ಬಂಗಾರ ಪಲ್ಕೆ ದುರಂತ : 22 ದಿನಗಳ ಕಾರ್ಯಾಚರಣೆ ಬಳಿಕ ಸನತ್ ಶೆಟ್ಟಿ ಮೃತದೇಹ ಪತ್ತೆ

ಬೆಳ್ತಂಗಡಿ: 22 ದಿನಗಳ ಹಿಂದೆ ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಜಲಪಾತದ ಸಮೀಪ ಗುಡ್ಡ ಕುಸಿದು ಸಂಭವಿಸಿದ ದುರಂತದ ಸಂದರ್ಭದಲ್ಲಿ ನಾಪತ್ತೆಯಾಗಿರುವ ಉಜಿರೆ ಸಮೀಪದ ಕಾಶಿಬೆಟ್ಟು ನಿವಾಸಿ ಸನತ್‌ ಶೆಟ್ಟಿ (20)ಯ ಮೃತದೇಹ ಇಂದು ದೊರೆತಿದೆ.

ಬಂಡೆಕಲ್ಲು ಒಡೆದು ಜೆಸಿಬಿ, ಹಿಟಾಚಿ 23 ದಿನ ಸುಮಾರು 30 ಅಡಿಗಳಷ್ಟು ಆಳದ ಮಣ್ಣು ತೆರವು ಕಾರ್ಯ ಸತತವಾಗಿ ನಡೆದಿತ್ತು. ವಿದ್ಯುತ್ ಸಂಪರ್ಕವಾಗಲಿ, ಯಂತ್ರೋಪಕರಣ ಬಳಸಲು ಸಾಧ್ಯವಿಲ್ಲದ ದುರ್ಗಮ ಸ್ಥಳವಾದ್ದರೂ ಜಿಲ್ಲಾಡಳಿತ, ಶಾಸಕರು, ಸ್ಥಳೀಯರು, ಸಂಘ ಸಂಸ್ಥೆಗಳ ಸಹಕಾರದಿಂದ ದೇಹ ಶೋಧ ಕಾರ್ಯದ ಎಲ್ಲ ಪ್ರಯತ್ನಗಳು ನಡೆದಿದ್ದವು.

ಒಂದೆರಡು ಸಲ ವಾಸನೆ ಬಂದಿತ್ತಾದರೂ ದೇಹ ಪತ್ತೆಯಾಗದೆ ಪ್ರಕರಣ ಕಗ್ಗಂಟಾಗಿತ್ತು. ಇದೀಗ ಸನತ್ ಶೆಟ್ಟಿ ಮೃತದೇಹ ಪತ್ತೆಯಾಗಿರೋದು ಅವರ ಕುಟುಂಬಸ್ಥರಿಗೆ ಬೇಸರದ ನಡುವೆಯೂ ತುಸು ನೆಮ್ಮದಿ ತರಿಸಿದೆ.

ಘಟನಾ ಸ್ಥಳದಲ್ಲಿ ಪೊಲೀಸ್ ಇಲಾಖೆ,‌ ಅಗ್ನಿಶಾಮಕ ಇಲಾಖೆ, ಕಂದಾಯ ಇಲಾಖೆ, ಸ್ಥಳೀಯ ಗ್ರಾ.ಪಂ, ಎನ್‌ಡಿಆರ್‌ಎಫ್ ತಂಡ, ಮಹೇಶ್ ಶೆಟ್ಟಿ ತಿಮರೋಡಿ ಅವರ ನೇತೃತ್ವದ ತಂಡ  ಹಾಗೂ ಸ್ಥಳೀಯರು ಇಷ್ಟೂ ದಿನಗಳಲ್ಲಿ ಕಾರ್ಯಾಚರಣೆ ಯಲ್ಲಿ ಭಾಗಿಯಾಗಿದ್ದರು. ಶಾಸಕ ಹರೀಶ್ ಪೂಂಜ ಸಂಪೂರ್ಣ ಮಾರ್ಗದರ್ಶನ ಮತ್ತು ಸಹಕಾರ ನೀಡಿದ್ದರು.‌ ಜಿಲ್ಲಾಧಿಕಾರಿ,‌ಸಹಾಯಕ ಕಮಿಷನರ್, ತಹಶಿಲ್ದಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಮಾಜಿ‌ಶಾಸಕ ವಸಂತ ಬಂಗೇರ ಮೊದಲಾದವರು ಸ್ಥಳಕ್ಕೆ ಭೇಟಿ‌ನೀಡಿ ಕಾರ್ಯಾಚರಣೆ ತಂಡವನ್ನು ಹುರಿದುಂಬಿಸಿದ್ದರು.

ಸ್ಥಳಕ್ಕೆ ವೈದ್ಯಕೀಯ ತಂಡ ಭೇಟಿ ನೀಡಲಿದೆ. ಮುಂದಿನ ಕಾರ್ಯಕ್ಕೆ ಪೊಲೀಸ್ ಇಲಾಖೆ ಪೂರ್ವ ಸಿದ್ಧತೆ ನಡೆಸಿದೆ.

