ಬೆಳ್ತಂಗಡಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಎರಡು A ಗ್ರೇಡ್ ತಶೀಲ್ದಾರ್ ನೇಮಕ ಅವಶ್ಯಕ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿಗೆ ಎರಡು Aಗ್ರೇಡ್ ತಹಶೀಲ್ದಾರ್ ನೇಮಕ ಆಗಬೇಕು ಎಂಬುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗಳಾಗುತ್ತಿದ್ದು 2ಲಕ್ಷಕ್ಕೂ ಮಿಗಿಲಾಗಿ ರೆವೆನ್ಯೂ RTC ಇದ್ದು, ತಾಲೂಕಿನ ಇತರೇ ಜವಾಬ್ದಾರಿ ಕೆಲಸಗಳು ಹಾಗೂ ಪುಣ್ಯ ಕ್ಷೇತ್ರ ಭೇಟಿಗೆ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಬರುವ ಸಮಯದಲ್ಲಿ, ಹಾಗೂ ವಿಪತ್ತು ಮತ್ತು ಅಪತ್ತು ಹಾಗೂ ಇತರೇ ಸಾರ್ವಜನಿಕ ಜಂಜಾಟಗಳು ಬರುವಾಗ 81ಗ್ರಾಮದ ಕಡೆ ಗಮನ ಹರಿಸಲು ಸಾಧ್ಯವಾಗದೇ ಸಹಜವಾಗಿ ತಹಶೀಲ್ದಾರ್ ಒತ್ತಡಕ್ಕೆ ಸಿಲುಕಿ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದನೆ ನೀಡಲು ಸಾಧ್ಯವಿಲ್ಲ ಹಾಗಾಗಿ ರಾಜ್ಯ ಸರ್ಕಾರ ಜನಸಾಮಾನ್ಯರ ಕೂಗಿಗೆ ಧ್ವನಿ ಯಾಗಬೇಕು ಎಂಬ ಕೂಗೂ ಜೋರಾಗಿ ಕೇಳಿ ಬರುತ್ತಿದೆ. ತಾಲೂಕಿನಲ್ಲಿ ಪ್ರಸ್ತುತ ರಾಜ್ಯಸರ್ಕಾರವನ್ನು ಪ್ರತಿನಿಧಿಸುವ ಒರ್ವ ಶಾಸಕರು, 2ಮಂದಿ ವಿಧಾನ ಪರಿಷತ್ ಸದಸ್ಯರು ಇದ್ದು ಕೂಡಲೇ ಸರ್ಕಾರದ ಗಮನಸೆಳೆಯಬೇಕಾಗಿದೆ.

ಬೆಳ್ತಂಗಡಿ ತಾಲೂಕು 81ಗ್ರಾಮ ಪಂಚಾಯತ್ ಗಳನ್ನು ಒಳಗೊಂಡ ಅತೀ ದೊಡ್ಡ ತಾಲೂಕು 4ಹೋಬಳಿಗಳು ಇದ್ದು ಬಹುತೇಕ ಜನರು ಕೃಷಿ ಚಟುವಟಿಕೆಗಳನ್ನೇ ಅವಲಂಭಿಸಿರುತ್ತಾರೆ. ಹೈನುಗಾರಿಕೆ ಇಲ್ಲಿಯ ಉಪಕಸೂಬು ಆಗಿರುತ್ತದೆ.

ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ವಿಸ್ತಾರವಾದ ತಾಲೂಕು. ಎಳನೀರು,ದಿಡುಪೆ ,ಚಾರ್ಮಾಡಿಯಿಂದ ಪೂಂಜಾಲಕಟ್ಟೆಯವರೆಗೂ, ವೇಣೂರು ನಿಂದ ಉಪ್ಪಿನಂಗಡಿಯವರೆಗೂ ಬೆಳ್ತಂಗಡಿ ತಾಲೂಕು ಹರಡಿದೆ. ಇದರ ಪೂರ್ವ-ಉತ್ತರ ಭಾಗದಲ್ಲಿ ರಮಣೀಯವಾದ ಪಶ್ಚಿಮ ಘಟ್ಟವಿದೆ. ಈ ತಾಲೂಕಿನಲ್ಲಿ ಪ್ರಸಿದ್ದ ಯಾತ್ರಾಸ್ಥಳ ಧರ್ಮಸ್ಥಳ, ಶಿಕ್ಷಣ ಕೇಂದ್ರವಾದ ಉಜಿರೆ, ಪ್ರೇಕ್ಷಣೀಯ ಸ್ಥಳವಾದ ಜಮಲಾಬಾದ್ ಕೋಟೆಯೂ ಇದೆ. ಇದಲ್ಲದೆ ಬೆಳ್ತಂಗಡಿಯಲ್ಲಿ ಹಲವಾರು ಧಾರ್ಮಿಕ ಕ್ಷೇತ್ರಗಳೂ ಇವೆ.

