ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಅಡಿಕೆ ವರ್ತಕರ ಸಂಘ ಇದರ ಪದಾಧಿಕಾರಿಗಳ ಆಯ್ಕೆಯು ಭಾನುವಾರದಂದು ಗುರುವಾಯಕೆರೆ ಬಂಟರಭವನ ದಲ್ಲಿ ನಡೆಯಿತು.
ತಾಲೂಕು ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರಾಗಿ ಶ್ರೀ ಬಾಲಕೃಷ್ಣ ಶೆಟ್ಟಿ ಸವಣಾಲು ಉಪಾಧ್ಯಕ್ಷ ರಾಗಿ ಶ್ರೀ ಪ್ರಶಾಂತ್ ಶೆಟ್ಟಿ , ಶ್ರೀ ಪುರೋಷತ್ತಮ್ , ಶ್ರೀ ಹಮೀದ್ ,ಶ್ರೀ ಜಮಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರದಾನ ಕಾರ್ಯದರ್ಶಿ ಯಾಗಿ ಶಂಶುದ್ದಿನ್ ಗೇರುಕಟ್ಟೆ, ಕಾರ್ಯದರ್ಶಿ ಯಾಗಿ ಶ್ರೀ ಜಗದೀಶ್ ಮತ್ತು ಶ್ರೀ ಸತೀಶ್ ರೈ, ಕೋಶಾಧಿಕಾರಿ ಯಾಗಿ ಶ್ರೀ ಹೇಮಶಂಕರ್ ಶೆಟ್ಟಿ ಮಾದ್ಯಮ ಮತ್ತು ಪ್ರಚಾರ ಪ್ರಮುಖರಾಗಿ ಶ್ರೀ ಸುದೀಪ್ ಶೆಟ್ಟಿ ಆಯ್ಕೆಯಾಗಿದ್ದಾರೆ
ಗೌರವ ಸಲಹೆಗಾರರಾಗಿ ಶ್ರೀ ಪದ್ಮರಾಜ್ ಜೈನ್ , ಶ್ರೀ ಬಿ ಹೈದರ್ ಮತ್ತು ಪುಷ್ಪರಾಜ್ ಜೈನ್ ನೇಮಕಗೊಂಡರು.
ನೂತನ ಅದ್ಯಕ್ಷರಾದ ಶ್ರೀ ಬಾಲಕೃಷ್ಣ ಶೆಟ್ಟಿಯವರು ಮಾತನಾಡುತ್ತಾ ಹಲವಾರು ರೈತ ಸ್ನೇಹಿ ಕಾರ್ಯಕ್ರಮಗಳನ್ನು ಒಳಗೊಂಡಂತೆ ವರ್ತಕರ ಹಿತಾಸಕ್ತಿ ಕಾಪಾಡಲು ಮುಂಬರುವ ದಿನಗಳಲ್ಲಿ ರೂಪರೇಷಗಳನ್ನು ರಚಿಸಲುಗುವುದೆಂದು ಹಾಗೂ ಸರ್ಕಾರ ಮತ್ತು ವಿವಿಧ ಇಲಾಖೆಗಳಿಂದ ವರ್ತಕರ ಶೋಷಣೆ ತಪ್ಪಿಸಲಾಗುವುದೆಂದು ತಿಳಿಸಿದರು.
ತಾಲೂಕಿನಾದ್ಯಂತ 70 ಕ್ಕು ಅಧಿಕ ವರ್ತಕರು ಈ ಸಭೆಯಲ್ಲಿ ಭಾಗವಹಿಸಿದರು.