ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡಲು ಮುಂದಾಯಿತೇ ರಾಜ್ಯ ಸರಕಾರ! ಆಹಾರ ಸಚಿವರೇ ಬಿಪಿಎಲ್ ಕಾರ್ಡ್ ದಾರರಿಗೆ ಬೈಕ್, ಟಿ.ವಿ, ಪ್ರೀಡ್ಜ್ ಖರೀದಿಸುವಷ್ಟು ಅರ್ಹತೆ ಇಲ್ಲವೇ! ಬಿಪಿಎಲ್ ಕಾರ್ಡು ರದ್ದತಿಯ ವರಸೆಯ ಹಿಂದಿರುವ ಜಾಣಕುರುಡುತನ ಎಂತಹದ್ದು!

ಬೆಳಗಾವಿ: ಮನೆಯಲ್ಲಿ ಟಿ.ವಿ, ಬೈಕು, ಫ್ರಿಡ್ಜ್‌ ಇದ್ದರೆ ಬಿಪಿಎಲ್‌ ಪಡಿತರ ಚೀಟಿ ರದ್ದುಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್‌ ಕತ್ತಿ ಹೇಳಿದ್ದಾರೆ.

ರಾಜ್ಯ ಸರಕಾರವು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡಲು ಮುಂದಾಯಿತೇ ಎಂಬ ಅನುಮಾನ ಕಾಡುತ್ತಿದೆ. ಆಹಾರ ಸಚಿವರೇ ಬಿಪಿಎಲ್ ಕಾರ್ಡ್ ದಾರರಿಗೆ ಬೈಕ್, ಟಿ.ವಿ, ಪ್ರೀಡ್ಜ್ ಖರೀದಿಸುವಷ್ಟು ಅರ್ಹತೆ, ಯೋಗ್ಯತೆ ಇಲ್ಲವೇ! ಸಾಲ ಮಾಡಿ ತುಪ್ಪತಿನ್ನು ಎಂಬಂತೆ ಬಡ ಜನರು ದುಡಿಮೆ ಮಾಡಿದ ಅಲ್ಪ ಸ್ವಲ್ಪ ಹಣವನ್ನು ಸಂಗ್ರಹಿಸಿ ಸಂಘ ,ಬ್ಯಾಂಕ್ ಗಳ ಹಾಗೂ ಲೇವಾದೇವಿಯವರಿಂದ ಸಾಲ ಪಡೆದು ತನ್ನ ಮನೆಗೆ ಬೇಕಾದ ಅಗತ್ಯ ವಸ್ತು ಖರೀದಿಸಿದರೇ ಇದನ್ನೇ ಬಂಡವಾಳವನ್ನಾಗಿಸಿ ಬಿಪಿಎಲ್ ಕಾರ್ಡು ರದ್ದು ಮಾಡಲು ಮುಂದಾಗಿದ್ದೀರಿ ಈ ಬಿಪಿಎಲ್ ಕಾರ್ಡು ರದ್ದತಿಯ ವರಸೆಯ ಹಿಂದಿರುವ ಜಾಣಕುರುಡುತನ ಎಂತಹದ್ದು ಎಂಬುದನ್ನು ಸಮಸ್ತ ಕನ್ನಡಿಗರಿಗೆ ತಾವು ತಿಳಿಯ ಪಡಿಸಬೇಕಾಗಿದೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮನೆಯಲ್ಲಿ ಬೈಕ್‌, ಟೀವಿ, ಫ್ರಿಡ್ಜ್‌ ಇದ್ದವರ ಪಡಿತರ ಚೀಟಿ ರದ್ದು ಮಾಡಲಾಗುವುದು.

ಇಂಥವರಿಗೆ ತಮ್ಮ ಬಿಪಿಎಲ್‌ ಕಾರ್ಡ್‌ ಹಿಂದಿರುಗಿಸಲು ಮಾರ್ಚ್‌‌ ಅಂತ್ಯದ ವರೆಗೆ ಸಮಯ ನೀಡಲಾಗುತ್ತದೆ ಎಂದು ಕತ್ತಿ ಹೇಳಿದ್ದಾರೆ.

ಪಡಿತರದಲ್ಲಿ ರಾಗಿ, ಜೋಳ ವಿತರಿಸುವಂತೆ ಕೇಂದ್ರ ಸಚಿವರಿಗೆ ಉಮೇಶ್‌ ಕತ್ತಿ ಮನವಿ ಮಾಡಿದ್ದಾರೆ.

