ಬೆನಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ರಜತ ಸಂಭ್ರಮ ಕಾರ್ಯಕ್ರಮ ಹಾಗೂ ನೂತನ ವಿಸ್ತೃತ ಕಟ್ಟಡದ ಲೋಕಾರ್ಪಣೆ

ಉಜಿರೆ : ಉಜಿರೆಯ ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನೂತನ ವಿಸ್ತೃತ ಕಟ್ಟಡದ ಲೋಕಾರ್ಪಣೆ ಮತ್ತು ರಜತ ಸಂಭ್ರಮ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಈ ಭಾಗದ ಜನರ ಆಯುಷ್ಯ ಹೆಚ್ಚು ಮಾಡುವಲ್ಲಿ ಬೆನಕ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ವೈದ್ಯರು ಮತ್ತು ಬಳಗದೊಂದಿಗೆ ಕೆಲಸ ಮಾಡುತ್ತಿದ್ದಾರೆ ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು. ಗ್ರಾಮೀಣ ಭಾಗದ ಜನರು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಹೋಗಬೇಕಾಗುತ್ತೆ. ಅಂಥಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಆರೋಗ್ಯ ಸೇವೆಯನ್ನು ಈ ದಂಪತಿ ವೈದ್ಯರು ನೀಡುತ್ತಿದ್ದಾರೆ. ಅದ್ಭುತವಾದ ತುರ್ತು ನಿಗಾ ಘಟಕ ಇದೆ, ಎಲ್ಲವೂ ವ್ಯವಸ್ಥಿತವಾಗಿದೆ ಪ್ರಸ್ತುತ 130 ಅಲ್ಲ 500 ಹಾಸಿಗೆಯ ಆಸ್ಪತ್ರೆ ಆಗಲಿ ಎಂದು ಇದೇ ವೇಳೆ ಹಾರೈಸಿದರು. ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ ಕಟ್ಟಿದ್ದೀರಾ ಅಂದ್ರೆ ಬಡವರಿಗಾಗಿ ಮಾಡಿದ್ದೀರಾ ಅನ್ನೋದು ಗೊತ್ತಾಗುತ್ತೆ , ಬಡ ಜನರ ಬಗ್ಗೆ ಗಮನ ಇಟ್ಟುಕೊಂಡು ನಿಮ್ಮ ಆಸ್ಪತ್ರೆ ಮುಂದುವರೆಯಲಿ ಎಂದು ಮನವಿ ಮಾಡಿದರು.

ಬಳಿಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮಾತನಾಡಿದ ಕುಟುಂಬದ ಸದಸ್ಯರೆಲ್ಲ ಸೇರಿ ಈ ತಾಲೂಕಿನ ಜನರ ಆರೋಗ್ಯ ಸೇವೆಯನ್ನು ಉತ್ತಮ ರೀತಿಯಲ್ಲಿ ಮಾಡುತ್ತಿದ್ದಾರೆ, ಇದು ನಿಜಕ್ಕೂ ದೊಡ್ಡ ಶ್ಲಾಘಿಸಿಬೇಕಾದ ಸಾಧನೆ ಎಂದರು. ಗ್ರಾಮೀಣ ಪ್ರದೇಶವಾದಂತಹ ಉಜಿರೆಯಲ್ಲಿ ಒಂದು ದೊಡ್ಡ ಆಸ್ಪತ್ರೆ ಕಟ್ಟಿ ಕೆಲಸ ಮಾಡುತ್ತಿದ್ದೀರಾ ನಿಮಗೆ ನನ್ನ ಮೊದಲ ಅಭಿನಂದನೆ ಎಂದರು. ಬೆನಕ ಆಸ್ಪತ್ರೆಯ ಸಿಬ್ಬಂದಿಗಳು ರೋಗಿಗಳನ್ನು ಅತ್ಯಂತ ಪ್ರೀತಿ ಇಂದ ನಗು ಮುಖದಿಂದ ನೋಡುತ್ತಾರೆ ಸಿಬ್ಬಂದಿಗಳಿಗೂ ನನ್ನ ಅಭಿನಂದನೆ ಎಂದರು.

