ಕೊಡಗಿನ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ: ಇಂದು ಮತ್ತೊಂದು ಮೃತದೇಹ ಪತ್ತೆ

ಕೊಡಗು: ಕೊಡಗಿನ ಭಾಗಮಂಡಲದ ಬ್ರಹ್ಮಗಿರಿ ಬೆಟ್ಟ ಕುಸಿದು 10 ದಿನಗಳು ಕಳೆದಿದ್ದು, ದುರಂತದಲ್ಲಿ ಐವರು ಭೂ ಸಮಾಧಿಯಾಗಿದ್ದಾರೆ. ಇದುವರೆಗೂ 2 ಮೃತ ದೇಹ ಮಾತ್ರ ಪತ್ತೆಯಾಗಿದ್ದು ಸದ್ಯ ಮತ್ತೊಂದು ಮೃತದೇಹ ಪತ್ತೆಯಾಗಿದೆ.

ಸತತ 10 ದಿನಗಳ ಶೋಧಕಾರ್ಯದಲ್ಲಿ ಮತ್ತೊಂದು ಮೃತ ದೇಹ ಪತ್ತೆಯಾಗಿದೆ. ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ಗುರುತು ಹಚ್ಚಲು ಸಾಧ್ಯವಾಗುತ್ತಿಲ್ಲ. ದುರುಂತದಲ್ಲಿ ಒಟ್ಟು 5 ಮಂದಿ ಅಸುನೀಗಿದ್ದು, ಅದಾಗಲೇ ಇಬ್ಬರು ಮೃತದೇಹ ಪತ್ತೆಯಾಗಿತ್ತು. ಈಗ ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ಮತ್ತಿಬ್ಬರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಅಂದ್ಹಾಗೆ, ಶಾಂತಾ, ರವಿಕಿರಣ್‌, ಶ್ರೀನಿವಾಸ್‌ಗಾಗಿ ಶೋಧ ಕಾರ್ಯ ನಡೆಯುತ್ತಿತ್ತು, ಆದ್ರೆ, ಸಿಕ್ಕಿರುವ ಮೃತದೇಹ ಈ ಮೂವರಲ್ಲಿ ಯಾರದ್ದು ಎನ್ನುವುದು ಇನ್ನು ಗುರುತು ಸಿಕ್ಕಿಲ್ಲ.

READ ALSO