ಕ್ಯಾನ್ಸರ್ ನಿಂದ ಬಳಲುತ್ತಿರುವ ಬಡ ಕುಟುಂಬಕ್ಕೆ ಬೇಕಾಗಿದೆ ತಮ್ಮ ನೆರವಿನ ಆಸರೆ

ಜೀವನದಲ್ಲಿ ಭರವಸೆ ಕಳೆದುಕೊಂಡವರಿಗೆ ಉತ್ಸಾಹದ ಚಿಲುಮೆಯನ್ನು ಉಕ್ಕಿಸಬಲ್ಲ, ನೊಂದ ಜೀವಗಳ ಬೆನ್ನಿಗೆ ನಿಂತು ಸಾಂತ್ವನ ನೀಡಬಲ್ಲ, ನೆಮ್ಮದಿಯ ಬದುಕಿನ ಬಗ್ಗೆ ಒಲವು ಮೂಡಿಸಬಲ್ಲ, ಮನದಾಳದಿಂದ ಬಾರದ ಸಾವಿರ ಸಾವಿರ ಸಾಂತ್ವನ ನುಡಿ ಅಥವಾ ನಿಧಿಗಿಂತಲೂ ಭರವಸೆಯ ಬೆಳಕಿನ ಸ್ಪರ್ಶ ನೀಡಬಲ್ಲ ಕೆಲವೇ ಕೆಲವು ಜನರ ಸಾಂತ್ವನ ನುಡಿ ಅಥವಾ ನಿಧಿ ಬಹಳ ಪ್ರಮುಖವೆನಿಸುತ್ತದೆ.


ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಕೊಂಬಿನಡ್ಕ ಮನೆ ಶ್ರೀ ಜಯಂತ ಪೂಜಾರಿಯವರು ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ ಎನ್ನುವ ಮಾರಕ ರೋಗಕ್ಕೆ ತುತ್ತಾಗಿ ಜೀವನ್ಮರಣದ ನಡುವೆ ಹೋರಾಟದ ಸ್ಥಿತಿಯಲ್ಲಿದ್ದಾರೆ. ಬದುಕಿನ ರಥ ಎಳೆಯಲು ತನ್ನ ಜೀವನೋಪಾಯಕ್ಕಾಗಿ ಗಾರೆ ಕೆಲಸ ಮಾಡುತ್ತಾ ಬಂದಿರುವ ಆದಾಯದಲ್ಲಿ ಹೆಂಡತಿ ವಸಂತಿ ಹಾಗೂ ತನ್ನ ಐದು ವರ್ಷದ ಮಗ ಮತ್ತು ಒಂದುವರೆ ವರ್ಷದ ಹೆಣ್ಣು ಮಗಳೊಂದಿಗೆ ಸುಖವಾಗಿ ಜೀವನ ಸಾಗಿಸುತ್ತಿದ್ದ ಈ ದಂಪತಿಗಳ ಬದುಕಿನಲ್ಲಿ ಬರಸಿಡಿಲಿನಂತೆ ಬಂದಪ್ಪಳಿಸಿದ ಮಹಾಮಾರಿಯೇ ಕ್ಯಾನ್ಸರ್ ಎನ್ನುವ ಮಾರಕ ಕಾಯಿಲೆ.

ಈ ಸಂಕಷ್ಟದ ವಿರುದ್ದ ಹೋರಾಡಲು‌ ಕಳೆದ ಎರಡು ವರ್ಷಗಳಿಂದ ಸಾಲಶೂಲ ಮಾಡಿ, ಸಂಬಂಧಿಕರಿಂದ, ದಾನಿಗಳಿಂದ ಸಹಾಯ ಪಡೆದು ಆರು ಲಕ್ಷಕ್ಕಿಂತಲೂ ಹೆಚ್ಚು ಚಿಕಿತ್ಸೆಗಾಗಿ ಖರ್ಚು ಮಾಡಿದ್ದಾರೆ. ಇಷ್ಟಾದರೂ ವಿಷಮಪರಿಸ್ಥಿತಿಯ ಕೈಗೊಂಬೆಯಾಗಿರುವ ಈ ಕುಟುಂಬಕ್ಕೆ ಮುಂದಿನ ಚಿಕಿತ್ಸೆಗೆ ಹಾಗೂ ಜೀವನೋಪಾಯಕ್ಕಾಗಿ ಹಣ ಹೊಂದಿಸಲಾಗದೇ ಕೈಚೆಲ್ಲಿ ಕುಳಿತಿದೆ ಈ ಕುಟುಂಬ. ಪತ್ನಿ ಬೀಡಿ ಕಟ್ಟಿ ಬಂದಿರುವ ಆದಾಯವು ಸಾಕಾಗದೇ ಮುಂದೇನು ಮಾಡಬೇಕೆನ್ನುವ ದಾರಿ ತೋಚದೇ ಕಂಗಲಾಗಿದ್ದಾರೆ.

