TRENDING
Next
Prev

ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆಯ ವಿವಾದದ ಕುರಿತು ಸ್ಪಷ್ಟನೆ ನೀಡಿದ ಹಾಸ್ಯ ನಟ ಅರವಿಂದ್ ಬೋಳಾರ್!

ಮಂಗಳೂರು:  ತುಳು ರಂಗಭೂಮಿಯ ಹಾಸ್ಯ ಕಲಾವಿದ ತುಳು ಚಿತ್ರರಂಗದ ಹಾಸ್ಯನಟ ಅರವಿಂದ್ ಬೋಳಾರ್ ಮತ್ತು ದೈಜಿವರ್ಲ್ಡ್ ವಾಹಿನಿಯ ಮುಖ್ಯಸ್ಥ ವಾಲ್ಟರ್ ನಂದಳಿಕೆ ವಿರುದ್ಧ ಕಳೆದ ಭಾನುವಾರ ದೈಜಿವರ್ಲ್ಡ್ ವಾಹಿನಿಯಲ್ಲಿ ಪ್ರಸಾರಗೊಂಡ ‘ಪ್ರೈವೇಟ್ ಚಾಲೆಂಜ್’ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಜ್ಯೋತಿಷ್ಯ ಶಾಸ್ತ್ರ ಮತ್ತು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ನಿನ್ನೆ ನಗರದ ಕಾವೂರ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದರು.

ಈ ಕುರಿತು ವಾಲ್ಟರ್ ನಂದಳಿಕೆ ತಮ್ಮ ವೈಯಕ್ತಿಕ ಫೇಸ್ಬುಕ್ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ವಿಡಿಯೋವೊಂದನ್ನು ಹಾಕಿದ್ದು, ಈ ಮೂಲಕ ಈ ಕಾರ್ಯಕ್ರಮ ಕೇವಲ ಹಾಸ್ಯದ ದೃಷ್ಟಿಯಿಂದ ಮಾಡಿದ್ದೆವು ವಿನಃ ಯಾವುದೇ ಧರ್ಮದ ಅಥವಾ ನಂಬಿಕೆಯನ್ನು ಅವಹೇಳನ ಮಾಡುವ ದೃಷ್ಟಿಯಿಂದಲ್ಲ ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ.

READ ALSO

ತಮ್ಮ ಹಾಸ್ಯದಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇವೆ. ಹಾಗು ಈ ಭಾರಿ ಜನಮನ್ನನೇ ಪಡೆದಿರುವ ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿಯೂ ವಿನೂತನ ವಿಷಯಗಳೊಂದಿಗೆ ಜನರ ಮುಂದೆ ಬರುತ್ತೇವೆ ಎಂದು ವಾಲ್ಟರ್ ನಂದಳಿಕೆ ಮತ್ತು ಅರವಿಂದ್ ಬೋಳಾರ್ ಹೇಳಿದ್ದಾರೆ.