ಅಂತರ್ ರಾಜ್ಯ ಗಾಂಜಾ ಸಾಗಾಟಗಾರರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ರ ಬಲೆಗೆ!ಗಾಂಜಾ ಸಾಗಾಟದ ಬೃಹತ್ ಜಾಲ ಪತ್ತೆ.!

ಮಂಗಳೂರು: ಅಂತರ್ ರಾಜ್ಯ ಗಾಂಜಾ ಸಾಗಾಟಗಾರರ ಬೃಹತ್ ಜಾಲವನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಪತ್ತೆ ಹಚ್ಚಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಬರೋಬ್ಬರಿ 175ಕೆ.ಜಿ ಗಾಂಜ ಸಹಿತ ಮೂವರನ್ನು ಬಂಧಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.

ದಿನಾಂಕ 11 08. 2020 ರಂದು ಬೆಳಿಗ್ಗೆ ಸಮಯ ಸುಮಾರು 06.30 ಗಂಟೆಗೆ ಪುತ್ತೂರು ನಗರ ಠಾಣಾ ಪೊಲೀಸ್‌ ನಿರೀಕ್ಷಕರು ತಮ್ಮ ಠಾಣಾ ಪೊಲೀಸ್ ಉಪನಿರೀಕ್ಷಕರು ಹಾಗೂ ಠಾಣಾ ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಪಾಟ್ರಕೋಡಿ ಎಂಬಲ್ಲಿ ಕೆಎ.19.ಎಎ.9294 ನೊಂದಣಿ ಸಂಖ್ಯೆಯ ಪಿಕ್‌ ಆಪ್‌ ವಾಹನ ಮತ್ತು ಕೆಎಲ್ 14-ಎಕ್ಸ್-9707 ನೊಂದಣಿ ಸಂಖ್ಯೆಯ ಕಾರೊಂದರಲ್ಲಿ ಅಕ್ರಮವಾಗಿ ಅಪಾರ ಪ್ರಮಾಣದ ಗಾಂಜಾ ಸಾಗಾಟ ಮಾಡುತ್ತಿದ್ದಾಗ ದಾಳಿ ನಡೆಸಿ ರೂ 17,50,000/- ಮೌಲ್ಯದ ಸುಮಾರು 175 ಕೆ.ಜಿ ಗಾಂಜಾ, ಸುಮಾರು ರೂ 3,00,000/- ಮೌಲ್ಯದ ಪಿಕ್ ಅಪ್ ವಾಹನ, ಸುಮಾರು ರೂ 4,00,000 /- ಮೌಲ್ಯದ ಕಾರು ಸೇರಿದಂತೆ ಒಟ್ಟು ರೂ 24,50,000/- ಸೊತ್ತುಗಳನ್ನು ವಶಕ್ಕೆ ಪಡೆದಿರುತ್ತಾರೆ.

ಸದರಿ ಸೊತ್ತುಗಳೊಂದಿಗೆ ಆರೋಪಿಗಳಾದ ಇಬ್ರಾಹಿಂ ಯಾನೆ ಅರ್ಷದ್ ಯಾನೆ ಅಚ್ಚು ಪ್ರಾಯ 26 ವರ್ಷ ವಾಸ: ಆಯಿಷಾ ಮಂಜಿಲ್ ದೂರ್ಮಕ್ಕಾಡ್ (Doormarkad) ಮನೆ ಮಿಜಾ ಮಂಜೇಶ್ವರ ಕಾಸರಗೋಡು ಕೇರಳ,

ಮೊಹಮ್ಮದ್ ಶಫಿಕ್ ಪ್ರಾಯ 31 ವರ್ಷ ತಂದೆ: ದಿ.ಮುಸ್ತಫಾ ವಾಸ: ಮಿಜಿರ್ ಪಳ್ಳ ಮನೆ (Majirpalla) ಹೊಸಂಗಡಿ ಮಂಜೇಶ್ವರ ಕಾಸರಗೋಡು ಕೇರಳ,

ಖಲಂದರ್ ಶಾಫಿ ಪ್ರಾಯ 26 ವರ್ಷ ತಂದೆ: ಅಬ್ದುಲ್ಲಾ ವಾಸ: ಮಡಕುಂಜ ಮನೆ ಕನ್ಯಾನ ಗ್ರಾಮ ಮತ್ತು ಅಂಚೆ ಬಂಟ್ವಾಳ ಎಂಬವರುಗಳನ್ನು ಬಂಧಿಸಲಾಗಿದೆ.

