ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಕ್ಲಬ್ ಮಡಂತ್ಯಾರು, ಯುವ ವಕೀಲರ ವೇದಿಕೆ ಬೆಳ್ತಂಗಡಿ, ಮಾನವ ಹಕ್ಕುಗಳ ವೇದಿಕೆ ಬೆಳ್ತಂಗಡಿ (ರಿ) ಸ್ಪಂದನ ಪಾಲಿ ಕ್ಲಿನಿಕ್ ಮತ್ತು ಪೊಲೀಸ್ ಇಲಾಖೆ ಇವರುಗಳ ಸಹಭಾಗಿತ್ವದಲ್ಲಿ 3 ನೇ ಉಚಿತ ರಕ್ತ ತಪಾಸಣಾ ಶಿಬಿರ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ನಡೆಸಲಾಯಿತು.
ಉಚಿತ ಆರೋಗ್ಯ ಶಿಬಿರ ವನ್ನು ಪುಂಜಾಲಕಟ್ಟೆ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಸೌಮ್ಯ ಜೆ ಯವರು ಉದ್ಘಾಟಿಸಿದರು.
ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಕ್ಲಬ್ ಮಡಂತ್ಯಾರು ವತಿಯಿಂದ ಪೊಲೀಸ್ ಠಾಣೆಗೆ 2 ಪ್ರಥಮ ಚಿಕಿತ್ಸಾ ಕಿಟ್ ನೀಡಲಾಯಿತು.
ಈ ಸಂಧರ್ಭದಲ್ಲಿ ಬೀಟ್ ಪೊಲೀಸ್ ಪೇದೆ ಶ್ರೀ ಶಂಕರ್ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅಥಿಗಳಾಗಿ ರೋ. ಜಯಂತ ಶೆಟ್ಟಿ, ಭಾಗವಹಿಸಿದ್ದರು. ರೋ. ಬಿ. ಕೆ. ಧನಂಜಯ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಓಡಿಯಪ್ಪಗೌಡ ಪೋಲೀಸ್ ಉಪನಿರೀಕ್ಷಕರು, ಮಾನವ ಹಕ್ಕುಗಳ ಸಮಿತಿ ಬೆಳ್ತಂಗಡಿ ಇದರ ಅಧ್ಯಕ್ಷರಾದ ಸೆಬೆಸ್ಟಿನ್, ರೊ.ರಾಜೇಶ್ ಕೃಷ್ಣಪ್ಪ, ಸ್ಪಂದನಾ ಪಾಲಿ ಕ್ಲಿನಿಕ್ ಮಾಲ್ಹಕರಾದ ಮೆಲ್ಬಿ.ಪಿ.ಸಿ ಉಪಸ್ಥಿತರಿದ್ದರು.
ಪ್ರಶಾಂತ್ ಎಂ ಕಾರ್ಯಕ್ರಮ ನಿರೂಪಿಸಿ, ನವೀನ್ ಬಿ. ಕೆ ಧನ್ಯವಾದ ಸಮರ್ಪಿಸಿದರು.