ಬ್ರೆಜಿಲ್: ಲಘು ವಿಮಾನವೊಂದು ಟೇಕ್ ಆಫ್ ವೇಳೆ ನಡೆದ ದುರಂತದಲ್ಲಿ ನಾಲ್ವರು ಪುಟ್ಬಾಲ್ ಆಟಗಾರರು ಸಾವಪ್ಪಿರುವ ಘಟನೆ ಬ್ರೆಜಿಲ್ ನ ಸಾವೋಪೋಲೋದಲ್ಲಿ ನಡೆದಿದೆ.
ಪಲ್ಮಾಸ್ ಕ್ಲಬ್ ಅಧ್ಯಕ್ಷ ಲೂಕಾಸ್ ಮೇರಾ, ಆಟಗಾರರಾದ ಲೂಕಾಸ್ ಪ್ರಕ್ಸಿಡಿಸ್, ಗುಲೆರ್ಮೆ ನೊಯೆ, ರಣುಲ್, ಮಾರ್ಕಸ್ ಮೋಲಿನರಿ ಹಾಗೂ ವಿಮಾನದ ಪೈಲೆಟ್ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಬ್ರೆಜಿಲಿಯನ್ ಕಪ್ ಟೂರ್ನಿಯ ಪಂದ್ಯದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಪುಟ್ಬಾಲ್ ಆಟಗಾರರಿದ್ದ ಲಘು ವಿಮಾನ ಟೇಕ್ ಆಫ್ ಸಂದರ್ಭದಲ್ಲಿ ಅಪಘಾತಕ್ಕೆ ಈಡಾಗಿದೆ. ದುರಂತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.