ವಿಸ್ತೃತ ಕಟ್ಟಡ ಉದ್ಘಾಟನೆ

ನೂತನ ವಿಸ್ತರಣಾ ಕಟ್ಟಡದ ಉದ್ಘಾಟನೆಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ನಡೆಸಿದರು. ನೂತನ ಕಟ್ಟಡದ ಕ್ಯಾಶುವಲ್ಟಿ ವಿಭಾಗ, ಡೇ ಕೇರ್ ವಿಭಾಗ, ಮಕ್ಕಳ ವಿಭಾಗ ಉದ್ಘಾಟನೆಗೊಂಡಿತು.

ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಬೆನಕ ಆಸ್ಪತ್ರೆಯ ಎಂ.ಡಿ. ಡಾ. ಗೋಪಾಲಕೃಷ್ಣ ಸ್ವಾಗತಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ , ಬೆಸ್ಟ್ ಫೌಂಡೇಶನ್ ನಿರ್ದೇಶಕ ರಕ್ಷಿತ್ ಶಿವರಾಮ್ , ಐಎಎಸ್ ಅಧಿಕಾರಿ ನವೀನ್ ಭಟ್ , ಡಾ. ಭಾರತಿ , ಡಾ. ಅಂಕಿತಾ ಭಟ್ , ಡಾ. ರೋಹಿತ್ ಭಟ್ , ಡಾ.ಆದಿತ್ಯ ರಾವ್ , ಉಜಿರೆ ಪಂಚಾಯತ್ ಅಧಕ್ಷೆ ಉಷಾ ಕಾರಂತ್ , ರವಿ ಬರಮೇಲು ಮತ್ತಿತರು ಉಪಸ್ಥಿತರಿದ್ದರು.

Spread the love
  • Related Posts

    ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪೂರಕವಾಗಿ ಅಟ್ಟಾರಿ ಗಡಿ ಮುಚ್ಚುವಿಕೆ, ಸಿಂಧೂ ಜಲ ಒಪ್ಪಂದಕ್ಕೆ ತಡೆ ಸೇರಿದಂತೆ ಕೇಂದ್ರ ಸರ್ಕಾರದಿಂದ 5 ಪ್ರಮುಖ ನಿರ್ಧಾರ

    ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಭದ್ರತಾ ಸಂಪುಟ ಸಮಿತಿಯ (ಸಿಸಿಎಸ್) ಉನ್ನತ ಮಟ್ಟದ ಸಭೆ ನಡೆಯಿತು. ಅಟ್ಟಾರಿ ಗಡಿ ಮುಚ್ಚುವಿಕೆ, ಸಿಂಧೂ ಜಲ ಒಪ್ಪಂದಕ್ಕೆ ತಡೆ ಸೇರಿದಂತೆ 5 ಪ್ರಮುಖ ನಿರ್ಧಾರದೊಂದಿಗೆ ಪಹಲ್ಗಾಮ್…

    Spread the love

    ಬೆಳ್ತಂಗಡಿ : ಉಜಿರೆಯಲ್ಲಿ ರಾಮೋತ್ಸವ ಕಾರ್ಯಕ್ರಮ ಹಿನ್ನಲೆ ಕಾರ್ಯಕ್ರಮಕ್ಕೆ ಬರುತ್ತಿದ್ದ ಪುನೀತ್ ಕೆರೆಹಳ್ಳಿಯನ್ನು ತಡೆದ ಪೊಲೀಸರು!!!

    ಬೆಳ್ತಂಗಡಿ : ಉಜಿರೆ ಕೃಷ್ಣಾನುಗ್ರಹದ ಸಭಾಭವನದಲ್ಲಿ ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡ ಏ.19 ರಂದು ಸಂಜೆ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಚಕ್ರವರ್ತಿ ಸೂಲಿಬೆಲೆ ಆಗಮಿತಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮ ವೀಕ್ಷಿಸಲು ಹಿಂದೂ ಗೋ ರಕ್ಷಕ ಪುನೀತ್ ಕೆರೆಹಳ್ಳಿ…

    Spread the love

    You Missed

    ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪೂರಕವಾಗಿ ಅಟ್ಟಾರಿ ಗಡಿ ಮುಚ್ಚುವಿಕೆ, ಸಿಂಧೂ ಜಲ ಒಪ್ಪಂದಕ್ಕೆ ತಡೆ ಸೇರಿದಂತೆ ಕೇಂದ್ರ ಸರ್ಕಾರದಿಂದ 5 ಪ್ರಮುಖ ನಿರ್ಧಾರ

