ಬಂಗಾಡಿ: ಬಂಗಾಡಿ ಸೀಮೆಯ ಧರ್ಮ ದೇವತೆಗಳಾದ ಉಳ್ಳಾಕುಳ ಮೂಲಸ್ಥಾನ ಶ್ರೀ ಕ್ಷೇತ್ರ ಕರುವಲ್ಲ ಕಲ್ಲಗುಂಡದಲ್ಲಿ ಉತ್ತಮ ವಾಸ್ತು ವಿನ್ಯಾಸದೊಂದಿಗೆ ನೂತನ ಭವ್ಯ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ದಿನಾಂಕ 26.11.2025 ಬುಧವಾರದಂದು ಬೆಳಿಗ್ಗೆ 9.30ಕ್ಕೆ ಸರಿಯಾಗಿ ನಡೆಯಲಿದೆ.

ಬೆಳಿಗ್ಗೆ 09.30ರ ಧನುರ್ಲಗ್ನ ಸುಮುಹೂರ್ತದಲ್ಲಿ ನೀಲೇಶ್ವರ ಆಲಂಬಾಡಿ ಶ್ರೀ ವೇ। ಮೂ। ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ, ದೈವಜ್ಞರಾದ ನೆಲ್ಯಾಡಿ ಶ್ರೀ ಶ್ರೀಧರ ಗೋರೆಯವರ ಪ್ರಶ್ನಾಚಿಂತನೆಯಂತೆ, ಖ್ಯಾತ ವಾಸ್ತು ಶಿಲ್ಪಿಗಳಾದ ಪ್ರಸಾದ್ ಭಟ್ ಮುನಿಯಂಗಳ ಇವರ ವಾಸ್ತು ವಿನ್ಯಾಸದಲ್ಲಿ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕೇಸರರಾದ ಶ್ರೀ ಶರತ್ ಕೃಷ್ಣ ಪಡ್ಡೆಟ್ನಾಯ, ಇವರ ಘನ ಉಪಸ್ಥಿತಿಯಲ್ಲಿ, ಡಾ| ಪ್ರದೀಪ್ ಎ., ಇವರ ಮಾರ್ಗದರ್ಶನದಲ್ಲಿ ಬಂಗಾಡಿ ಸೀಮೆಯ ಧರ್ಮ ದೇವತೆಗಳಾದ ಉಳ್ಳಾಕುಳ ಮೂಲಸ್ಥಾನ ಕರುವಲ್ಲ ಕಲ್ಲಗುಂಡದಲ್ಲಿ ಉಳ್ಳಾಯ-ಉಳ್ಳಾಲ್ತಿ, ಬೈರವ-ಮೂರ್ತಿಲ್ಲಾಯ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ನೂತನ ಭವ್ಯ ಮಂದಿರದ ಶಿಲಾನ್ಯಾಸ ಕಾರ್ಯಕ್ರಮವು ಊರ ಪರವೂರ ಗಣ್ಯ ಮಾನ್ಯರ ಹಾಗೂ ಭಕ್ತಾದಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ.