ಆರೋಪಿಗಳ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ 8 (C) r/w 20(b) (ii) C ಎನ್.ಡಿ.ಪಿ.ಎಸ್ ಕಾಯಿದೆಯಂತೆ ಪ್ರಕರಣ ದಾಖಲಿಸಲಾಗಿರುತ್ತದೆ.

ಸದರಿ ಆರೋಪಿಗಳ ಪೈಕಿ ಇಬ್ರಾಹಿಂ ಯಾನೆ ಅರ್ಷದ್ ಯಾನೆ ಅಚ್ಚು ಎಂಬಾತನ ವಿರುದ್ದ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 7 ಪ್ರಕರಣ, ಕುಂಬಳೆ ಠಾಣೆಯಲ್ಲಿ 2 ಪ್ರಕರಣ ಹಾಗೂ ಖಲಂದರ್ ಶಾಫಿ ಎಂಬಾತನ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ 2 ಅಕ್ರಮ ಗಾಂಜಾ ಪ್ರಕರಣ ಹಾಗು 1 ಕೊಲೆ ಯತ್ನ ಪ್ರಕರಣ ಮತ್ತು ಕಾವೂರು ಠಾಣೆಯಲ್ಲಿ 1 ಅಕ್ರಮ ಗಾಂಜಾ ಸಾಗಾಟ ಪ್ರಕರಣ ದಾಖಲಾಗಿರುತ್ತದೆ.

Spread the love
  • Related Posts

    ಬೆಳ್ತಂಗಡಿ : ಎಸ್ಐಟಿ ಎಸ್ಪಿ ಪ್ರಯಾಣಿಸುತ್ತಿದ್ದ ಇನೋವಾ ಕಾರು ಪಲ್ಟಿ, ಎಸ್ಪಿ ಸಹಿತ ನಾಲ್ವರು ಅಪಾಯದಿಂದ ಪಾರು

    ಬೆಳ್ತಂಗಡಿ : ಬುರುಡೆ ಪ್ರಕರಣದ ಎಸ್ಐಟಿ ತಂಡದ ಎಸ್ಪಿ ಮತ್ತು ಇತರ ಅಧಿಕಾರಿಗಳು ಪ್ರಯಾಣಿಸುತ್ತಿದ್ದ ಇನೋವಾ ಕಾರು ಚಾರ್ಮಾಡಿಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಬೆಳ್ತಂಗಡಿ ಎಸ್ಐಟಿ ಕಚೇರಿಯಿಂದ ಎಸ್ಪಿ ಸಿ.ಎ.ಸೈಮನ್ , ಇನ್ಸ್‌ಪೆಕ್ಟರ್ ಕುಸುಮಾಧರ್, ಸಿಬ್ಬಂದಿ ಮಂಜುನಾಥ್ ಸೇರಿ ಚಿಕ್ಕಮಗಳೂರು ಜಿಲ್ಲಾ…

    Spread the love

    ದೇವಸ್ಥಾನಗಳು ಭಜನೆ, ಸಂಸ್ಕಾರ ಮತ್ತು ಭಕ್ತಿಯ ಕೇಂದ್ರವಾಗಲಿ : ಡಾ. ನವೀನ್ ಚಂದ್ರ ಶೆಟ್ಟಿ

    ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಡಬಲು ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ₹2 ಲಕ್ಷ ಅನುದಾನ ವಿತರಣೆ ಸಕಲೇಶಪುರ: ತಾಲೂಕಿನ ಮಡಬಲು ಗ್ರಾಮದ ಐತಿಹಾಸಿಕ ಹಾಗೂ ಭಕ್ತರ ಆರಾಧನಾ ಕೇಂದ್ರವಾಗಿರುವ ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕಾಗಿ ಶ್ರೀ…

