ಬೆಳ್ತಂಗಡಿ : ಅಗಸ್ಟ್ 1 ರಂದು ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಕಬ್ ಬುಲ್ ಬುಲ್, ಸ್ಕೌಟ್ ಗೈಡ್ಸ್ ವಿಧ್ಯಾರ್ಥಿ ಗಳು ವಿಶ್ವ ಸ್ಕಾರ್ಪ್ ದಿನ ಹಾಗೂ ಸನ್ ರೈಸ್ ದಿನ ವನ್ನು ರಾಜ್ಯ ಸಂಸ್ಥೆ ಯ ಆದೇಶದಂತೆ ವರ್ಚುವಲ್ (ಗೂಗಲ್ ಅ್ಯಪ್ )ಮೂಲಕ ಆಚರಿಸಿದರು.
ಎಲ್ಲಾ ವಿಧ್ಯಾರ್ಥಿ ಗಳು ಮನೆಯಲ್ಲಿದ್ದುಕೊಂಡು ಏಕ ಕಾಲದಲ್ಲಿ ಸ್ಕೌಟ್ ಗೈಡ್ ಪ್ರತಿಜ್ಞೆ ಯನ್ನು ಸ್ವೀಕರಿಸಿದರು. ನಂತರ ವರ್ಚುವಲ್ ಮೂಲಕ ಸನ್ ರೈಸ್ ಡೇ ಹಾಗೂ ವಿಶ್ವ ಸ್ಕಾರ್ಪ್ ದಿನ ದ ಮಹತ್ವ ಹಾಗೂ ಉದ್ದೇಶ ವನ್ನು ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಸ್ಥಳೀಯ ಸಂಸ್ಥೆ ಯ ಕಾರ್ಯದರ್ಶಿ ಪ್ರಮೀಳಾ ವಿವರಿಸಿದರು.
ವರ್ಚುವಲ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ತಾಲೂಕಿನ ಉದಯವಾಣಿ ವರದಿಗಾರ ರಾದ ಚೈತೇಶ್ ಇಳಂತಿಲ ಆಗಮಿಸಿದ್ದರು.
ಸ್ಕೌಟ್ ಗೈಡ್ ವಿಧ್ಯಾರ್ಥಿ ಗಳು ತಮ್ಮ ಪರಿಸರದ ಗೌರನ್ವಿತರನ್ನು ಸ್ಕಾರ್ಪ್ ಧರಿಸಿ ಸ್ಕೌಟ್ ಗೈಡ್ ಚಳವಳಿಗೆ ಬರಮಾಡಿಕೊಂಡರು.
ಪೋಲಿಸ್ ಅಧಿಕಾರಿಯಾದ ಬಾಲಕೃಷ್ಣ , ವಸಂತ ಸಾಲಿಯಾನ್, ತಾಲೂಕು ಉದಯವಾಣಿ ವರದಿಗಾರರಾದ ಚೈತೇಶ್ ಇಳಂತಿಲ, ತಾಲೂಕು ವಿಜಯವಾಣಿ ವರದಿಗಾರರಾದ ಮನೋಹರ ಬಳ್ಳಂಜ, ಉದಯವಾಣಿ ಸಹಾಯಕ ಇಲಾಖೆ ಮಾನ್ಯೇಜರ್ ಜಯಂತ್ ಬಾಯರ್, ಉದಯವಾಣಿ ಮಾರುಕಟ್ಟೆ ವಿಭಾಗದ ಪ್ರತಿನಿಧಿ ಗುರುಪ್ರಸಾದ್ ಮುಂಡಾಜೆ ಇವರುಗಳನ್ನು ಸ್ಕೌಟ್ ಗೈಡ್ ಚಳವಳಿಗೆ ಸ್ಕಾರ್ಪ್ ಧರಿಸಿ ಬರಮಾಡಿಕೊಂಡರು.
ವರ್ಚುವಲ್ ಕಾರ್ಯಕ್ರಮ ದ ನಿರೂಪಣೆ ಯನ್ನು ಗೈಡ್ ವಿದ್ಯಾರ್ಥಿ ಪ್ರತೀಕ್ಷ, ಸ್ವಾಗತವನ್ನು ಗೈಡ್ ವಿದ್ಯಾರ್ಥಿ ಕವನ ನೇರವೇರಿಸಿದರು .ಎಸ್ ಡಿ ಎಮ್ ನ ಕ್ಯಾಪ್ಟನ್, ಸ್ಥಳೀಯ ಸಂಸ್ಥೆ ಯ ಕಾರ್ಯದರ್ಶಿ ಪ್ರಮೀಳಾ ವಂದಿಸಿ ಕಾರ್ಯಕ್ರಮ ಸಂಘಟಿಸಿದರು.