ಬೆಳ್ತಂಗಡಿ ಮಿನಿ ವಿಧಾನಸೌಧದ ವಠಾರದಲ್ಲಿ 74 ನೇ ಸ್ವಾತಂತ್ರ್ಯೋತ್ಸವದ ದ್ವಜಾರೋಹಣ ನೆರವೇರಿಸಿ ಶುಭ ಸಂದೇಶ ನೀಡಿದ ತಹಶೀಲ್ದಾರ್ ಮಹೇಶ್ ಜೆ

ಬೆಳ್ತಂಗಡಿ: ನಾವು ಬೆಳೆಯುವುದರೊಂದಿಗೆ ನಮ್ಮ ಮುಂದಿನ ಪೀಳಿಗೆಗಾಗಿ ಸುಂದರ ನಾಳೆಗಳನ್ನು ಕಟ್ಟೋಣ.ಮಹಾತ್ಮರು ತೋರಿಸಿದ ಸತ್ಯ ಧರ್ಮದ ಹಾದಿಯಲ್ಲಿ ಸಾಗೋಣ ಮುಂದಿನ ಪೀಳಿಗೆಗಾಗಿ ಮಾನವೀಯ ಬದುಕನ್ನು ಕಟ್ಟಿಕೊಡಬೇಕಾಗಿದೆ.ನಮ್ಮನ್ನು ನಾವೇ ನಿಯಂತ್ರಿಸಿಕೊಳ್ಳುವುದರ ಜೊತೆಗೆ ಸತ್ಯ ಮಾರ್ಗವನ್ನು ಬಿಡದೇ ನಿಷ್ಠೆಯಿಂದ ಮಾಡುವ ಮತ್ತು ಯಾರ ಹಂಗಿಲ್ಲದೆ ಬಾಳುವುದೇ ಸ್ವರಾಜ್ಯ ಎಂದು ಮಹಾತ್ಮ ಗಾಂಧಿ ನಂಬಿದ್ದರು.ಎಂದು ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ ಹೇಳಿದರು. ಅವರು ಬೆಳ್ತಂಗಡಿ ಮಿನಿ ವಿಧಾನಸೌಧದ ವಠಾರದಲ್ಲಿ ನಡೆದ 74 ನೇ ಸ್ವಾತಂತ್ರ್ಯೋತ್ಸವದ ದ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರ ನೆನಪನ್ನು ಮಾಡುವುದರ ಜೊತೆಗೆ ಮುಂದಿನ ಪೀಳಿಗೆಯ ಸುಂದರ ಬದುಕಿಗಾಗಿ ಅತ್ಮವಿಶ್ವಾಸ ತುಂಬುವ ಕೆಲಸ ಆಗಬೇಕು ಎಂದರು.

ಅಧ್ಯಕ್ಷತೆಯನ್ನು ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ ವಹಿಸಿ ಶುಭ ಕೋರಿದರು. ವೇದಿಕೆಯಲ್ಲಿ ತಾ.ಪಂ ಉಪಾಧ್ಯಕ್ಷೆ ವೇದಾವತಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್, ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ಲೋಕೋಪಯೋಗಿ ಇಲಾಖಾ ಸ.ಕಾ. ಅಭಿಯಂತರ ಶಿವಪ್ರಸಾದ ಅಜಿಲ, ಜಿ.ಪಂ ಇಂಜಿನಿಯರಿಂಗ್ ಉಪವಿಭಾಗದ ಸ.ಕಾ. ಅಭಿಯಂತರ ಸೂರ್ಯನಾರಾಯಣ ಭಟ್, ಸಿಡಿಪಿಒ ಪ್ರಿಯಾ ಆಗ್ನೇಸ್, ನ.ಪಂ ಮುಖ್ಯಾಧಿಕಾರಿ ಸುಧಾಕರ್, ನಿವೃತ್ತ ಸೇನಾಧಿಕಾರಿ ಎಂ.ಆರ್.ಜೈನ್, ತಾ.ಪಂ ವಿಜಯ ಗೌಡ, ತಾ.ಪಂ ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ, ಎಸ್.ಐ ನಂದಕುಮಾರ್, ಉಪ ತಹಶೀಲ್ದಾರ್‌ಗಳಾದ ಶಂಕರ್, ಮಹಾದೇವ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

READ ALSO

ಈ ಸಂದರ್ಭದಲ್ಲಿ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಸುಭಾಶ್‌ಜಾದವ್ ವಿದ್ಯಾರ್ಥಿಗಳ ವಿವರ ನೀಡಿದರು. ಬಂಗಾಡಿ ಸಿಆರ್‌ಪಿ ರಮೇಶ್ ಕಾರ್ಯಕ್ರಮ ನಿರೂಪಿಸಿ, ಗೃಹರಕ್ಷಕ ದಳದ ತಾಲೂಕು ಘಟಕಾಧಿಕಾರಿ ಜಯಾನಂದ ಎಲ್. ವಂದಿಸಿದರು.