ಬೆಳ್ತಂಗಡಿ ತಾಲೂಕಿನಾದ್ಯಂತ ಗುಡುಗು ಸಿಡಿಲಿನ ಆರ್ಭಟದ ನಡುವೆ ಸುರಿದ ಭಾರಿ ಗಾಳಿಮಳೆ

ಬೆಳ್ತಂಗಡಿ:  2021 ನೇ ಇಸವಿಯ ಮೊದಲನೇ ಮಳೆ ಬೆಳ್ತಂಗಡಿ ತಾಲೂಕಿನಾದ್ಯಂತ ಎಡೆಬಿಡದೆ ಸುರಿಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಕೆಲವು ಪರಿಸರದಲ್ಲಿ ಭಾರಿ ಸಿಡಿಲು ಗುಡುಗಿನಿಂದ ಕೂಡಿದ ಗಾಳಿ-ಮಳೆ  ಸುರಿಯುತ್ತಿದೆ. ತಾಲೂಕಿನ ಅರಸಿನಮಕ್ಕಿ ಶಿಶಿಲ ಉಜಿರೆ, ಪಜಿರಡ್ಕ ,ಸೋಮಂತಡ್ಕ ,ಮುಂಡಾಜೆ ಪರಿಸರದಲ್ಲಿ ಭಾರಿ ಮಳೆಯಾಗಿದೆ.

ತಾಲೂಕಿನಾದ್ಯಂತ ಸುರಿದ ಅಕಾಲಿಕ ಮಳೆಗೆ ರೈತರು ಕಂಗಾಲಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

READ ALSO

ಇನ್ನೂ ಹಲವೆಡೆ ಮೋಡಕವಿದ ವಾತಾವರಣವಿದ್ದು ಭಾರಿ ಮಳೆಯಾಗುವ ಸಾಧ್ಯತೆಯಿದೆ.