ತಾಲೂಕಿನಲ್ಲಿ ಬಹಳಷ್ಟು ರೈತರಿಗೆ ಇನ್ನೂ ಕೂಡ ಸರಿಯಾಗಿ ತಮ್ಮ ಜಮೀನುಗಳ ಮೂಲ ದಾಖಲೆಗಳನ್ನು ಸರಿಪಡಿಸಿಕೊಳ್ಳು ಆಗದೇ ತೀವ್ರ ಸಮಸ್ಯೆ ಇರುವ ಈ ತಾಲೂಕಿನ ಆಡಳಿತ ದೃಷ್ಟಿಯಿಂದ ತಾಲೂಕಿಗೆ 2 Aಗ್ರೇಡ್ ತಹಶೀಲ್ದಾರ್ ಅವಶ್ಯಕವಾಗಿ ಬೇಕಾಗಿದೆ ಎಂಬುದು ಸಾರ್ವಜನಿಕರ ಕೂಗಾಗಿದೆ. ಹತ್ತು ಹಲವಾರು ವರ್ಷಗಳಿಂದ ಪ್ಲೋಟಿಂಗ್ ಮಾಡಲು ಬಾಕಿ ಇರುವ ಬಹಳಷ್ಟು ಜಾಗಗಳು ಇದ್ದು ಇದಕ್ಕಾಗಿ ಹಣ ಸಂದಾಯ ಮಾಡಿ ವರ್ಷಾನುಗಟ್ಟಲೆ ಆದರೂ ರೈತರಿಗೆ ಸರಿಯಾದ ಸ್ಪಂದನೆ ಇಲ್ಲದಂತಾಗಿದೆ ಕೂಡಲೇ ಸರ್ಕಾರ ಈ ಬಗ್ಗೆ ಗಮನಹರಿಸಿ ತಾಲೂಕಿನ ಅಭಿವೃದ್ಧಿಗೆ ಪೂರಕ ಸಹಕಾರವನ್ನು ಶೀಘ್ರದಲ್ಲೇ ನೀಡಬೇಕಾಗಿದೆ. ಈಗಾಗಲೇ ಸರ್ವೆಗೆ ಹಣ ಪಡೆದರೂ ಕೂಡ ಸರ್ಕಾರ ಈ ಬಗ್ಗೆ ಗಮನಹರಿಸದೇ ಇರೋದು ವಿಪರ್ಯಾಸವಾಗಿದೆ.

Spread the love
  • Related Posts

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    Belthangady: ತಾಲೂಕಿನ ಹಲವೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ.Shishila, Kokkada, Dharmasthala, Arasinamakki, Ujire ಹಾಗೂ Nidle ಮೊದಲಾದ ಕಡೆಗಳಲ್ಲಿ ಗುಡುಗು-ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ. ಉಳಿದ ಕೆಲವು ಪ್ರದೇಶಗಳಲ್ಲಿ ತುಂತುರು ಹಾಗೂ ಸಾಮಾನ್ಯ ಮಳೆಯಾಗಿದೆ.ತಾಲೂಕಿನಲ್ಲಿ ಫೆಬ್ರವರಿ 21ರಂದು ಕೆಲವೆಡೆ…

    Spread the love

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಬಂಗಾಡಿ: ಸೂರ್ಯ-ಚಂದ್ರ ಹೋಡುಕರೆ ಕಂಬಳ ಸಮಿತಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್, ಕರ್ನಾಟಕ ಸರಕಾರ ಮತ್ತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಭಾಗಿತ್ವದೊಂದಿಗೆ 28ನೇ ವರ್ಷದ ಹೊನಲು ಬೆಳಕಿನ ಸೂರ್ಯ-ಚಂದ್ರ ಜೋಡುಕರೆ “ಬಂಗಾಡಿ ಕೊಲ್ಲಿ” ಬಯಲು ಕಂಬಳವು ಶ್ರೀ…

    Spread the love

    You Missed

    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    • By admin
    • March 15, 2026
    • 60 views
    ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು-ಸಿಡಿಲು ಸಹಿತ ಮಳೆ: ನಿಡ್ಲೆ–ಕಳೆಂಜ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಲೈನ್ ಹಾನಿ

    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    • By admin
    • March 14, 2026
    • 101 views
    “ಬಂಗಾಡಿ ಕೊಲ್ಲಿ” 28ನೇ ವರ್ಷದ ‘ಸೂರ್ಯ – ಚಂದ್ರ’ ಜೋಡುಕರೆ ಕಂಬಳ

    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    • By admin
    • March 14, 2026
    • 43 views
    ಹಾವು ಕಡಿತಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರೆಗುಡ್ಡೆಯ ಮಹೇಶ್ ಮನೆಗೆ  ಡಿ.ಕಿರಣ್ ಚಂದ್ರ ಪುಷ್ಪಗಿರಿ ಭೇಟಿ

    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    • By admin
    • March 13, 2026
    • 610 views
    KSRTC ಬಸ್ ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಮೂವರು ಸಾವು

    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

    • By admin
    • March 10, 2026
    • 150 views
    ಎಕ್ಸೆಲ್ ಪಿ.ಯು ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ ಹುದ್ದೆಗಳಿಗೆ  ಅರ್ಜಿ ಆಹ್ವಾನ

    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ

    • By admin
    • March 10, 2026
    • 63 views
    ಗುರುವಾಯನಕೆರೆ ಎಕ್ಸೆಲ್ ಟೆಕ್ ಶಾಲೆಯಲ್ಲಿ ಕೆ.ಜಿ ಮಕ್ಕಳ ಘಟಿಕೋತ್ಸವ