ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದ್ದು, ಇಂದು ಸಂಜೆ ಮಿತ್ತಬಾಗಿಲು ಗ್ರಾಮದ ಕೊಲ್ಲಿ ನಡ್ತಿಕಲ್ಲು ಆಲದಕಾಡು ಎಂಬಲ್ಲಿ ಕಾಡಿನ ನಡುವೆ ಭಾರಿ ಭೂ ಕುಸಿತ ಸಂಭವಿಸಿದೆ.
ಘಟನೆಯಲ್ಲಿ ಕುದುರೆಮುಖ ವನ್ಯಜೀವಿ ವಿಭಾಗಕ್ಕೆ ಸೇರಿದ ಸುಮಾರು 4 ಎಕರೆಯಷ್ಟು ಪ್ರದೇಶದ ಮಣ್ಣು ಜಾರಿ ಕೆಳಗೆ ಬಂದಿರುವುದು ಕಂಡು ಬಂದಿದೆ.
ಇಂದು ಭೂಕುಸಿತ ಸಂಭವಿಸಿದ ಜಾಗ ಜನ ವಸತಿ ಪ್ರದೇಶದಿಂದ ಸುಮಾರು 3 ಕಿ.ಮೀ ಗಿಂತಲೂ ಹೆಚ್ಚು ದೂರದಲ್ಲಿರುವುದರಿಂದ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಹೆಚ್ಚಿನ ಮಾಹಿತಿಯನ್ನು ನೀರಿಕ್ಷಿಸಲಾಗಿದೆ.