ಬದುಕು ಕಟ್ಟೋಣ ಬನ್ನಿ ತಂಡದಿಂದ ಕಿಂಡಿಅಣೆಕಟ್ಟಿನಲ್ಲಿ ಸಿಲುಕಿದ ಮರಗಳ ತೆರವು ಕಾರ್ಯಾಚರಣೆ

ಬೆಳ್ತಂಗಡಿ : ಮಹಾಮಳೆಗೆ ತಾಲೂಕಿನ ಅನೇಕ ಭಾಗಗಳಲ್ಲಿ ಹಾನಿಯಾಗಿದ್ದು ಕೆಲವು ಕಡೆ ಮರಗಳು ಬಂದು ಸೇರಿಕೊಂಡಿದ್ದು ಬೆಳ್ತಂಗಡಿ ತಾಲೂಕಿನ ಉಜಿರೆಯ ನಿಡಿಗಲ್ ಸೇತುವೆ ಪಕ್ಕದ ಕಿಂಡಿಅಣೆಕಟ್ಟಿನಲ್ಲಿ ಮಳೆಗೆ ಮರದ ತುಂಡುಗಳು , ಕಸಕಡ್ಡಿಗಳು ಸೇರಿ ನೀರು ಹೋಗುದಕ್ಕೂ ತೊಂದರೆಯಾಗುತ್ತಿತ್ತು ಈ ಬಗ್ಗೆ ಸ್ಥಳೀಯರ ಮಾಹಿತಿ ಮೇರೆಗೆ ಇಂದು ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್ ಮತ್ತು ಸಂಧ್ಯಾ ಟ್ರೇಡರ್ಸ್ ಮಾಲಕ ರಾಜೇಶ್ ಪೈ ನೇತ್ರತ್ವದ ಉಜಿರೆಯ “ಬದುಕು ಕಟ್ಟೋಣ ಬನ್ನಿ” ತಂಡದ ನೂರಕ್ಕೂ ಮಿಕ್ಕಿ ಸದಸ್ಯರು ಇಂದು(ಭಾನುವಾರ) ಬೆಳಗ್ಗೆಯಿಂದ ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

READ ALSO