TRENDING
Next
Prev

ಬೆಳ್ತಂಗಡಿ: ಸೋಜಾ‌, ಧೂಮ್ ಧಮಾಕಾ ಮಳಿಗೆಯಲ್ಲಿ ಸ್ವಾತಂತ್ರ್ಯೋತ್ಸವ; ಪ್ರತಿಭಾ ಪುರಸ್ಕಾರ

ಬೆಳ್ತಂಗಡಿ: ಬೆಳ್ಳಿಹಬ್ಬ ಆಚರಿಸುತ್ತಿರುವ ಸೋಜಾ ಎಲೆಕ್ಟ್ರಾನಿಕ್ ಬೆಳ್ತಂಗಡಿ ಮತ್ತು ಧೂಮ್ ಧಮಾಕಾ ವಸ್ರ್ತ ಮಳಿಗೆ ಜಂಟಿ‌ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ರಾಷ್ಟ್ರ ಧ್ವಜಾರೋಹಣ ವನ್ನು ನಿವೃತ ಯೋಧ ಕಾಂಚೋಡು ಗೋಪಾಲಕೃಷ್ಣ ಭಟ್ ನೆರವೇರಿಸಿದರು.
ಸಮಾರಂಭದಲ್ಲಿ ಸಮಾಜ ಸೇವಕ ಅಕ್ಬರ್ ಬೆಳ್ತಂಗಡಿ, ಧೂಮ್ ಧಮಾಕಾ ವಸ್ರ್ತ ಮಳಿಗೆಯ ಮಾಲಕ ಅಬ್ದುಲ್ ರಝಾಕ್ ಇವರು ಭಾಗಿಯಾಗಿದ್ದರು.

READ ALSO

ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಸೋಜಾ ಸಂಸ್ಥೆಯ ಮಾಲಕ ಆಲ್ಫೋನ್ಸ್ ಫ್ರಾಂಕೋ ವಹಿಸಿದ್ದು, ಸ್ವಾಗತಿಸಿ ಪ್ರಸ್ತಾವನೆಗೈದರು.

ಪಿಯುಸಿ, ಎಸ್ಸೆಸ್ಸೆಲ್ಸಿ ಸಾಧಕರಿಗೆ ಪ್ರತಿಭಾ ಪುರಸ್ಕಾರ;
ಸಮಾರಂಭದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನಿಯಾದ ಶ್ರೇಯಾ ಡೋಂಗ್ರೆ, ದ್ವಿತೀಯ ಸ್ಥಾನಿಯಾದ ಸುಶ್ಮಿತಾ ರಚೆಲ್ ವೇಗಸ್, ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನಿಯಾದ ಶೈವಿ ಬಿ, ಅವರಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಸೈನ್ಯದಲ್ಲಿನ ವಿಶೇಷ ಸಾಧನೆಗಾಗಿ ಕಾಂಚೋಡು ಗೋಪಾಲಕೃಷ್ಣ ಭಟ್ ಅವರನ್ನು ಸನ್ಮಾನಿಸಲಾಯಿತು.

ಪುರಸ್ಕಾರ ಮತ್ತು ಶೈಕ್ಷಣಿಕ ದತ್ತು ಸ್ವೀಕಾರ;

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ‌ ಮಾಡಿದ ಪ್ರತೀಕ್ಷಾ ತನಿಯಪ್ಪ‌ ಮೂಲ್ಯ, ಫಾತಿಮತ್ ಝಾಹಿದಾ ಇಸ್ಮಾಯಿಲ್, ಪ್ರಿನ್ಸಿಡಾ ಅವರಿಗೆ ವಿಶೇಷ ಪುರಸ್ಕಾರ ಮಾಡಿ, ಅವರ ಕುಟುಂಬದ ಆರ್ಥಿಕ ಹಿನ್ನೆಲೆ ಆಧಾರದಲ್ಲಿ ಮೂರೂ ಮಂದಿಯನ್ನು ಸೋಜಾ ಇಲೆಕ್ಟ್ರಾನಿಕ್ ಮತ್ತು ಧೂಮ್ ಧಮಾಕಾ ವತಿಯಿಂದ ಪಿಯುಸಿ ವಿಧ್ಯಾಭ್ಯಾಸಕ್ಕಾಗಿ ಸಂಪೂರ್ಣ ಶೈಕ್ಷಣಿಕ ದತ್ತು ಸ್ವೀಕರಕ್ಕಾಗಿ ಘೋಷಿಸಲಾಯಿತು.

ಡಾ.ದೀಪಾಲಿ ಡೋಂಗ್ರೆ ಅನಿಸಿಕೆ ವ್ಯಕ್ತಪಡಿಸಿದರು.
ಸೋಜಾ ಇಲೆಕ್ಟ್ರಾನಿಕ್ಸ್‌ನ ಆಡಳಿತಾಧಿಕಾರಿ ಲ್ಯಾನ್ಸಿ ಡಿಸೋಜಾ ಉಪಸ್ಥಿತರಿದ್ದರು. ಸೀನಿಯರ್ ಸೇಲ್ಸ್ ಎಕ್ಸಿಕ್ಯೂಟಿವ್ ರಮೇಶ್ ನಿರೂಪಿಸಿದರು. ಪಿಆರ್‌ಒ
ದೀಪ್ತಿ ಬಂಗೇರ, ಕಸ್ಟಮರ್ ಕೇರ್ ಆಫೀಸರ್ ಸ್ವಾತಿ, ನೆಯ ನಿಝಾಮ್ ಜವಾಬ್ಧಾರಿಗಳನ್ನು ನಿರ್ವಹಿಸಿದರು.
ಸಿಬ್ಬಂದಿಗಳು ಸಹಕರಿಸಿದರು.