Spread the love
  • Related Posts

    ಉಜಿರೆಯಲ್ಲಿ ನಡೆಯಲಿದೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ “ವಿಜಯ ಗೋಪುರ” ಲೋಕಾರ್ಪಣೆ

    ಬೆಳ್ತಂಗಡಿ : ಸುಮಾರು 1000 ವರ್ಷಗಳ ಇತಿಹಾಸವಿರುವ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವವು 03/03/2026ರಿಂದ 11/03/2026 ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಉಜಿರೆಯ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕೇಸರರಾಗಿದ್ದ ಕೀರ್ತಿಶೇಷ ಯು. ವಿಜಯರಾಘವ ಪಡ್ಡೆಟ್ನಾಯರವರ ಕನಸು ಮತ್ತು ಸಂಕಲ್ಪದಂತೆ…

    Spread the love

    ಒಕ್ಕಲಿಗ ಗೌಡ ವಾರ್ಷಿಕ ಕ್ರೀಡೋತ್ಸವ – 2026

    ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಒಕ್ಕಲಿಗ ಗೌಡ ಸಂಘದ ವತಿಯಿಂದ 2026ನೇ ಸಾಲಿನ “ಒಕ್ಕಲಿಗ ಗೌಡ ವಾರ್ಷಿಕ ಕ್ರೀಡೋತ್ಸವ”ವನ್ನು ಫೆಬ್ರವರಿ 22ರಂದು ಭಾನುವಾರ ಬೆಳಿಗ್ಗೆ 8.30 ಗಂಟೆಯಿಂದ ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಮುಂಭಾಗದಲ್ಲಿರುವ ಕಾಲಭೈರವ ಗಾರ್ಡನ್ ನಲ್ಲಿ ಆಯೋಜಿಸಲಾಗಿದೆ. ಸಮುದಾಯದ…

    Spread the love

    You Missed

    ಉಜಿರೆಯಲ್ಲಿ ನಡೆಯಲಿದೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ “ವಿಜಯ ಗೋಪುರ” ಲೋಕಾರ್ಪಣೆ

    • By admin
    • February 23, 2026
    • 14 views
    ಉಜಿರೆಯಲ್ಲಿ ನಡೆಯಲಿದೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ “ವಿಜಯ ಗೋಪುರ” ಲೋಕಾರ್ಪಣೆ

    ಒಕ್ಕಲಿಗ ಗೌಡ ವಾರ್ಷಿಕ ಕ್ರೀಡೋತ್ಸವ – 2026

    • By admin
    • February 22, 2026
    • 125 views
    ಒಕ್ಕಲಿಗ ಗೌಡ ವಾರ್ಷಿಕ ಕ್ರೀಡೋತ್ಸವ – 2026

    ಕನ್ಯಾಡಿ ಸೇವಾನಿಕೇತನಕ್ಕೆ ಭೋರುಕಾ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನ ಭೇಟಿ

    • By admin
    • February 20, 2026
    • 57 views
    ಕನ್ಯಾಡಿ ಸೇವಾನಿಕೇತನಕ್ಕೆ ಭೋರುಕಾ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನ ಭೇಟಿ

    ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಉರುವಾಲು ಗ್ರಾಮ ಶ್ರೀ ವನಶಾಸ್ತಾರ ಮತ್ತು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅನುದಾನ ಮಂಜೂರು

    • By admin
    • February 20, 2026
    • 29 views
    ಶ್ರೀ ಕ್ಷೇತ್ರ ಧರ್ಮಸ್ಥಳದಿಂದ  ಉರುವಾಲು ಗ್ರಾಮ ಶ್ರೀ ವನಶಾಸ್ತಾರ ಮತ್ತು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅನುದಾನ ಮಂಜೂರು

    ದುಬೈನಲ್ಲಿ ಸಡಗರದ ಕ್ರೀಡಾಕೂಟ: ಕೊಡಗು–ದಕ್ಷಿಣ ಕನ್ನಡ ಗೌಡ ಸಮಾಜದ ‘ಕ್ರಿಕೆಟ್ ಸೀಸನ್-6’ ಹಾಗೂ ‘ತ್ರೋಬಾಲ್ ಸೀಸನ್-1’ ಅದ್ದೂರಿ ಯಶಸ್ವಿ

    • By admin
    • February 20, 2026
    • 42 views
    ದುಬೈನಲ್ಲಿ ಸಡಗರದ ಕ್ರೀಡಾಕೂಟ: ಕೊಡಗು–ದಕ್ಷಿಣ ಕನ್ನಡ ಗೌಡ ಸಮಾಜದ ‘ಕ್ರಿಕೆಟ್ ಸೀಸನ್-6’ ಹಾಗೂ ‘ತ್ರೋಬಾಲ್ ಸೀಸನ್-1’ ಅದ್ದೂರಿ ಯಶಸ್ವಿ

    ಸಂಚಾರಿ ಸ್ಟೂಡಿಯೋ ಯೂಟ್ಯೂಬರ್ ಕಡಬ ಸಂತೋಷ್ ಪೋಲೀಸ್ ವಶಕ್ಕೆ

    • By admin
    • February 18, 2026
    • 503 views
    ಸಂಚಾರಿ ಸ್ಟೂಡಿಯೋ ಯೂಟ್ಯೂಬರ್ ಕಡಬ ಸಂತೋಷ್  ಪೋಲೀಸ್ ವಶಕ್ಕೆ