರಪಂಚಮಿ ಪ್ರಯುಕ್ತ ಸೋಮವಾರ ದ.ಕ. ಜಿಲ್ಲೆಗೆ ಸಾರ್ವತ್ರಿಕ ರಜೆ

    • By admin
    • August 16, 2026
    • 10 views
    ನಾಗರಪಂಚಮಿ ಪ್ರಯುಕ್ತ ಸೋಮವಾರ ದ.ಕ. ಜಿಲ್ಲೆಗೆ ಸಾರ್ವತ್ರಿಕ ರಜೆ

    ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

    • By admin
    • August 15, 2026
    • 13 views
    ಮುಂಡಾಜೆ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

    ನೀಟ್‌ನಲ್ಲಿ ಅತ್ಯುತ್ತಮ ಸಾಧನೆ: ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ‘ಆರೋಗ್ಯ ರತ್ನ’ ಪ್ರಶಸ್ತಿ

    • By admin
    • August 14, 2026
    • 27 views
    ನೀಟ್‌ನಲ್ಲಿ ಅತ್ಯುತ್ತಮ ಸಾಧನೆ: ಎಕ್ಸೆಲ್ ಪಿಯು ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ‘ಆರೋಗ್ಯ ರತ್ನ’ ಪ್ರಶಸ್ತಿ