ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕ, ಚಾರ್ಮಾಡಿ ತಂಡದಿಂದ ಶ್ಲಾಘನೀಯ ಕೆಲಸ


ಬೆಳ್ತಂಗಡಿ: ಚಾರ್ಮಾಡಿ ಮೃತ್ಯುಂಜಯ ನದಿ ಅರಣೆಪಾದೆ-ಅಂತರ ಸಂಪರ್ಕದ ಕಿಂಡಿ ಅಣೆಕಟ್ಟಿನಲ್ಲಿ 8 ಅಡಿ ಗಾತ್ರದ ಹೆಬ್ಬಾವು ನೀರಿನಲ್ಲಿ ಕೊಚ್ಚಿಕೊಂಡು ಬಂದು ಸಿಲುಕಿತ್ತು, ನೀರಿನಲ್ಲಿ ಸತ್ತು ನಾರುತ್ತಿದ್ದ ಹೆಬ್ಬಾವನ್ನು ಕಂಡ ಸ್ಥಳೀಯರಾದ ನಾಗೇಶ್ ಮೂಲ್ಯ ಇವರು ತಕ್ಷಣ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಹರೀಶ್ ಅರಣೆಪಾದೆ ಇವರಿಗೆ ತಿಳಿಸಿದರು.

ತಕ್ಷಣ ಕಾರ್ಯಪ್ರವೃತ್ತರಾದ ಹರೀಶ್ ಇವರು ಹೆಬ್ಬಾವನ್ನು ನೀರಿನಿಂದ ಮೇಲೆತ್ತಿ ಹೂಳುವ ಕೆಲಸವನ್ನು ಮಾಡಿ ಶ್ಲಾಘನೀಯ ಕೆಲಸಕ್ಕೆ ಪಾತ್ರರಾದರು.

READ ALSO

ಈ ಶ್ಲಾಘನೀಯ ಕಾರ್ಯದಲ್ಲಿ ಪ್ರದೀಪ್ ಅಂತರ, ಲಕ್ಷ್ಮಣ ಗೌಡ ಅಂತರ, ಭರತ್ ಅಂತರ, ಪ್ರಣಮ್ಯ ಮತ್ತು ಅಮೃತಾ ಅರಣೆಪಾದೆ ಇವರು ಭಾಗವಹಿಸಿದ್ದರು.