ಏಪ್ರಿಲ್‌ ಬಳಿಕ ಸರ್ಕಾರ ಕಾರ್ಡ್‌ದಾರರ ಪರಿಶೀಲನೆ ನಡೆಸಲಿದ್ದು, ಒಂದು ವೇಳೆ ಎಲ್ಲಾ ಸೌಲಭ್ಯ ಇದ್ದು ಬಿಪಿಎಲ್‌ ಕಾರ್ಡ್‌ ಹೊಂದಿದ್ದು ಗೊತ್ತಾದರೆ ಅಂಥವರಿಗೆ ದಂಡದ ಜತೆ ಶಿಕ್ಷೆಯೂ ನೀಡಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ಅರೆ ಸರ್ಕಾರಿ ಅಧಿಕಾರಿಗಳು, 1.20 ಲಕ್ಷ ರೂಪಾಯಿ ಆದಾಯ, ಐದು ಎಕರೆಗಿಂತ ಹೆಚ್ಚಿನ ಜಮೀನು ಇರುವವರು ಬಿಪಿಎಲ್‌ ಕಾರ್ಡ್‌ ಹೊಂದಿರಲು ಸಾಧ್ಯವೇ ಇಲ್ಲ.

ಅದರೂ ಕೆಲ ಅಧಿಕಾರಿಗಳು ಬಿಪಿಎಲ್ ಕಾರ್ಡ್‌ ಹೊಂದಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ. ಹೀಗಾಗಿ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದ್ದು, ಮಾರ್ಚ್ ಅಂತ್ಯದವರೆಗೆ ಸ್ವಯಂ ಪ್ರೇರಿತವಾಗಿ ಬಿಪಿಎಲ್‌ ಕಾರ್ಡ್‌ ಸರ್ಕಾರಕ್ಕೆ ಹಿಂದಿರುಗಿಸಲು ಸೂಚನೆ ನೀಡಲಾಗಿದೆ.

ಇದಾದ ಬಳಿಕ ಖುದ್ದು ಸರ್ಕಾರವೇ ಸರ್ವೇ ನಡೆಸಿ ಇಂಥವರ ಪತ್ತೆ ಹಚ್ಚಲಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಏಪ್ರಿಲ್‌ ತಿಂಗಳಿನಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಅಕ್ಕಿ ಜತೆ ಜೋಳ ಹಾಗೂ ದಕ್ಷಿಣದ ಜಿಲ್ಲೆಗಳಿಗೆ ಅಕ್ಕಿ ಜತೆ ರಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕತ್ತಿ ಹೇಳಿದ್ದಾರೆ. ಅಲ್ಲದೇ ಈ ಬಗ್ಗೆ ಕೇಂದ್ರ ಸಚಿವರ ಬಳಿ ಚರ್ಚೆ ನಡೆಸಲಾಗುವುದು ಎಂದು ಹೇಳಿದ್ದಾರೆ.

Spread the love
  • Related Posts

    ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಚಿತ ನರ್ಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

    ಉಜಿರೆ: ಬೆಳ್ತಂಗಡಿ ತಾಲೂಕಿನ ಉಜಿರೆಯ ಬೆನಕ ಹೆಲ್ತ್ ಸೆಂಟರ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನಲ್ಲಿ ಪಿಯುಸಿ ವಿದ್ಯಾಭ್ಯಾಸ ಮುಗಿಸಿದ ಯುವತಿಯರಿಗೆ ಉಚಿತವಾಗಿ ತರಬೇತಿಯೊಂದಿಗೆ ಉದ್ಯೋಗಾವಕಾಶ ಪಡೆಯುವ ಸುವರ್ಣಾವಕಾಶವನ್ನು ಕಲ್ಪಿಸಲಾಗಿದೆ. NABH ಪುರಸ್ಕೃತ ಬೆನಕ ಹೆಲ್ತ್ ಸೆಂಟರ್ ನಲ್ಲಿ 2ವರ್ಷದ ANM ತರಬೇತಿಯನ್ನು…

