ಅಂಕೋಲಾ: ಕೇಂದ್ರ ಸಚಿವ ಶ್ರೀಪಾದ ನಾಯಕ್ ಕಾರು ಅಂಕೋಲಾ ಬಳಿ ಪಲ್ಟಿಯಾಗಿದ್ದು, ಅವರ ಪತ್ನಿ ಮೃತರಾಗಿದ್ದಾರೆ.
ಕೇಂದ್ರ ಆಯುಷ್ ಮತ್ತು ರಕ್ಷಣಾ ಖಾತೆ ಸಹಾಯಕ ಸಚಿವರು ಸಂಚರಿಸುತ್ತಿದ್ದ ಕಾರು ಅಂಕೋಲಾ ತಾಲೂಕಿನ ಎಕ್ಕಂಬಿ ಬಳಿ ಅಪಘಾತ ಘಟನೆ ನಡೆದಿದ್ದು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ನಾಯಕ್ ಅವರ ಪತ್ನಿ ವಿಜಯಾ ನಾಯಕ್ ಮೃತರಾಗಿದ್ದಾರೆ.
ಗೋಕರ್ಣಕ್ಕೆ ತೆರಳುವಾಗು ಈ ಅವಘಡ ಸಂಭವಿಸಿದ್ದು ಗೋವಾ ಮೂಲದವರಾಗಿರುವ ಶ್ರೀಪಾದ ನಾಯಕ್ ಅವರು ಪತ್ನಿಯೊಂದಿಗೆ ತೆರಳುತ್ತಿರುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು ಗಂಭೀರ ಗಾಯಗೊಂಡಿದ್ದ ಪತ್ನಿ, ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ದೀಪಕ್ ರಾಮದಾದ ಗೂಮೆ ಸಾವಿಗೀಡಾಗಿದ್ದಾರೆ. ಶ್ರೀಪಾದ ನಾಯಕ್ ರವರೂ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.