ಪ್ರಸ್ತುತ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ವಾರಕ್ಕೊಮ್ಮೆ ಚಿಕಿತ್ಸೆಗೆ ಹೋಗಿ ಬರಲು ಪ್ರಯಾಣ ವೆಚ್ಚಕ್ಕೂ ಹಣದ ಕೊರತೆಯಾಗಿದೆ. ಇದೀಗ ಕೊಂಬಿನಡ್ಕ ಜಯಂತ ಪೂಜಾರಿಯವರಿಗೆ ಸಾವಿರಾರು ಸಹೃದಯ ಗೆಳೆಯರ ನೆರವಿನ ಆಸರೆ ಬೇಕಾಗಿದೆ.
ನಮ್ಮ ಕೈಲಾದ ನೆರವನ್ನು ನೊಂದ ಕುಟುಂಬಕ್ಕೆ ನೀಡಿ ಜಯಂತರ ಚಿಕಿತ್ಸೆಗೆ ನೆರವಾಗೋಣ.

ಸಹಾಯಧನ ಮಾಡಲಿಚ್ಛಿಸುವವರು ಈ ಕೆಳಗಿನ ಬ್ಯಾಂಕ್ ಖಾತೆ ಸಂಖ್ಯೆಗೆ ಜಮಾಗೊಳಿಸಬಹುದು

ಬ್ಯಾಂಕ್: ಸಿಂಡಿಕೇಟ್ ಬ್ಯಾಂಕ್ ಬಂಗಾಡಿ
A/c No : 01982200037445
IFSC Code : SYNB 000O198

ಜಯಂತ S/o ಗಿರಿಯಪ್ಪ ಪೂಜಾರಿ
ದೂ.ಸಂಖ್ಯೆ : 9900785019

Spread the love
  • Related Posts

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಮಂಗಳೂರು: ಬಾರಿ ಮಳೆ ಹಿನ್ನೆಲೆಯಲ್ಲಿ 30/08/2025ನೇ ಶುಕ್ರವಾರ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಡಳಿತ ಆದೇಶವನ್ನು ಹೊರಡಿಸಿದೆ. Spread the love

    Spread the love

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಸಕಲೇಶಪುರ: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾನುಬಾಳು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಸಕಲೇಶಪುರ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಉಚಿತ ಟೈಲರಿಂಗ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪರಮ ಪೂಜ್ಯ ಶ್ರೀ ಡಾ.ಡಿ ವಿರೇಂದ್ರ…

    Spread the love

    You Missed

    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    • By admin
    • August 29, 2025
    • 286 views
    ದ.ಕ ಜಿಲ್ಲೆಯಲ್ಲಿ ಮುಂದುವರಿದ ಮಳೆ ಹಿನ್ನೆಲೆ ಆಗಸ್ಟ್ 30 ಪ್ರಾಥಮಿಕ ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    • By admin
    • August 29, 2025
    • 47 views
    ಉಚಿತ ಟೈಲರಿಂಗ್ ತರಬೇತಿ ಉದ್ಘಾಟನೆ

    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    • By admin
    • August 28, 2025
    • 319 views
    ಬಾರಿ ಮಳೆ ಹಿನ್ನೆಲೆಯಲ್ಲಿ ನಾಳೆ ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ,PUಕಾಲೇಜಿಗೆ ರಜೆ ಘೋಷಣೆ

    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    • By admin
    • August 28, 2025
    • 55 views
    ಬೆಳ್ತಂಗಡಿ ತಾಲೂಕಿನ ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗೆ ರಜೆ ಘೋಷಣೆ

    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    • By admin
    • August 27, 2025
    • 113 views
    ನಾಡಿನ ವಿವಿಧೆಡೆ ಗಣೇಶೋತ್ಸವದ ಸಂಭ್ರಮ ಸಡಗರ ಒಂದೆಡೆ ವೀಕ್ಷಿಸಿ ಹಲವು ಗಣಪ

    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ ಆಯ್ಕೆ

    • By admin
    • August 25, 2025
    • 52 views
    ಶ್ರೀ ಮಹಾಗಣಪತಿ ದೇವಸ್ಥಾನ ಸುಂಕದ ಕಟ್ಟೆ ಅಳದಂಗಡಿ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಶಶಿಧರ ಡೋಂಗ್ರೆ  ಆಯ್ಕೆ