ಕಾರವಾರ: ಮೀನುಗಾರಿಕೆಗೆ ತೆರಳಿದ್ದ ತೆರಳಿದ್ದ ಬೋಟ್ ನ ತಳಭಾಗದಲ್ಲಿ ಫೈಬರ್ ಒಡೆದು ಸಮುದ್ರದಲ್ಲಿ ಮುಳುಗುತ್ತಿರುವ ಎಂಟು ಮೀನುಗಾರರನ್ನು ಇಂದು ರಾತ್ರಿ ಕರಾವಳಿ ಕಾವಲುಪಡೆ ಪೊಲೀಸರು ಹಾಗೂ ಇಂಡಿಯನ್ ಕೋಸ್ಟ್ ಗಾರ್ಡ ಸಿಬ್ಬಂದಿ ರಕ್ಷಿಸಿದ ಘಟನೆ ನೆಡೆದಿದೆ.
ಉಡುಪಿಯ ಮಲ್ಪೆ ಮೂಲದ ಶ್ರೀ ಸೌಪರ್ಣಿಕ ಎಂಬ ಹೆಸರಿನ ಬೋಟ್ ಇದಾಗಿದ್ದು ಇಂದು ಮೀನುಗಾರಿಕೆಗೆ ಕಾರವಾರ ಭಾಗದ ಅರಬ್ಬಿ ಸಮುದ್ರಕ್ಕೆ ತೆರಳಿತ್ತು. ಈ ವೇಳೆ ತಳಭಾಗದಲ್ಲಿ ಫೈಬರ್ ಒಡೆದು ಹೋಗಿದ್ದು ಬೋಟ್ ಮುಳುಗುವ ಹಂತ ತಲುಪಿತ್ತು. ಈ ವೇಳೆ ಬೋಟ್ ನಲ್ಲಿದ್ದ ಮೀನುಗಾರರು ರಕ್ಷಣೆಗಾಗಿ ಕರಾವಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಕರಾವಳಿ ಕಾವಲು ಪಡೆಯ ನಿಶ್ಚಲ್ ಕುಮಾರ್ ಹಾಗೂ ಇಂಡಿಯನ್ ಕೋಸ್ಟ್ ಗಾರ್ಡ ನ ಅಸಿಟೆಂಟ್ ಕಮಾಂಡೆಂಟ್ ಶಶಾಂಕ್ ಕುಮಾರ್ ರವರ ತಂಡ ಬೋಟ್ ಹಾಗೂ ಅದರಲ್ಲಿದ್ದ ಎಂಟು ಜನ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.