ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಮಂಗಳೂರಿನ‌ ಲೋಕಲ್ ಚಾನಲ್ ನಿರೂಪಕ ಮತ್ತು ತುಳು ಚಿತ್ರನಟ ಅರವಿಂದ್ ಬೋಳಾರ್ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲು!

ಮಂಗಳೂರು: ತುಳುನಾಡಿನ ಹಾಸ್ಯ ಕಲಾವಿದ ತುಳು ಚಿತ್ರನಟ ಅರವಿಂದ್ ಬೋಳಾರ್ ಹಾಗೂ ಮಂಗಳೂರಿನ‌ ಲೋಕಲ್ ಚಾನಲ್ ನಿರೂಪಕರ ವಿರುದ್ಧ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪದಡಿಯಲ್ಲಿ ದೂರು ದಾಖಲಾಗಿದೆ.

“ಬರೆದೀಪಿ ಜ್ಯೋತಿಷಿ” ಎಂಬ ಹೆಸರಿನ ಹಾಸ್ಯ ಕಾರ್ಯಕ್ರಮವು ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗಿತ್ತು, ಪುರೋಹಿತರಿಗೆ ಕೀಳು ಮಟ್ಟದಲ್ಲಿ ಅವಹೇಳನ ಹಾಗೂ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕುಂಜತ್ತಬೈಲ್ ನ ಶಿವರಾಜ್ ಎಂಬವರು ದೂರನ್ನು ನೀಡಿದ್ದು,  ಕಾವೂರು ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

READ ALSO