    • By admin
    • April 23, 2025
    • 83 views
    ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪೂರಕವಾಗಿ ಅಟ್ಟಾರಿ ಗಡಿ ಮುಚ್ಚುವಿಕೆ, ಸಿಂಧೂ ಜಲ ಒಪ್ಪಂದಕ್ಕೆ ತಡೆ ಸೇರಿದಂತೆ ಕೇಂದ್ರ ಸರ್ಕಾರದಿಂದ 5 ಪ್ರಮುಖ ನಿರ್ಧಾರ

    ಟೀಕೆಗಳು ಸಾಯುತ್ತದೆ ನಾವು ಮಾಡೋ ಕೆಲಸಗಳು ಶಾಶ್ವತವಾಗಿ ಉಳಿಯುತ್ತದೆ: ಡಿ.ಕೆ.ಶಿ

    • By admin
    • April 20, 2025
    • 46 views
    ಟೀಕೆಗಳು ಸಾಯುತ್ತದೆ ನಾವು ಮಾಡೋ ಕೆಲಸಗಳು ಶಾಶ್ವತವಾಗಿ ಉಳಿಯುತ್ತದೆ: ಡಿ.ಕೆ.ಶಿ

    ಬೆಳ್ತಂಗಡಿ : ಉಜಿರೆಯಲ್ಲಿ ರಾಮೋತ್ಸವ ಕಾರ್ಯಕ್ರಮ ಹಿನ್ನಲೆ ಕಾರ್ಯಕ್ರಮಕ್ಕೆ ಬರುತ್ತಿದ್ದ ಪುನೀತ್ ಕೆರೆಹಳ್ಳಿಯನ್ನು ತಡೆದ ಪೊಲೀಸರು!!!

    • By admin
    • April 19, 2025
    • 175 views
    ಬೆಳ್ತಂಗಡಿ : ಉಜಿರೆಯಲ್ಲಿ ರಾಮೋತ್ಸವ ಕಾರ್ಯಕ್ರಮ ಹಿನ್ನಲೆ ಕಾರ್ಯಕ್ರಮಕ್ಕೆ ಬರುತ್ತಿದ್ದ ಪುನೀತ್ ಕೆರೆಹಳ್ಳಿಯನ್ನು ತಡೆದ ಪೊಲೀಸರು!!!

    ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಕಾಮಗಾರಿ ನಡೆಯುತ್ತಿರುವ ಚರಂಡಿಗೆ ಬಿದ್ದ ಆಟೋ, ಚಾಲಕ ಪವಾಡ ಸದೃಶ ಪಾರು

    • By admin
    • April 18, 2025
    • 184 views
    ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಕಾಮಗಾರಿ ನಡೆಯುತ್ತಿರುವ ಚರಂಡಿಗೆ ಬಿದ್ದ ಆಟೋ, ಚಾಲಕ ಪವಾಡ ಸದೃಶ ಪಾರು

    ಮಂಗಳೂರಿನ ಹಳೇ ಬಂದರಿನಿಂದ ಲಕ್ಷದೀಪಕ್ಕೆ ಹೈ ಸ್ಪೀಡ್ ಫೇರೀ ಪ್ರಾಯೋಗಿಕ ಸಂಚಾರ ಪುನರಾರಂಭ

    • By admin
    • April 9, 2025
    • 88 views
    ಮಂಗಳೂರಿನ ಹಳೇ ಬಂದರಿನಿಂದ ಲಕ್ಷದೀಪಕ್ಕೆ ಹೈ ಸ್ಪೀಡ್ ಫೇರೀ ಪ್ರಾಯೋಗಿಕ ಸಂಚಾರ ಪುನರಾರಂಭ

    ಪಿಯುಸಿ ಫಲಿತಾಂಶ ಪ್ರಕಟ ಉಡುಪಿಗೆ ಮೊದಲ ಸ್ಥಾನ

    • By admin
    • April 8, 2025
    • 108 views
    ಪಿಯುಸಿ ಫಲಿತಾಂಶ ಪ್ರಕಟ ಉಡುಪಿಗೆ ಮೊದಲ ಸ್ಥಾನ