ಮೂರ್ಖರ ದಿನದ ಮುನ್ನಾ ದಿನವೇ ಮೂರ್ಖತನ ತೋರಿದ ದುಷ್ಕರ್ಮಿಗಳು! ದನಕಳ್ಳರೆಂದು ನೈತಿಕ ಪೊಲೀಸ್ ಗಿರಿ ಮಾಡಿದ ಅಪರಿಚಿತರ ತಂಡ

ಬೆಳ್ತಂಗಡಿ : ಪಿಕಪ್ ವಾಹನದಲ್ಲಿ ಸಂಬಂಧಿಕರ ಮನೆಗೆ ಹೋಗಿ ಟ ಮಾಡಿ ವಾಪಸ್ ಬರುವಾಗ ದನ ಕಳ್ಳರು ಎಂದು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟಿನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿಯ ಪಿಕಪ್ ವಾಹನ ಹೊಂದಿರುವ ರಹಿಮಾನ್(55) ನಿನ್ನೆ ಬುಧವಾರ ಸಂಜೆ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಪಿಕಪ್ ಬಾಡಿ ಕೆಲಸ ಮಾಡಿಸಲು ಬಂದಿದ್ದು ಜೊತೆಗೆ ಕುಪ್ಪೆಟ್ಟಿಯ ಮುಸ್ತಾಫಾ(40) ಕರೆದುಕೊಂಡು ಬಂದಿದ್ದರು ಆದ್ರೆ ಕೆಲಸ ಮಾಡಲು ಅಗಿಲ್ಲ ನಂತರ ರಹಿಮಾನ್ ತನ್ನ ಸಂಬಂಧಿಕರ ಮನೆಯಾದ ಸವಣಾಲಿಗೆ ಹೋಗಿ ಊಟ ಮಾಡಿ ವಾಪಸ್ ಬರುವಾಗ ಸವಣಾಲಿನಿಂದ ಬೈಕ್ ,ಕಾರುಗಳಲ್ಲಿ ಬೆನ್ನಟ್ಟಿದ್ದಾರೆ ಮೇಲಂತಬೆಟ್ಟು ಬರುತ್ತಿದ್ದಂತೆ ಎದುರಿನಿಂದ ಬೈಕ್ ನಲ್ಲಿ ಬರುತ್ತಿದ್ದ ದುಷ್ಪರ್ಮಿಗಳು ಪಿಕಪ್ ಅಡ್ಡಗಟ್ಟಿ ನೀವು ದನ ಕಳ್ಳರು ನಮ್ಮ ಊರಿನಿಂದ ದನ ಕಳ್ಳತನ ಮಾಡಲು ಬಂದಿದ್ದಿರಿ ಎಂದು ಅವ್ಯಾಚ ಶಬ್ದಗಳಿಂದ ನಿಂದಿಸಿ ಪಿಕಪ್ ನಲ್ಲಿದ್ದ ರಹಿಮಾನ್ ಮತ್ತು ಮುಸ್ತಫಾ ಮೇಲೆ 50 ಕ್ಕೂ ಅಧಿಕ ದುಷ್ಕರ್ಮಿಗಳು ರಾಡ್ , ಕೊಲಿನಿಂದ ಮಾನಸೋ ಇಚ್ಚೆ ದಾಳಿ ಮಾಡಿದ್ದಾರೆ. ದಾಳಿಯಿಂದ ರಹಿಮಾನ್ ಒಂದು ಕಣ್ಣಿಗೆ ಗಾಯವಾಗಿದ್ದು ದೇಹದ ಎಲ್ಲಾ ಭಾಗಕ್ಕೆ ಗಂಭಿರ ಹಲ್ಲೆ ಮಾಡಿದ್ದಾರೆ. ಮುಸ್ತಾಫಾಗೂ ಗಾಯವಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ಸ್ಥಳಿಯರು ನೀಡಿದ್ದು ಪೊಲೀಸರು ಬಂದು ಗುಂಪು ಚದುರಿಸಿ ಗಾಯಗೊಂಡ ಇಬ್ಬರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಹಲ್ಲೆ ಮಾಡಿದ ಕೆಲವರು ವಶಕ್ಕೆ: ಇನ್ನೂ ಘಟನೆ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಲ್ಲೆ ಮಾಡಿದ ಕೆಲವರನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Spread the love
  • Related Posts

