ಬಂಟ್ವಾಳ: ಚಿಕ್ಕಮಂಗಳೂರಿನಲ್ಲಿ ಯುವ ವಕೀಲರಾದ ಪ್ರೀತಮ್ ಎಂ ಟಿ ಇವರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಖಂಡಿಸಿ ವಕೀಲರ ಸಂಘ (ರಿ ) ಬಂಟ್ವಾಳ ಇದರ ವತಿಯಿಂದ ಇಂದು ದಿನಾಂಕ 4/12/2023 ರಂದು ಬಂಟ್ವಾಳದ ಜೆ ಎಂ ಎಫ್ ಸಿ ನ್ಯಾಯಾಲಯದ ಎದುರು ಪ್ರತಿಭಟನೆಯನ್ನು ನಡೆಸಿದರು.
ಪ್ರತಿಭಟನೆಯ ನಂತರ ಮಾನ್ಯ ಗ್ರಹ ಸಚಿವರು, ಕರ್ನಾಟಕ ಸರಕಾರ ಇವರಿಗೆ ತಹಸೀಲ್ದಾರ್ ಬಂಟ್ವಾಳ ಇವರ ಮುಖಾoತರ ಮನವಿಯನ್ನು ಸಲ್ಲಿಸಲಾಯಿತು. ತಪ್ಪಿತಸ್ಥ ಪೋಲೀಸರನ್ನು ತಕ್ಷಣ ಬಂಧಿಸಬೇಕು ಮತ್ತು ಅವರ ವಿರುದ್ದ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಮತ್ತು ತಕ್ಷಣ ಸರಕಾರ ವಕೀಲರ ರಕ್ಷಣಾ ಕಾಯಿದೆ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘ (ರಿ ) ಬಂಟ್ವಾಳದ ಮಾಜಿ ಅಧ್ಯಕ್ಷರಾದ ಉಮೇಶ್ ಕುಮಾರ್ ವೈ ಮಾತಾಡುತ್ತಾ ಪೊಲೀಸರ ದೌರ್ಜನ್ಯ ಕಾನೂನು ಬಾಹಿರವಾದುದ್ದು ಅಲ್ಲದೆ ಆರೋಪಿಗಳ ವಿರುದ್ದ I P C ಸೆಕ್ಷನ್ 307 ಪ್ರಕಾರ FIR ದಾಖಲೆ ಆದರೂ ಈ ವರೆಗೂ ಬಂಧಿಸದೆ ಇರೋದು ವಿಳಂಬ ದೋರಣೆಯಾಗಿದೆ. ಇದನ್ನು ವಕೀಲರ ಸಂಘ (ರಿ ) ಬಂಟ್ವಾಳ ತೀವ್ರವಾಗಿ ಖಂಡಿಸುತ್ತದೆ. ವಕೀಲರ ಮೇಲಿನ ದೌರ್ಜನ್ಯ ತಡೆಗೆ ವಕೀಲರ ರಕ್ಷಣಾ ಕಾಯಿದೆಯನ್ನು ಸರಕಾರ ತಕ್ಷಣ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಕೀಲರಾದ ಮೋಹನ್ ಕಡೇಶಿವಾಲ್ಯ ಮಾತನಾಡಿ ನಿರಂತರವಾಗಿ ಯುವ ವಕೀಲರ ಮೇಲಿನ ದೌರ್ಜನ್ಯ ಖoಡನೀಯ . ನ್ಯಾಯಾಲಯ ಈ ಬಗ್ಗೆ ತಕ್ಷಣ ಮದ್ಯ ಪ್ರವೇಶಬೇಕು ಎಂಬುದಾಗಿ ಒತ್ತಾಯಿಸಿದರು. ಪ್ರತಿಭಟನೆಯ ಸಂದರ್ಭದಲ್ಲಿ ವಕೀಲರ ಸಂಘ (ರಿ ) ಬಂಟ್ವಾಳದ ಅಧ್ಯಕ್ಷರಾದ ರಿಚರ್ಡ್ ಕೋಸ್ತಾ ರವರು ಮಾತಾಡಿ ಹಲ್ಲೆಗೊಳಗಾದ ವಕೀಲರಾದ ಪ್ರೀತಮ್ ಎಂ ಟಿ ಅವರ ಬೆಂಬಲವಾಗಿ ವಕೀಲರ ಸಂಘ (ರಿ ) ಬಂಟ್ವಾಳ ಸದಾ ಜೊತೆಗಿರುತ್ತದೆ ಎಂಬ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ವಕೀಲರ ಸಂಘ (ರಿ ) ಬಂಟ್ವಾಳದ ಹಿರಿಯ ಕಿರಿಯ ವಕೀಲ ಮಿತ್ರರು ಉಪಸ್ಥಿತರಿದ್ದರು.