    Spread the love

    ವಾಹನ ಸವಾರರೇ ಗಮನಿಸಿ HSRP ನಂಬರ್ ಪ್ಲೇಟ್ ಆಳವಡಿಸದೇ ಇದ್ದಲ್ಲಿ ಸೆ.16ರಿಂದ ದಂಡ ಫಿಕ್ಸ್

    Bangalore: ರಾಜ್ಯದಲ್ಲಿ ಎಚ್ಎಸ್ಆರ್ಪಿ ಅಳವಡಿಸಲು ಸೆಪ್ಟೆಂಬರ್ 15ರವರೆಗೆ ಅವಕಾಶ ನೀಡಲಾಗಿದೆ. HSRP ಗಳನ್ನು ಪಡೆಯದ ವಾಹನ ಮಾಲೀಕರು ಸೆ.16 ರಿಂದ ದಂಡವನ್ನು ಪಾವತಿಸಬೇಕಾಗಬಹುದು ಅಥವಾ ಇತರ ದಂಡದ ಕ್ರಮವನ್ನು ಎದುರಿಸಬೇಕಾಗುತ್ತದೆ. 2019ರ ಏಪ್ರಿಲ್ 1ರ ಮೊದಲು ರಾಜ್ಯದಲ್ಲಿ ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ…

    Spread the love

    You Missed

    2024ರಲ್ಲಿ ಪೂಜಿಸಲ್ಪಟ್ಟ ಗಣಪ

    • By admin
    • September 10, 2024
    • 35 views
    2024ರಲ್ಲಿ  ಪೂಜಿಸಲ್ಪಟ್ಟ ಗಣಪ

    ಗಣಪನಿಗೆ 20 ಕೆಜಿ ಚಿನ್ನದ ಕಿರೀಟ ಕಾಣಿಕೆಯಾಗಿ ನೀಡಿದ ಅನಂತ್ ಅಂಬಾನಿ

    • By admin
    • September 7, 2024
    • 94 views
    ಗಣಪನಿಗೆ 20 ಕೆಜಿ ಚಿನ್ನದ ಕಿರೀಟ ಕಾಣಿಕೆಯಾಗಿ ನೀಡಿದ ಅನಂತ್ ಅಂಬಾನಿ

    ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಚಿತ ನರ್ಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

    • By admin
    • September 4, 2024
    • 215 views
    ಬೆನಕ ಹೆಲ್ತ್ ಸೆಂಟರ್ ನಲ್ಲಿ ಉಚಿತ ನರ್ಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

    ವಾಹನ ಸವಾರರೇ ಗಮನಿಸಿ HSRP ನಂಬರ್ ಪ್ಲೇಟ್ ಆಳವಡಿಸದೇ ಇದ್ದಲ್ಲಿ ಸೆ.16ರಿಂದ ದಂಡ ಫಿಕ್ಸ್

    • By admin
    • September 4, 2024
    • 38 views
    ವಾಹನ ಸವಾರರೇ ಗಮನಿಸಿ HSRP ನಂಬರ್ ಪ್ಲೇಟ್ ಆಳವಡಿಸದೇ ಇದ್ದಲ್ಲಿ ಸೆ.16ರಿಂದ ದಂಡ ಫಿಕ್ಸ್

    ಸ್ಮಾರ್ಟ್ ಫೋನ್ ಬಳಕೆಗೂ ಮಿದುಳಿನ ಕ್ಯಾನ್ಸರ್ ಗೂ ಯಾವುದೇ ಸಂಬಂಧವಿಲ್ಲ: WHO ಸ್ಪಷ್ಟನೆ

    • By admin
    • September 4, 2024
    • 28 views
    ಸ್ಮಾರ್ಟ್ ಫೋನ್ ಬಳಕೆಗೂ ಮಿದುಳಿನ ಕ್ಯಾನ್ಸರ್ ಗೂ ಯಾವುದೇ ಸಂಬಂಧವಿಲ್ಲ: WHO ಸ್ಪಷ್ಟನೆ

    ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ, ಶರದ್ ಗೆ ಬೆಳ್ಳಿ ಮರಿಯಪ್ಪನ್ ಗೆ ಕಂಚಿನ ಪದಕ

    • By admin
    • September 4, 2024
    • 24 views
    ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೆರಡು ಪದಕ, ಶರದ್ ಗೆ ಬೆಳ್ಳಿ ಮರಿಯಪ್ಪನ್ ಗೆ ಕಂಚಿನ ಪದಕ