    Spread the love

    You Missed

    ಬೆಳ್ತಂಗಡಿ : ಎಸ್ಐಟಿ ಎಸ್ಪಿ ಪ್ರಯಾಣಿಸುತ್ತಿದ್ದ ಇನೋವಾ ಕಾರು ಪಲ್ಟಿ, ಎಸ್ಪಿ ಸಹಿತ ನಾಲ್ವರು ಅಪಾಯದಿಂದ ಪಾರು

    • By admin
    • June 16, 2026
    • 39 views
    ಬೆಳ್ತಂಗಡಿ : ಎಸ್ಐಟಿ ಎಸ್ಪಿ ಪ್ರಯಾಣಿಸುತ್ತಿದ್ದ ಇನೋವಾ ಕಾರು ಪಲ್ಟಿ, ಎಸ್ಪಿ ಸಹಿತ ನಾಲ್ವರು ಅಪಾಯದಿಂದ ಪಾರು

    ದೇವಸ್ಥಾನಗಳು ಭಜನೆ, ಸಂಸ್ಕಾರ ಮತ್ತು ಭಕ್ತಿಯ ಕೇಂದ್ರವಾಗಲಿ : ಡಾ. ನವೀನ್ ಚಂದ್ರ ಶೆಟ್ಟಿ

    • By admin
    • June 16, 2026
    • 21 views
    ದೇವಸ್ಥಾನಗಳು ಭಜನೆ, ಸಂಸ್ಕಾರ ಮತ್ತು ಭಕ್ತಿಯ ಕೇಂದ್ರವಾಗಲಿ : ಡಾ. ನವೀನ್ ಚಂದ್ರ ಶೆಟ್ಟಿ

    ಐಸ್ ಹಾಕಿ ರಾಷ್ಟ್ರೀಯ ಚಾಂಪಿಯನ್‌ಶಿಪ್: ಕುತ್ಲೂರಿನ ನಿಷ್ಕ್ ಹರೀಶ್ ಸಾಲಿಯಾನ್‌ಗೆ ರಾಷ್ಟ್ರೀಯ ಬೆಳ್ಳಿ ಪದಕ

    • By admin
    • June 15, 2026
    • 64 views
    ಐಸ್ ಹಾಕಿ ರಾಷ್ಟ್ರೀಯ ಚಾಂಪಿಯನ್‌ಶಿಪ್: ಕುತ್ಲೂರಿನ ನಿಷ್ಕ್ ಹರೀಶ್ ಸಾಲಿಯಾನ್‌ಗೆ ರಾಷ್ಟ್ರೀಯ ಬೆಳ್ಳಿ ಪದಕ

    ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಜಯಕೀರ್ತಿ HB ನಿಧನ

    • By admin
    • June 15, 2026
    • 69 views
    ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಜಯಕೀರ್ತಿ HB ನಿಧನ

    ಬೆಳ್ತಂಗಡಿ ನೂತನ ನ್ಯಾಯಾಲಯ ಸಂಕೀರ್ಣದ ಶಂಕುಸ್ಥಾಪನೆ

    • By admin
    • June 14, 2026
    • 44 views
    ಬೆಳ್ತಂಗಡಿ ನೂತನ ನ್ಯಾಯಾಲಯ ಸಂಕೀರ್ಣದ ಶಂಕುಸ್ಥಾಪನೆ

    ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳ್ತಂಗಡಿ ತಾಲೂಕು ಘಟಕ ರಚನೆ: ನಿಶಾನ್ ಬಂಗೇರ ನಾರ್ಯ ಅಧ್ಯಕ್ಷರಾಗಿ ಆಯ್ಕೆ

    • By admin
    • June 13, 2026
    • 82 views
    ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಳ್ತಂಗಡಿ ತಾಲೂಕು ಘಟಕ ರಚನೆ: ನಿಶಾನ್ ಬಂಗೇರ ನಾರ್ಯ ಅಧ್ಯಕ್ಷರಾಗಿ ಆಯ್ಕೆ