    ಬೆಳ್ತಂಗಡಿ : “ಸಾಲ್ಯಾನ್ ಎಲ್ ಇಡಿ, ಧ್ವನಿ ನ್ಯೂಸ್ ಮಾಲಕ ಸುದೀಪ್ ಸಾಲ್ಯಾನ್’ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ ಗರಿಮೆ

    ಬೆಳ್ತಂಗಡಿ : ತಾಲೂಕು ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಬಹಳಷ್ಟು ಖ್ಯಾತಿ ಪಡೆದಿರುವ “ಸಾಲ್ಯಾನ್ ಎಲ್ ಇಡಿ” ಇಂದು ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ ಪ್ರಮಾಣಪತ್ರವನ್ನು ತನ್ನದಾಗಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ನಡೆದ ದಿ| ಕಿಶೋರ್‌ಕುಮಾರ್‌ ಹಾಡುಗಳ ಗಾಯನ ದಾಖಲೆ, 100 ಗಾಯಕರು, ನಿರಂತರ 40…

    Spread the love

    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    ನವದೆಹಲಿ: ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ ಮೂವರು ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರನ್ನು ನವದೆಹಲಿಗೆ ಕರೆಸಿ, ಅವರ ಜತೆಯಲ್ಲಿ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ…

    Spread the love

    You Missed

    ಬೆಳ್ತಂಗಡಿ : “ಸಾಲ್ಯಾನ್ ಎಲ್ ಇಡಿ, ಧ್ವನಿ ನ್ಯೂಸ್ ಮಾಲಕ ಸುದೀಪ್ ಸಾಲ್ಯಾನ್’ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ ಗರಿಮೆ

    • By admin
    • December 13, 2025
    • 23 views
    ಬೆಳ್ತಂಗಡಿ : “ಸಾಲ್ಯಾನ್ ಎಲ್ ಇಡಿ, ಧ್ವನಿ ನ್ಯೂಸ್ ಮಾಲಕ ಸುದೀಪ್ ಸಾಲ್ಯಾನ್’ಗೆ  ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ ಗರಿಮೆ

    ಜೇಸಿ ಉತ್ಸವ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ: ಪುಷ್ಠಿ ಮುಂಡಾಜೆ ಪ್ರಥಮ

    • By admin
    • December 8, 2025
    • 17 views
    ಜೇಸಿ ಉತ್ಸವ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ: ಪುಷ್ಠಿ ಮುಂಡಾಜೆ ಪ್ರಥಮ

    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    • By admin
    • December 4, 2025
    • 36 views
    ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಕರ್ನಾಟಕದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಪ್ರಮುಖರ ಸಭೆ ಆಯೋಜಿಸಿದ ಕೇಂದ್ರ ಸಚಿವ ಎಚ್ ಡಿ ಕೆ

    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    • By admin
    • December 4, 2025
    • 56 views
    ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ನೂತನ ಧ್ವಜಸ್ತಂಭಕ್ಕೆ ಧರ್ಮಸ್ಥಳದಲ್ಲಿ ವಿಷೇಶ ಪೂಜೆ

    ಸೇವಾ ಭಾರತಿಯ ನೂತನ ಕಾರ್ಯಾಲಯ ಸೇವಾನಿಕೇತನ’ದ ಉದ್ಘಾಟನೆ ಹಾಗೂ 21ನೇ ವರ್ಷದ ಸಂಭ್ರಮ ಕಾರ್ಯಕ್ರಮ

    • By admin
    • December 4, 2025
    • 37 views
    ಸೇವಾ ಭಾರತಿಯ ನೂತನ ಕಾರ್ಯಾಲಯ ಸೇವಾನಿಕೇತನ’ದ ಉದ್ಘಾಟನೆ ಹಾಗೂ 21ನೇ ವರ್ಷದ ಸಂಭ್ರಮ ಕಾರ್ಯಕ್ರಮ

    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಉಪರಾಷ್ಟ್ರಪತಿ ಭೇಟಿ

    • By admin
    • December 4, 2025
    • 44 views
    ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಉಪರಾಷ್ಟ್ರಪತಿ ಭೇಟಿ